ಅಮೆರಿಕದ ‘ನ್ಯೂ ಬ್ಯಾಲೆನ್ಸ್’ ಕ್ರೀಡಾ ಉತ್ಪನ್ನಗಳ ಸಂಸ್ಥೆ, ಸ್ಟೋಕ್ಸ್ ಜತೆ ಮಾಡಿಕೊಂಡಿದ್ದ ಪ್ರಾಯೋಜಕತ್ವದ ಒಪ್ಪಂದವನ್ನು ರದ್ದುಗೊಳಿಸಿದೆ.

ಲಂಡನ್(ಅ.13): ಸದ್ಯ ಇಂಗ್ಲೆಂಡ್ ರಾಷ್ಟ್ರೀಯ ತಂಡದಿಂದ ವಜಾಗೊಂಡು, ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಆ್ಯಷಸ್ ಸರಣಿಯಿಂದ ಹೊರ ಬಿದ್ದಿರುವ ಇಂಗ್ಲೆಂಡ್‌'ನ ಆಲ್ರೌಂಡರ್ ಬೆನ್ ಸ್ಟೋಕ್ಸ್‌'ಗೆ ಮತ್ತೊಂದು ಆಘಾತ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೆರಿಕದ ‘ನ್ಯೂ ಬ್ಯಾಲೆನ್ಸ್’ ಕ್ರೀಡಾ ಉತ್ಪನ್ನಗಳ ಸಂಸ್ಥೆ, ಸ್ಟೋಕ್ಸ್ ಜತೆ ಮಾಡಿಕೊಂಡಿದ್ದ ಪ್ರಾಯೋಜಕತ್ವದ ಒಪ್ಪಂದವನ್ನು ರದ್ದುಗೊಳಿಸಿದೆ. ಸ್ಟೋಕ್ಸ್‌'ರಿಂದ ಈ ರೀತಿಯ ವರ್ತನೆಯನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ‘ನ್ಯೂ ಬ್ಯಾಲೆನ್ಸ್’ ತಿಳಿಸಿದೆ.

ಬ್ರಿಸ್ಬೆನ್‌'ನಲ್ಲಿ ನೈಟ್‌'ಬಾರ್‌'ವೊಂದರ ಬಳಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸ್ಟೋಕ್ಸ್ ಗುರಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ ಬಿಡುಗಡೆಯಾಗಿದ್ದರು.