ಭಾರತದ ವನಿತೆಯರ ತಂಡವು ದಕ್ಷಿಣ ಆಫ್ರಿಕಾ, ಐರ್ಲೆಂಡ್(ಎರಡು ಬಾರಿ) ಮತ್ತು ಜಿಂಬಾಬ್ವೆ ತಂಡವನ್ನು ಮಣಿಸಿ ಅಜೇಯವಾಗಿ ಮುನ್ನೆಡೆದಿದೆ.
ನವದೆಹಲಿ(ಮೇ.16): ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಚತುಷ್ಕೋನ ಏಕದಿನ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರುತ್ತಿರುವ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಅಭಿನಂದಿಸಿದೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಜೂಲನ್ ಗೋಸ್ವಾಮಿ ಹಾಗೂ ಐರ್ಲೆಂಡ್ ವಿರುದ್ಧ ವಿಶ್ವ ದಾಖಲೆಯ 320 ರನ್ ಜೊತೆಯಾಟವಾಡಿದ ದೀಪ್ತಿ ಶರ್ಮಾ ಹಾಗೂ ಪೂನಮ್ ರಾವುತ್ ಅವರ ಸಾಧನೆಯನ್ನು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಕೊಂಡಾಡಿದ್ದಾರೆ.
ಸರಣಿಯಲ್ಲಿ ಆಡಿರುವ ಎಲ್ಲಾ ನಾಲ್ಕೂ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಅತ್ಯದ್ಭುತ ಲಯದಲ್ಲಿದ್ದು, ಐಸಿಸಿ ಏಕದಿನ ವಿಶ್ವಕಪ್'ಗೆ ಇದೇ ಆತ್ಮವಿಶ್ವಾಸದೊಂದಿಗೆ ತೆರಳಲಿದೆ ಎನ್ನುವ ನಂಬಿಕೆ ಇದೆ ಎಂದು ಅಮಿತಾಭ್ ಹೇಳಿದ್ದಾರೆ.
ಭಾರತದ ವನಿತೆಯರ ತಂಡವು ದಕ್ಷಿಣ ಆಫ್ರಿಕಾ, ಐರ್ಲೆಂಡ್(ಎರಡು ಬಾರಿ) ಮತ್ತು ಜಿಂಬಾಬ್ವೆ ತಂಡವನ್ನು ಮಣಿಸಿ ಅಜೇಯವಾಗಿ ಮುನ್ನೆಡೆದಿದೆ.
ಇದೇ ಜೂನ್ 24ರಿಂದ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ ನಡೆಯಲಿದ್ದು, ವಿಶ್ವಕಪ್ ಮಹಾಮೇಳಕ್ಕೆ ಹಾಲಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೇ ತಂಡವನ್ನು ಪ್ರಕಟಿಸಲಾಗಿದ್ದು, ಮಿಥಾಲಿ ರಾಜ್ ತಂಡವನ್ನು ಮುನ್ನೆಡೆಸಲಿದ್ದಾರೆ.
