'ಭಾರತ ಕ್ರಿಕೆಟ್ ತಂಡ ಒಲಿಂಪಿಕ್ಸ್'ನಲ್ಲಿ ಪಾಲ್ಗೊಳ್ಳುವ ವಿಷಯ ಇನ್ನೂ ಚರ್ಚೆಯಲ್ಲಿದೆ. ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು'

ನವದೆಹಲಿ(ಆ.10): ಒಂದೊಮ್ಮೆ ಒಲಿಂಪಿಕ್ಸ್'ನಲ್ಲಿ ಕ್ರಿಕೆಟ್ ಸೇರ್ಪಡೆಗೊಂಡರೆ ಭಾರತ ತಂಡ ಪಾಲ್ಗೊಳ್ಳಬೇಕೋ ಅಥವಾ ಬೇಡವೋ ಎನ್ನುವುದನ್ನು ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸುಪ್ರೀಂಕೋರ್ಟ್ ನೇಮಿಸಿರುವ ಸಿಒಎ ತಿಳಿಸಿದೆ.

ಬುಧವಾರ ಬಿಸಿಸಿಐ ಹಾಗೂ ಸಿಒಎನ ಸಭೆ ಬಳಿಕ ಮತನಾಡಿದ ಸಿಒಎ ಸದಸ್ಯೆ ಡಯಾನ ಎಡುಲ್ಜಿ, 'ಭಾರತ ಕ್ರಿಕೆಟ್ ತಂಡ ಒಲಿಂಪಿಕ್ಸ್'ನಲ್ಲಿ ಪಾಲ್ಗೊಳ್ಳುವ ವಿಷಯ ಇನ್ನೂ ಚರ್ಚೆಯಲ್ಲಿದೆ. ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು' ಎಂದರು.

ಇದೇವೇಳೆ ಪುರುಷ ಹಾಗೂ ಮಹಿಳೆಯರ ತಂಡಗಳ ಆಯ್ಕೆ ಸಮಿತಿ ಸದಸ್ಯರಿಗೆ ತಲಾ 15 ಲಕ್ಷ ರುಪಾಯಿ ನೀಡಲು ತೀರ್ಮಾನಿಸಲಾಯಿತು. ಹಾಗೆಯೇ ಶ್ರೀಶಾಂತ್ ಮೇಲಿನ ನಿಷೇಧವನ್ನು ತೆರವುಗೊಳಿಸುವ ವಿಷಯದ ಕುರಿತು ಕಾನೂನು ಸಮಿತಿ ಅಧ್ಯಯನ ನಡೆಸುತ್ತಿದೆ' ಎಂದು ಸಿಒಎ ತಿಳಿಸಿದೆ.