ಇನ್ನು ಸುರೇಶ್ ರೈನಾ ಅರ್ಧ ಶತಕಗಳಿಸಿ ವಿಕೆಟ್ ಒಪ್ಪಿಸಿದರು

ಕಾನ್ಪುರ(ಸೆ.15): 10ನೇ ವಿಕೆಟ್‌'ಗೆ 178 ರನ್ ಜೊತೆಯಾಟ ಮೂಡಿಬಂದ ಫಲವಾಗಿ ದುಲೀಪ್ ಟ್ರೋಫಿ ಪಂದ್ಯದಲ್ಲಿ ಇಂಡಿಯಾ ಬ್ಲೂ ವಿರುದ್ಧ, ಇಂಡಿಯಾ ರೆಡ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ದಿನ ಶತಕ ಬಾರಿಸಿ ಅಜೇಯರಾಗಿದ್ದ ಇಂದ್ರಜಿತ್, ಎರಡನೇ ದಿನ ದ್ವಿಶತಕ ದಾಖಲಿಸಿದರು.

ಗೋಹಿಲ್ ಅವರಿಂದ ಇಂದ್ರಜಿತ್‌'ಗೆ ಉತ್ತಮ ಬೆಂಬಲ ದೊರೆಯಿತು. 280 ಎಸೆತ ಎದುರಿಸಿದ ಇಂದ್ರಜಿತ್ 20 ಬೌಂಡರಿ, 6 ಸಿಕ್ಸರ್ ನೆರವಿನಿಂದ 200 ರನ್ ಗಳಿಸಿ ಔಟಾದರು.

ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಡಿಯಾ ಬ್ಲೂ 2ನೇ ದಿನದಂತ್ಯಕ್ಕೆ 216 ರನ್ ಗಳಿಸಿದ್ದು ಇನ್ನೂ 167 ರನ್ ಹಿನ್ನಡೆಯಲ್ಲಿದೆ. ಹನುಮ ವಿಹಾರಿ ಶತಕದತ್ತ ಹೆಜ್ಜೆಯಿಟ್ಟಿದ್ದಾರೆ. ಇನ್ನು ಸುರೇಶ್ ರೈನಾ ಅರ್ಧ ಶತಕಗಳಿಸಿ ವಿಕೆಟ್ ಒಪ್ಪಿಸಿದರು

ಸಂಕ್ಷಿಪ್ತ ಸ್ಕೋರ್:

ಭಾರತ ರೆಡ್: 383/10 (ಇಂದ್ರಜಿತ್ 200, ವಿಜಯ್ ಅಜೇಯ 34)

ಭಾರತ ಬ್ಲೂ ೨೧೬/೩(2ನೇ ದಿನದಂತ್ಯಕ್ಕೆ) (ವಿಹಾರಿ 86*, ರೈನಾ 52)