ಮುಂಬೈ[ಮೇ.03]: ವಿಶ್ವದ ಶ್ರೀಮಂತ, ಜನಪ್ರಿಯ ಟಿ20 ಲೀಗ್‌ ಐಪಿಎಲ್‌ನ ಪ್ರಚಾರಕ್ಕೆ ಬಿಸಿಸಿಐ ತನ್ನ ಬಜೆಟ್‌ನಲ್ಲಿ 50 ಕೋಟಿ ರುಪಾಯಿ ಮೀಸಲಿಟ್ಟಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. 

ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ವಾಹಿನಿ ಟೂರ್ನಿಗೆ ಕೆಲ ತಿಂಗಳು ಬಾಕಿ ಇರುವಂತೆಯೇ ಪ್ರಚಾರ ಕಾರ್ಯ ನಡೆಸಿದರೂ, ಬಿಸಿಸಿಐ ಪ್ರತ್ಯೇಕವಾಗಿ ಪ್ರಚಾರದಲ್ಲಿ ತೊಡಗಲಿದೆ ಎಂದು ವರದಿಯೊಂದು ತಿಳಿಸಿದೆ. ಗ್ರಾಮೀಣ ಭಾಗಗಳಲ್ಲಿ ಪ್ರಚಾರ ನಡೆಸಲು ಹೆಚ್ಚು ಖರ್ಚು ಮಾಡುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ರೆಡಿಯಾದ ಪಂಜಾಬ್‌-ಕೆಕೆಆರ್‌

ಐಪಿಎಲ್ ಪ್ರಚಾರಕ್ಕೆ ಟೀಂ ಇಂಡಿಯಾದ ತಾರಾ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಶಭ್ ಪಂತ್ ಅವರನ್ನು ಬಳಸಿಕೊಂಡು ಸ್ಟಾರ್ ಇಂಡಿಯಾ ಜಾಹಿರಾತು ನೀಡುತ್ತಿದೆ.