ಐಪಿಎಲ್‌'ನಿಂದ ಬಿಸಿಸಿಐಗೆ ಒಟ್ಟು ₹18,000 ಕೋಟಿ ಆದಾಯ ಹರಿದು ಬರಲಿದ್ದು. ನೂತನ ನಿಯಮದ ಪ್ರಕಾರ ಇದರಲ್ಲಿ ಅರ್ಧದಷ್ಟು ಮೊತ್ತವನ್ನು ಬಿಸಿಸಿಐ, ಐಪಿಎಲ್ ಫ್ರಾಂಚೈಸಿಗಳಿಗೆ ನೀಡಬೇಕಿದೆ.
ಮುಂಬೈ(ಡಿ.03): ಬಿಸಿಸಿಐನ ಆದಾಯ ಬೆಟ್ಟದಷ್ಟಿದ್ದರು, ವಿಶ್ವದ ಶ್ರೀಮಂತ ಕ್ರಿಕೆಟ್ ಬೋರ್ಡ್'ಗೆ ಉಳಿಯುವುದು ಗುಲಗಂಜಿಯಷ್ಟು ಮಾತ್ರ. ಕಳೆದ 10 ವರ್ಷಗಳಿಂದ ಐಪಿಎಲ್'ನಿಂದ ಬಿಸಿಸಿಐಗೆ ಕೋಟಿ ಕೋಟಿ ಆದಾಯ ಬರುವಂತೆ ಕಾಣುತ್ತಿದ್ದರೂ ಅಷ್ಟೇ ಮೊತ್ತದ ವೆಚ್ಚ ಆಗುತ್ತಿದೆ.
ಐಪಿಎಲ್ಗೆ ಸೇರಿದ ವಿವಿಧ ಪ್ರಕರಣಗಳ ಇತ್ಯರ್ಥ, ತೆರಿಗೆ ಪಾವತಿ, ಪರಿಹಾರ ಮೊತ್ತ ನೀಡುವುದು ಸೇರಿದಂತೆ ಈ ವರ್ಷ ₹4,900 ಕೋಟಿ, ಬಿಸಿಸಿಐ ಖಜಾನೆಯಿಂದ ಹರಿದು ಹೋಗಲಿದೆ.
ಐಪಿಎಲ್'ನಿಂದ ಬಿಸಿಸಿಐಗೆ ಒಟ್ಟು ₹18,000 ಕೋಟಿ ಆದಾಯ ಹರಿದು ಬರಲಿದ್ದು. ನೂತನ ನಿಯಮದ ಪ್ರಕಾರ ಇದರಲ್ಲಿ ಅರ್ಧದಷ್ಟು ಮೊತ್ತವನ್ನು ಬಿಸಿಸಿಐ, ಐಪಿಎಲ್ ಫ್ರಾಂಚೈಸಿಗಳಿಗೆ ನೀಡಬೇಕಿದೆ. ಹೀಗಾಗಿ ಬಿಸಿಸಿಐ ಬಳಿ ₹9,000 ಕೋಟಿ ಉಳಿಯಲಿದೆ. ಇದರಲ್ಲಿ ತೆರಿಗೆ, ಪರಿಹಾರ, ಪ್ರಕರಣ ಇತ್ಯರ್ಥ ಹೀಗೆ ಈ ವರ್ಷ ₹4,900 ಕೋಟಿಯನ್ನು ಬಿಸಿಸಿಐ ವೆಚ್ಚ ಮಾಡಲಿದ್ದು, ₹5,100 ಕೋಟಿ ಮಾತ್ರ ಸಿಗಲಿದೆ. ಈ ಮೊತ್ತದಲ್ಲಿ ಐಪಿಎಲ್ ಆಯೋಜನೆ, ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಆರ್ಥಿಕ ನೆರವು ಹಾಗೂ ಇನ್ನಿತರ ಖರ್ಚುಗಳನ್ನು ನೋಡಿಕೊಳ್ಳಬೇಕಿದೆ.
