ಹೆಚ್ಚುವರಿ 15 ಎಕರೆ ಜಾಗ ಮಂಜೂರು ಮಾಡಿದ ಕರ್ನಾಟಕ ಸರ್ಕಾರಕ್ಕೆ ಬಿಸಿಸಿಐ ಪರವಾಗಿ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ.

ಬೆಂಗಳೂರು(ಸೆ.02): ದೇವನಹಳ್ಳಿ ಬಳಿ ನೂತನವಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ನಿರ್ಮಿಸಲು ಬಿಸಿಸಿಐಗೆ ಕರ್ನಾಟಕ ರಾಜ್ಯ ಸರ್ಕಾರ ಹೆಚ್ಚುವರಿ 15 ಎಕರೆ ಜಾಗ ಮಂಜೂರು ಮಾಡಿದೆ.

12 ವರ್ಷಗಳ ಹಿಂದೆಯೇ ಬಿಸಿಸಿಐ ಹಣ ಪಾವತಿಸಿದ್ದರೂ ಕೆಲ ತಿಂಗಳುಗಳ ಹಿಂದಷ್ಟೇ ರಾಜ್ಯ ಸರ್ಕಾರ 25 ಎಕರೆ ಜಾಗ ನೀಡಿತ್ತು.ಬಿಸಿಸಿಐ ಹೆಚ್ಚುವರಿ 25 ಎಕರೆ ನೀಡುವಂತೆ ಕೇಳಿಕೊಂಡಿತ್ತು.

ಹೆಚ್ಚುವರಿ 15 ಎಕರೆ ಜಾಗ ಮಂಜೂರು ಮಾಡಿದ ಕರ್ನಾಟಕ ಸರ್ಕಾರಕ್ಕೆ ಬಿಸಿಸಿಐ ಪರವಾಗಿ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ.

ಇದೀಗ ಒಂದೇ ಕಡೆ ಒಟ್ಟು 40 ಎಕರೆ ಜಾಗ ದೊರೆತಿದ್ದು, ವಿಶ್ವ ದರ್ಜೆ ಮಟ್ಟದ ಎನ್'ಸಿಎ ನಿರ್ಮಿಸುವುದಾಗಿ ಅಮಿತಾಭ್ ಚೌಧರಿ ಹೇಳಿದ್ದಾರೆ.