ಮೆಲ್ಬರ್ನ್(ಜ.13): ಆಸ್ಟ್ರೇಲಿಯಾ ಬಿಗ್ ಬ್ಯಾಶ್ ಲೀಗ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಆಡಿಲೇಡ್ ಸ್ಟ್ರೈಕರ್ಸ್ ಹಾಗೂ ಮೆಲ್ಬರ್ನ್ ಸ್ಟಾರ್ಸ್ ನಡುವಿನ ಹೋರಾಟ ಭಾರಿ ಕುತೂಹಲ ಮೂಡಿಸಿತ್ತು. ರೋಚಕ ಪಂದ್ಯದಲ್ಲಿ ಆಡಿಲೇಡ್ 41 ರನ್‌ಗಳ ಗೆಲುವು ಸಾಧಿಸಿತು. ಮೈದಾನದಲ್ಲಿ ಕ್ರಿಕೆಟಿಗರು ಹೋರಾಟ ಮಾಡಿದರೆ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಮಾರಾಮಾರಿ ನಡೆಸಿದ್ದಾರೆ.

ಇದನ್ನೂ ಓದಿ: ಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ರಾಜಸ್ಥಾನ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

ಪಂದ್ಯ ಅಂತಿಮ ಘಟ್ಟ ತಲುಪುತ್ತಿದ್ದಂತೆ ಇತ್ತ ಅಭಿಮಾನಿಗಳು ಹೊಡೆದಾಟ ಶುರು ಮಾಡಿದ್ದಾರೆ. ರೊಚ್ಚಿಗೆದ್ದ ಅಭಿಮಾನಿ ಮತ್ತೊಬ್ಬ ಅಭಿಮಾನಿಯನ್ನ ಥಳಿಸಿದ್ದಾನೆ. ಮಾತಿನಿಂದ ಶುರುವಾದ ಜಗಳ ತಾರಕಕ್ಕೇರಿದೆ. ಇಬ್ಬರ ಮಾರಾಮಾರಿಯಿಂದ ಕ್ರೀಡಾಂಗಣದ ಭದ್ರತಾ ಸಿಬ್ಬಂಧಿ ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ವಶಕ್ಕೆ ಪಡೆದರು.

 

 

ಇದನ್ನೂ ಓದಿ: 87 ವರ್ಷದ ಅಭಿಮಾನಿ ಆಸೆ ಈಡೇರಿಸಿದ ಧೋನಿ

ಅಭಿಮಾನಿಗಳ ಹೊಡೆದಾಟದ ಕುರಿತು ಸೌತ್ ಆಸ್ಟ್ರೇಲಿಯಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ಹಾಗೂ ಇತರ ವೀಡಿಯೋ ಪರಿಶೀಲಿಸಿರುವ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಇದೀಗ ಆಸ್ಟ್ರೇಲಿಯಾ ಲೀಗ್ ಕ್ರಿಕೆಟ್ ಪಂದ್ಯದ ವೇಳೆ ಮಾರಾಮಾರಿ ನಡೆಸಿರೋದು ದುರದೃಷ್ಟಕರ.