ಶಮಿ ಪತ್ನಿ ಜತೆ BCCI ಅಧಿಕಾರಿಗಳು ಚರ್ಚೆ

BCCI anti corruption unit meets Mohammed Shami wife Hasin Jahan
Highlights

ತಮ್ಮ ಪತಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ. ಮೊಹಮದ್ ಭಾಯ್ ಎಂಬುವರು ನೀಡಿದ್ದ ಹಣವನ್ನು ದುಬೈನಲ್ಲಿ ಪಾಕ್ ಮೂಲದ ಅಲ್ಬಿಶಾ ಎಂಬ ಯುವತಿಯಿಂದ ಶಮಿ ಪಡೆದಿದ್ದರು ಎಂದು ಜಹಾನ್ ದೂರಿದ್ದರು.

ಕೋಲ್ಕತಾ(ಮಾ.18): ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಜತೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ನಾಲ್ವರು ಅಧಿಕಾರಿಗಳು ಶನಿವಾರ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಪತಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ. ಮೊಹಮದ್ ಭಾಯ್ ಎಂಬುವರು ನೀಡಿದ್ದ ಹಣವನ್ನು ದುಬೈನಲ್ಲಿ ಪಾಕ್ ಮೂಲದ ಅಲ್ಬಿಶಾ ಎಂಬ ಯುವತಿಯಿಂದ ಶಮಿ ಪಡೆದಿದ್ದರು ಎಂದು ಜಹಾನ್ ದೂರಿದ್ದರು.

ಪತ್ನಿಯಿಂದಲೇ ಶಮಿ ವಿರುದ್ಧ ಮ್ಯಾಚ್‌ಫಿಕ್ಸಿಂಗ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಶಮಿ ವಿರುದ್ಧ ತನಿಖೆಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಕೋಲ್ಕತಾದ ಲಾಲ್ ಬಜಾರ್ ಠಾಣೆಯಲ್ಲಿ ಬಿಸಿಸಿಐ ಅಧಿಕಾರಿಗಳು ಶಮಿ ಅವರಿಂದ ಮಾಹಿತಿ ಪಡೆದಿದ್ದರೆ ಎನ್ನಲಾಗಿದೆ.

loader