ಬಿಯರ್ ಇನ್ನೊಂದು ವಿಧದ ಜ್ಯೂಸ್ ಅಷ್ಟೆ: ಕೋಚ್ ರವಿ ಶಾಸ್ತ್ರಿ

Beer is just juice: Team India coach Ravi Shastri
Highlights

ಐರ್ಲೆಂಡ್ ಟಿ20 ಪಂದ್ಯ ಮುಗಿಸಿರುವ ಭಾರತ ತಂಡ ಇದೀಗ ಇಂಗ್ಲೆಂಡ್ ಸರಣಿಗೆ ಸಜ್ಜಾಗುತ್ತಿದೆ. ಇದರ ನಡಡುವೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಬಿಯರ್ ಕುರಿತ ರೋಚಕ ಕತೆಗಳನ್ನ ಬಿಚ್ಚಿಟ್ಟಿದ್ದಾರೆ. ಬಿಯರ್ ಕುರಿತು ರವಿ ಶಾಸ್ತ್ರಿ ಹೇಳಿದ್ದೇನು? ಇಲ್ಲಿದೆ ವಿವರ.


ಡಬ್ಲಿನ್(ಜೂ.30): ಬಿಯರ್ ಅಂದರೆ ಬಹುತೇಕರ ಕಿವಿ ನೆಟ್ಟಗಾಗುತ್ತದೆ. ಹೆಚ್ಚಿನವರಿಗೆ ಬಿಯರ್ ಇದ್ದರೆ ಬೇರೇನು ಬೇಕಿಲ್ಲ. ಇದೀಗ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೂಡ ಬಿಯರ್ ಪರ ಬ್ಯಾಟಿಂಗ್ ನಡೆಸಿದ್ದಾರೆ.

ಬಿಯರ್ ಇನ್ನೊಂದು ವಿಧದ ಜ್ಯೂಸ್ ಅಷ್ಟೇ ಎಂದು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ನಿರೂಪರ ಗೌರವ್ ಕಪೂರ್ ನಡೆಸಿಕೊಡುವ ಬ್ರೇಕ್ ಫಾಸ್ಟ್ ವಿಥ್ ಚಾಂಪಿಯನ್ಸ್ ಶೋನಲ್ಲಿ ಹೇಳಿದ್ದಾರೆ. 

ಬಿಯರ್ ಜ್ಯೂಸ್ ಎಂದಿರುವ ರವಿ ಶಾಸ್ತ್ರಿ ತಾವು ಎಷ್ಟು ಬಿಯರ್ ಕುಡಿಯುತ್ತಾರೆ ಅನ್ನೋದನ್ನ ಮಾತ್ರ ಬಹಿರಂಗ ಪಡಿಸಿಲ್ಲ. ಆದರೆ ರವಿ ಶಾಸ್ತ್ರಿ ತಂದೆಯೊಂದಿಗೆ ಬಿಯರ್ ಕುಡಿಯುತ್ತಿರುವುದನ್ನ ನೆನೆಪಿಸಿಕೊಂಡಿದ್ದಾರೆ.

ಇದನ್ನು ಓದಿ: ವಾಟರ್ ಬಾಯ್ ಆದ ವಿಶ್ವಚಾಂಪಿಯನ್ ಎಂ ಎಸ್ ಧೋನಿ

ಮಿತವಾಗಿ ಬಿಯರ್ ಕುಡಿಯುವ ರವಿ ಶಾಸ್ತ್ರಿ ಇದೀಗ ಬಿಯರ್ ಜ್ಯೂಸ್ ಎಂದಿರೋದನ್ನ ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕಿಲ್ಲ. ಬಿಯರ್ ಮಿತವಾಗಿ ಬಳಸಿದರೆ ಮಾತ್ರ ಬಿಯರ್ ಜ್ಯೂಸ್, ಇಲ್ಲದಿದ್ದರೆ ಬಿಯರು ಕೂಡ ಆಲ್ಕೋಹಾಲ್ ಆಗಿ ಬದಲಾಗಬಲ್ಲದು.
ಇದನ್ನು ಓದಿ: ಹಾರ್ದಿಕ್ ಪಾಂಡ್ಯಾ ಹೊಸ ಚಿಯರ್‌ಲೀಡರ್ ಯಾರು?

loader