ಆರಂಭಿಕರಿಬ್ಬರು ವಿಕೆಟ್ ಒಪ್ಪಿಸುತ್ತಿದ್ದಂತೆ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ವೆಸ್ಟ್'ಇಂಡಿಸ್ 97/7 ಕಳೆದುಕೊಂಡಿತ್ತು.

ವೆಲ್ಲಿಂಗ್ಟನ್(ಡಿ.01): ಕಿವೀಸ್ ಎಡಗೈ ವೇಗಿ ನೀಲ್ ವ್ಯಾಗ್ನರ್ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್'ಇಂಡಿಸ್ ಮೊದಲ ಟೆಸ್ಟ್'ನಲ್ಲಿ ಕೇವಲ 134 ರನ್'ಗಳಿಗೆ ಸರ್ವಪತನ ಕಂಡಿದೆ. ಇದಕ್ಕುತ್ತರವಾಗಿ ನ್ಯೂಜಿಲೆಂಡ್ ದಿನದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವೆಸ್ಟ್'ಇಂಡಿಸ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್'ಗೆ ಬ್ರಾಥ್'ವೈಟ್ ಹಾಗೂ ಕಿರಾನ್ ಪೋವೆಲ್ ಅರ್ಧಶತಕದ ಜೊತೆಯಾಟವಾಡಿತು. 24 ರನ್'ಗಳಿಸಿದ್ದ ಬ್ರಾಥ್'ವೈಟ್'ಗೆ ವ್ಯಾಗ್ನರ್ ಪೆವಿಲಿಯನ್ ಹಾದಿ ತೋರಿಸಿದರು. ಮತ್ತೋರ್ವ ಆರಂಭಿಕ ಪೋವೆಲ್'ಗೆ ಮತ್ತೋರ್ವ ಎಡಗೈ ವೇಗಿ ಬೋಲ್ಟ್ ಶಾಕ್ ನೀಡಿದರು.

ಆರಂಭಿಕರಿಬ್ಬರು ವಿಕೆಟ್ ಒಪ್ಪಿಸುತ್ತಿದ್ದಂತೆ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ವೆಸ್ಟ್'ಇಂಡಿಸ್ 97/7 ಕಳೆದುಕೊಂಡಿತ್ತು. ಕೆಳಕ್ರಮಾಂಕದಲ್ಲಿ ಕೇಮಾರ್ ರೀಚ್ 14 ರನ್ ಬಾರಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಅಂತಿಮವಾಗಿ ವೆಸ್ಟ್'ಇಂಡಿಸ್ 134 ರನ್'ಗಳಿಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ನೇಲ್ ವ್ಯಾಗ್ನರ್ 39/7 ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್:

ವೆಸ್ಟ್'ಇಂಡಿಸ್: 134/10

ಕಿರಾನ್ ಪೋವೆಲ್ : 42

ನೀಲ್ ವ್ಯಾಗ್ನರ್: 39/7

ನ್ಯೂಜಿಲೆಂಡ್: 85/2

ಟಾಮ್ ಲಾಥಮ್: 37

(ಮೊದಲ ದಿನದಂತ್ಯಕ್ಕೆ)