ವಿಶ್ವ 10K ಮ್ಯಾರಥಾನ್: ಮಾರ್ಗ ಸೂಚಿ ಅನಾವರಣ!
ಬೆಂಗಳೂರು 10K ಮ್ಯಾರಥಾನ್ ಓಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ.19 ರಂದು ಜನಪ್ರಿಯ ಮ್ಯಾರಥಾನ್ ಓಟಕ್ಕೆ ಚಾಲನೆ ಸಿಗಲಿದೆ. ಓಟದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು(ಮೇ.16): ಮೇ 19 ರಂದು ನಡೆಯಲಿರುವ 12ನೇ ಆವೃತ್ತಿಯ ವಿಶ್ವ 10K ಮ್ಯಾರಥಾನ್ ಓಟದ ರಸ್ತೆ ಮಾರ್ಗ ಸೂಚಿಯನ್ನು ಬುಧವಾರ ಬಿಡುಗಡೆ ಮಾಡ ಲಾಯಿತು. ಈ ಬಾರಿ 24,330 ಓಟಗಾರರು ನೋಂದಾಣಿ ಮಾಡಿದ್ದಾರೆ. ಕಂಠೀರವ ಕ್ರೀಡಾಂಗಣ ದಲ್ಲಿ ಓಟ ಆರಂಭವಾಗಿ ಕಸ್ತೂರ ಬಾ ರಸ್ತೆ ಮೂಲಕ ಸಾಗಿ ಎಂ.ಜಿ ರಸ್ತೆ, ಡಿಕೆನ್ಸನ್ ರಸ್ತೆ, ಕಬ್ಬನ್ ಪಾರ್ಕ್, ಚಿನ್ನಸ್ವಾಮಿ ಕ್ರೀಡಾಂಗಣ, ವಿಧಾನ ಸೌಧದ ಮುಂಬಾಗ ಹಾದು ಮತ್ತೆ ಕಂಠೀರವ ಕ್ರೀಡಾಂಗಣದಲ್ಲಿ ಕೊನೆ ಗೊಳ್ಳಲಿದೆ.
ಇದನ್ನೂ ಓದಿ: 10K ಓಟದ ಫಿನಿಶರ್ಸ್ ಟೀ ಶರ್ಟ್ ಅನಾವರಣ
ವಿಶ್ವ 10ಕೆ ಓಟ 5 ವಿಭಾಗಗಳಲ್ಲಿ ನಡೆಯ ಲಿದೆ. ಓಪನ್ 10ಕೆ ಬೆಳಗ್ಗೆ 5.30ಕ್ಕೆ ಪುರುಷರ ವಿಶ್ವ 10K 8.50ಕ್ಕೆ ಮುಕ್ತಾಯಗೊಳ್ಳಲಿದೆ. ಓಟದ ದಿನದಂದು ಫೋರ್ಟಿಸ್ ಆಸ್ಪತ್ರೆಯ 30 ವೈದ್ಯರ ತಂಡ ಶುಶ್ರೂಷೆ ಮಾಡಲಿದೆ.