ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಹೊಸ ಚಿಯರ್‌ಲೀಡರ್ ಸಿಕ್ಕಿದ್ದಾರೆ. ಪಾಂಡ್ಯ ಸ್ಫೋಟಕ ಪ್ರದರ್ಶನಕ್ಕೆ ನೂತನ ಚಿಯರ್‌ಲೀಡರ್  ಮೆಚ್ಚುಗೆ ವ್ಕಕ್ಯಪಡಿಸಿದ್ದಾರೆ. ಅಷ್ಟಕ್ಕೂ ಹೊಸ ಚಿಯರ್‌ಲೀಡರ್ ಹಾರ್ದಿಕ್ ಪಾಂಡ್ಯಾಗೆ ಹೇಳಿದ್ದೇನು?

ಡಬ್ಲಿನ್(ಜೂ.30): ಐರ್ಲೆಂಡ್ ವಿರುದ್ಧದ ಟಿ20 ಸರಣಿ ಗೆಲ್ಲೋ ಮೂಲಕ ಭಾರತ ಗೆಲುವಿನ ಓಟ ಮುಂದುವರಿಸಿದೆ. 2ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೇವಲ 9 ಎಸೆತದಲ್ಲಿ 32 ರನ್ ಸಿಡಿಸಿದ್ದರು. ಪಾಂಡ್ಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಇದೀಗ ಹೊಸ ಚಿಯರ್‌ಲೀಡರ್ ಚಿಯರ್ ಮಾಡುತ್ತಿರೋ ದೃಶ್ಯ ಬಾರಿ ಜನಪ್ರೀಯವಾಗಿದೆ.

ಅಷ್ಟಕ್ಕೂ ಹಾರ್ದಿಕ್ ಪಾಂಡ್ಯ ಹೊಸ ಚಿಯರ್‌ಲೀಡರ್ ಬೇರೆ ಯಾರು ಅಲ್, ಎಂ ಎಸ್ ಧೋನಿ ಪುತ್ರಿ ಝಿವಾ ಧೋನಿ. ಹಾರ್ಧಿಕ್ ಪಾಂಡ್ಯ ಸ್ಫೋಟಕ ಪ್ರದರ್ಶನ ನಡೆಸುತ್ತಿದ್ದ ವೇಳೆ ಧೋನಿ ಪುತ್ರಿ ಝಿವಾ, ಕಮಾನ್ ಹಾರ್ದಿಕ್ ಎಂದು ಚಿಯರ್‌ಅಪ್ ಮಾಡಿದ್ದಾರೆ.

View post on Instagram

ಹೊಸ ಚಿಯರ್‌ಲೀಡರ್ ಎಂದು ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಂ ತಾಣದಲ್ಲಿ ವಿಡೀಯೋ ಅಪ್‌ಲೋಡ್ ಮಾಡಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿ ಮುಗಿಸಿರುವ ಭಾರತ ಇದೀಗ ಜುಲೈ 3 ರಿಂದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಇಂಗ್ಲೆಂಡ್ ವಿರುದ್ದದ ಸರಣಿಯಲ್ಲೂ ಹಾರ್ದಿಕ್ ಪಾಂಡ್ಯ ಇದೇ ರೀತಿ ಪ್ರದರ್ಶನ ನೀಡಲಿ.