ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಪಂದ್ಯದ 53ನೇ ಓವರ್'ನಲ್ಲಿ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಚೆಂಡನ್ನು ತುಳಿದು ಚೆಂಡು ವಿರೂಪಗೊಳಿಸಲು ಯತ್ನಿಸಿದಂತೆ ಕಂಡು ಬಂದಿದೆ. ಈ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ನಿತ್ "ಇದು ಉದ್ದೇಶ ಪೂರ್ವಕವಾಗಿ ಮಾಡಿದ್ದು" ಎಂದು ಹೇಳಿದ್ದಾರೆ.

ಬಾಲ್ ಟ್ಯಾಂಪರಿಂಗ್ ವಿವಾದ ಸದ್ಯಕ್ಕೆ ಮುಕ್ತಾಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈಗಾಗಲೇ ಮೂರನೇ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಿ ಸ್ಮಿತ್, ವಾರ್ನರ್ ಹಾಗೂ ಬ್ಯಾಂಕ್ರಾಪ್ಟ್ ಬೆಲೆ ತೆತ್ತಿದ್ದಾರೆ. ಇದೀಗ ಮತ್ತೋರ್ವ ಆಸೀಸ್ ಆಟಗಾರ ಬಾಲ್ ಟ್ಯಾಂಪರಿಂಗ್ ಮಾಡಿದ್ದಾನೆಯೇ ಎಂಬ ಅನುಮಾನ ಮೂಡ ತೊಡಗಿದೆ.

ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಪಂದ್ಯದ 53ನೇ ಓವರ್'ನಲ್ಲಿ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಚೆಂಡನ್ನು ತುಳಿದು ಚೆಂಡು ವಿರೂಪಗೊಳಿಸಲು ಯತ್ನಿಸಿದಂತೆ ಕಂಡು ಬಂದಿದೆ. ಈ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ನಿತ್ "ಇದು ಉದ್ದೇಶ ಪೂರ್ವಕವಾಗಿ ಮಾಡಿದ್ದು" ಎಂದು ಹೇಳಿದ್ದಾರೆ.

Scroll to load tweet…

ಇದು ಸರಿಯಲ್ಲ. ನಾನು ತಕ್ಷಣ ಅಂಪೈರ್ ನೋಡಿದೆ ಆಗ ಅವರು ಮುಸುಮುಸು ನಗುತ್ತಿದ್ದರು. ಆದರೆ ನಾನು ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಪ್ಯಾಟ್ ಕಮ್ಮಿನ್ಸ್ ಸ್ಪಷ್ಟಪಡಿಸಿದ್ದಾರೆ.