ಐರ್ಲೆಂಡ್ ವಿರುದ್ಧದ 2 ನೇ ಟಿ-ಟ್ವೆಂ ಪಂದ್ಯದಲ್ಲಿ ಎಂ ಎಸ್ ಧೋನಿ ತಂಡದಿಂದ ಹೊರಗುಳಿದಿದ್ದರು. ಪ್ಲೇಯಿಂಗ್ 11ನಲ್ಲಿ ಇಲ್ಲದೆ ಎಂ ಎಸ್ ಧೋನಿ, ಪಂದ್ಯಿಂದ ಹೊರಗುಳಿದು ಮಾಡಿದ್ದೇನು?
ಡಬ್ಲಿನ್(ಜೂ.30): ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ದಾಖಲೆ ಗೆಲುವು ಸಾಧಿಸಿದ ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ಆದಲೆ ಪಂದ್ಯ ಆರರಂಭಕ್ಕೂ ಮೊದಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತವಾಗಿತ್ತು. ತಂಡದಲ್ಲಿ ನೆಚ್ಚಿನ ಕ್ರಿಕೆಟಿಗ ಎಂ ಎಸ್ ಧೋನಿ ಹೆಸರೇ ಇರಲಿಲ್ಲ.
2ನೇ ಚುಟುಕು ಸಮರದಲ್ಲಿ ಎಂ ಎಸ್ ಧೋನಿ ಡಗೌಟ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು. ಪಂದ್ಯದ ಡ್ರಿಂಕ್ಸ್ ಬ್ರೇಕ್ ವೇಳೆ ಎಂ ಎಸ್ ಧೋನಿ ಮೈದಾನದಲ್ಲಿ ಕಾಣಿಸಿಕೊಂಡರು. ಆದರೆ ಈ ಬಾರಿ ಧೋನಿ ವಾಟರ್ ಬಾಯ್ ಆಗಿ ಕಾಣಿಸಿಕೊಂಡರು. ದೊಡ್ಡ ಬ್ಯಾಗ್ ಹಿಡಿದು ಮೈದಾನಕ್ಕಿಳಿದ ಎಂ ಎಸ್ ಧೋನಿ, ಕ್ರೀಸ್‌ನಲ್ಲಿದ್ದ ಸುರೇಶ್ ರೈನಾ ಹಾಗೂ ಕೆಎಲ್ ರಾಹುಲ್‌ಗೆ ನೀರು ನೀಡಿದರು.
ಐಸಿಸಿಯ ಮೂರು ಟ್ರೋಫಿ ಗೆದ್ದ ಏಕೈಕ ನಾಯಕ ಎಂ ಎಸ್ ಧೋನಿ. ಆದರೆ ಧೋನಿ ಅದೆಷ್ಟೇ ಎತ್ತರಕ್ಕೆ ಬೆಳೆದರು ತಮ್ಮ ಸರಳೆಯನ್ನ ಹಾಗೆ ಮುಂದುವರಿಸಿದ್ದಾರೆ. ತಂಡದಿಂದ ಹೊರಗುಳಿದು ಸತಃ ಧೋನಿ ಡ್ರಿಂಕ್ಸ್ ಕಿಟ್ ಹಿಡಿದು ಮೈದಾನಕ್ಕೆ ತೆರಳಿದ ಧೋನಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಪಂದ್ಯದಲ್ಲಿ ಭಾರತ 213 ರನ್ ಸಿಡಿಸಿತ್ತು. ಇಷ್ಟೇ ಅಲ್ಲ 143 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಇತಿಹಾಸ ರಚಿಸಿದೆ. 2 ಟಿ-ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಭಾರತ ಸರಣಿ ವಶಪಡಿಸಿಕೊಂಡಿದೆ.
