10K ಓಟದ ಫಿನಿಶರ್ಸ್ ಟೀ ಶರ್ಟ್ ಅನಾವರಣ
ಮೇ 19ರಂದು ಕಂಠೀರವ ಕ್ರೀಡಾಂಗಣದಲ್ಲಿ ವಿಶ್ವ 10ಕೆ ಮ್ಯಾರಥಾನ್ ಓಟ ನಡೆಯಲಿದೆ. ಈ ಟೂರ್ನಿ ಆರಂಭಕ್ಕೂ ಮುನ್ನ ಆಯೋಜಕರು ’ಫಿನಿಶರ್ಸ್ ಡೇ ಟೀಶರ್ಟ್’ ಅನಾವರಣ ಮಾಡಿದರು.
ಬೆಂಗಳೂರು(ಮೇ.08): ಟೋಕಿಯೊ ಒಲಿಂಪಿಕ್‌ಗೆ ನಿಗದಿಪಡಿಸಲಾಗಿರುವ ಅರ್ಹತಾ ಮಾನದಂಡ ಪೂರೈಸಲು ಮುಂಬರುವ ಅರ್ಹತಾ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಕಾರ್ಯಪ್ರವೃತ್ತ ವಾಗಿದ್ದೇನೆ ಎಂದು 800ಮೀ. ಮತ್ತು 1500 ಮೀ. ಓಟದ ರಾಷ್ಟ್ರೀಯ ದಾಖಲೆ ಒಡೆಯ ಭಾರತದ ಜಿನ್ಸನ್ ಜಾನ್ಸನ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ವಿಶ್ವ 10ಕೆ ‘ಫಿನಿಶರ್ಸ್ ಡೇ ಟೀಶರ್ಟ್’ ಅನ್ನು ಆಸಿಕ್ಸ್ ಮತ್ತು ಪ್ರೋಕ್ಯಾಮ್ ಜತೆಗೂಡಿ ಅನಾವರಣಗೊಳಿಸಿ ಮಾತನಾಡಿದ ಅರ್ಜುನ ಪ್ರಶಸ್ತಿ ವಿಜೇತ ಜಿನ್ಸನ್, ಮುಂಬರುವ ಅರ್ಹತಾ ಸುತ್ತುಗಳ ಟೂರ್ನಿಗಳಲ್ಲಿ 2020ರ ಒಲಿಂಪಿಕ್ಸ್‌ಗೆ ನಿಗದಿಪಡಿಸಲಾಗಿರುವ ಮಾನದಂಡ ಪೂರೈಸಲು ಎದುರು ನೋಡುತ್ತಿದ್ದೇನೆ.’’ ಎಂದು ಹೇಳಿದ್ದಾರೆ.
ಇದೇ ತಿಂಗಳ 19ರಂದು ಕಂಠೀರವ ಕ್ರೀಡಾಂಗಣದಲ್ಲಿ ವಿಶ್ವ 10ಕೆ ಮ್ಯಾರಥಾನ್ ಓಟ ನಡೆಯಲಿದೆ.