Asianet Suvarna News Asianet Suvarna News

ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ರೆಡಿಯಾದ ಪಂಜಾಬ್‌-ಕೆಕೆಆರ್‌

ಕೋಲ್ಕತಾ ನೈಟ್’ರೈಡರ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡದ ಪ್ಲೇ-ಆಫ್‌ ಆಸೆ ಜೀವಂತವಾಗಿ ಉಳಿದುಕೊಳ್ಳಲಿದ್ದು, ಸೋಲುವ ತಂಡ ಬಹುತೇಕ ಹೊರಬೀಳಲಿದೆ. ಎರಡೂ ತಂಡಗಳು 12 ಪಂದ್ಯಗಳನ್ನು ಆಡಿದ್ದು ತಲಾ 10 ಅಂಕ ಪಡೆದಿವೆ. 

IPL 12 Punjab Kolkata clash to stay in playoff race
Author
Mohali, First Published May 3, 2019, 3:02 PM IST
  • Facebook
  • Twitter
  • Whatsapp

ಮೊಹಾಲಿ[ಮೇ.03]: ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಳ್ಳಲು ಹೋರಾಟ ಮುಂದುವರಿಸಿರುವ ಕೋಲ್ಕತಾ ನೈಟ್‌ರೈಡರ್ಸ್ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಶುಕ್ರವಾರ ಇಲ್ಲಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸೆಣಸಲಿವೆ. 

ಗೆಲ್ಲುವ ತಂಡದ ಪ್ಲೇ-ಆಫ್‌ ಆಸೆ ಜೀವಂತವಾಗಿ ಉಳಿದುಕೊಳ್ಳಲಿದ್ದು, ಸೋಲುವ ತಂಡ ಬಹುತೇಕ ಹೊರಬೀಳಲಿದೆ. ಎರಡೂ ತಂಡಗಳು 12 ಪಂದ್ಯಗಳನ್ನು ಆಡಿದ್ದು ತಲಾ 10 ಅಂಕ ಪಡೆದಿವೆ. ಆದರೆ ನೆಟ್‌ ರನ್‌ರೇಟ್‌ ಆಧಾರದಲ್ಲಿ ಕೆಕೆಆರ್‌ ಮುಂದಿದೆ.

ಪಿಚ್‌ ರಿಪೋರ್ಟ್‌

ಇಲ್ಲಿನ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದರೂ, ದೊಡ್ಡ ಕ್ರೀಡಾಂಗಣವಾಗಿರುವ ಕಾರಣ ಬೌಂಡರಿ ಬಾರಿಸುವುದು ಕಷ್ಟ. ಮೊದಲು ಬ್ಯಾಟ್‌ ಮಾಡುವ ತಂಡ 190ಕ್ಕೂ ಹೆಚ್ಚು ಮೊತ್ತ ಗಳಿಸಿದರೆ ಸುರಕ್ಷಿತ. 2ನೇ ಬ್ಯಾಟ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು.


ಒಟ್ಟು ಮುಖಾಮುಖಿ: 24

ಪಂಜಾಬ್‌: 08

ಕೆಕೆಆರ್‌: 16

ಸಂಭವನೀಯ ಆಟಗಾರರ ಪಟ್ಟಿ

ಪಂಜಾಬ್‌: ರಾಹುಲ್‌, ಗೇಲ್‌, ಮಯಾಂಕ್‌, ಪೂರನ್‌, ಮಿಲ್ಲರ್‌, ಅಶ್ವಿನ್‌ (ನಾಯಕ), ಸಿಮ್ರನ್‌ಸಿಂಗ್‌, ಎಂ.ಅಶ್ವಿನ್‌, ಮುಜೀಬ್‌, ಶಮಿ, ಅಶ್‌ರ್‍ದೀಪ್‌.

ಕೆಕೆಆರ್‌: ಶುಭ್‌ಮನ್‌ ಗಿಲ್‌, ಕ್ರಿಸ್‌ ಲಿನ್‌, ರಸೆಲ್‌, ಕಾರ್ತಿಕ್‌(ನಾಯಕ), ಉತ್ತಪ್ಪ, ರಾಣಾ, ನರೈನ್‌, ರಿಂಕು ಸಿಂಗ್‌, ಪೀಯೂಷ್‌, ಹ್ಯಾರಿ ಗರ್ನಿ, ಸಂದೀಪ್‌.

ಸ್ಥಳ: ಮೊಹಾಲಿ
ಪಂದ್ಯ ಆರಂಭ: ರಾತ್ರಿ 8ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

Follow Us:
Download App:
  • android
  • ios