ಇಂಗ್ಲೆಂಡ್ ಗೆಲುವಿನ ಸನೀಹ ಬಂದಾಗ ಮಳೆ ಶುರುವಾಗಿದ್ದರಿಂದ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಇಂಗ್ಲೆಂಡ್ ತಂಡವು 40 ರನ್'ಗಳ ಗೆಲುವು ಸಾಧಿಸಿತು.
ಲಂಡನ್(ಜೂ.10): ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ನಾಯಕ ಇಯಾನ್ ಮಾರ್ಗನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧ 40 ರನ್'ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಇಯಾನ್ ಮಾರ್ಗನ್ ಪಡೆ ಅಜೇಯವಾಗಿ ಸೆಮಿಫೈನಲ್ ತಲುಪಿದರೆ, ಆಸ್ಟ್ರೇಲಿಯಾ ತಂಡ ಒಂದೂ ಜಯ ಸಾಧಿಸದೇ ಟೂರ್ನಿಯಿಂದ ಹೊರಬಿದ್ದಿದೆ.
ಆಸ್ಟ್ರೇಲಿಯಾ ನೀಡಿದ ಸವಾಲಿನ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ತಂಡ ಜೋಸ್ ಹ್ಯಾಜಲ್'ವುಡ್ ಮಾರಕ ಬೌಲಿಂಗ್'ಗೆ ಆರಂಭದಲ್ಲೇ ಮುಗ್ಗರಿಸಿತು. ಆದರೆ ನಾಯಕ ಇಯಾನ್ ಮಾರ್ಗನ್(87) ಹಾಗೂ ಬೆನ್ ಸ್ಟೋಕ್ಸ್(102*) ಬ್ಯಾಟಿಂಗ್ ನೆರವಿನಿಂದ ಭರ್ಜರಿ ಜಯ ದಾಖಲಿಸಿದೆ. ಇಂಗ್ಲೆಂಡ್ ಗೆಲುವಿನ ಸನೀಹ ಬಂದಾಗ ಮಳೆ ಶುರುವಾಗಿದ್ದರಿಂದ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಇಂಗ್ಲೆಂಡ್ ತಂಡವು 40 ರನ್'ಗಳ ಗೆಲುವು ಸಾಧಿಸಿತು.
ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದರೆ, ಬಾಂಗ್ಲಾದೇಶ ಇದೇ ಮೊದಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ ತಲುಪಿ ದಾಖಲೆ ಬರೆಯಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಆ್ಯರೋನ್ ಫಿಂಚ್(68), ನಾಯಕ ಸ್ಟೀವ್ ಸ್ಮಿತ್(56) ಹಾಗೂ ತ್ರಾವಿಸ್ ಹೆಡ್(71*) ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್'ಗಳಲ್ಲಿ 9 ವಿಕೆಟ್ ನಷ್ಟಕ್ಕೆ 277ರನ್ ದಾಖಲಿಸಿತ್ತು.
ಇಂಗ್ಲೆಂಡ್ ಪರ ಮಾರ್ಕ್ ವುಡ್ ಹಾಗೂ ಆದಿಲ್ ರಶೀದ್ ತಲಾ 4 ವಿಕೆಟ್ ಪಡೆದರೆ, ಬೆನ್ ಸ್ಟೋಕ್ಸ್ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 277/9
ತ್ರಾವಿಸ್ ಹೆಡ್ :71*
ಆ್ಯರೋನ್ ಫಿಂಚ್ :68
ಮಾರ್ಕ್ ವುಡ್: 33/4
ಇಂಗ್ಲೆಂಡ್ : 240/4
ಬೆನ್ ಸ್ಟೋಕ್ಸ್ :102*
ಇಯಾನ್ ಮಾರ್ಗನ್ : 87
ಜೋಸ್ ಹ್ಯಾಜಲ್'ವುಡ್ : 50/2
