Asianet Suvarna News Asianet Suvarna News

Australian Open 2024: ಯಾನ್ನಿಕ್‌ ಸಿನ್ನರ್‌ ಚಾಂಪಿಯನ್‌

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಹಣಾಹಣಿಯಲ್ಲಿ 22ರ ಸಿನ್ನರ್‌, ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ವಿರುದ್ಧ 3-6, 3-6, 6-4, 6-4, 6-3 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. ಆರಂಭಿಕ 2 ಸೆಟ್‌ ಗೆದ್ದ ಹೊರತಾಗಿಯೂ ಸಿನ್ನರ್‌ರ ಪ್ರಬಲ ಹೊಡೆತಗಳನ್ನು ಎದುರಿಸಲಾಗದೆ ಮೆಡ್ವೆಡೆವ್‌ ಮಂಡಿಯೂರಿದರು.

Australian Open final 2024 Jannik Sinner beats Daniil Medvedev in Melbourne final kvn
Author
First Published Jan 29, 2024, 9:43 AM IST | Last Updated Jan 29, 2024, 9:43 AM IST

ಮೆಲ್ಬರ್ನ್‌(ಜ.29): ಟೆನಿಸ್‌ ಲೋಕದಲ್ಲಿ ಮತ್ತೋರ್ವ ಯುವ ಸೂಪರ್‌ಸ್ಟಾರ್‌ನ ಉದಯವಾಗಿದೆ. ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಇಟಲಿಯ ಯಾನ್ನಿಕ್‌ ಸಿನ್ನರ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಹಣಾಹಣಿಯಲ್ಲಿ 22ರ ಸಿನ್ನರ್‌, ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ವಿರುದ್ಧ 3-6, 3-6, 6-4, 6-4, 6-3 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. ಆರಂಭಿಕ 2 ಸೆಟ್‌ ಗೆದ್ದ ಹೊರತಾಗಿಯೂ ಸಿನ್ನರ್‌ರ ಪ್ರಬಲ ಹೊಡೆತಗಳನ್ನು ಎದುರಿಸಲಾಗದೆ ಮೆಡ್ವೆಡೆವ್‌ ಮಂಡಿಯೂರಿದರು.

ಇದರೊಂದಿಗೆ 2021ರ ಯುಎಸ್‌ ಓಪನ್‌ ಚಾಂಪಿಯನ್‌ ಮೆಡ್ವೆಡೆವ್‌ರ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಕನಸು 3ನೇ ಬಾರಿಯೂ ಭಗ್ನಗೊಂಡಿತು. ಈ ಮೊದಲು 2021, 2022ರಲ್ಲಿ ಕ್ರಮವಾಗಿ ಜೋಕೋವಿಚ್‌, ರಾಫೆನ್‌ ನಡಾಲ್‌ ವಿರುದ್ಧ ಫೈನಲ್‌ನಲ್ಲಿ ಸೋತಿದ್ದರು.

Breaking: ಆಸ್ಟ್ರೇಲಿಯನ್‌ ಓಪನ್ ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದ ರೋಹನ್‌ ಬೋಪಣ್ಣ!

ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ: ಸಿನ್ನರ್‌ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ್ದರು. ಚೊಚ್ಚಲ ಪ್ರಯತ್ನದಲ್ಲೇ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಫ್ರೆಂಚ್‌ ಓಪನ್‌(2020), ಯುಎಸ್‌ ಓಪನ್‌(2022)ನಲ್ಲಿ ಕ್ವಾರ್ಟರ್‌, 2023ರ ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರು.

3ನೇ ಟೆನಿಸಿಗ: ಸಿನ್ನರ್‌ ಗ್ರ್ಯಾನ್‌ಸ್ಲಾಂ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಇಟಲಿಯ 3ನೇ ಟೆನಿಸಿಗ. ನಿಕೋಲ್‌ ಪೀಟ್ರಾಂಗೆಲಿ 1959, 1960ರಲ್ಲಿ, ಆಡ್ರಿಯಾನೊ ಪನಾಟ್ಟ 1976ರಲ್ಲಿ ಫ್ರೆಂಚ್‌ ಓಪನ್‌ ಗೆದ್ದಿದ್ದರು.

ಶಹಬಾಸ್‌ ಸಬಲೆಂಕಾ!

ಮೆಲ್ಬರ್ನ್‌: ಬೆಲಾರಸ್‌ನ ಅರೈನಾ ಸಬಲೆಂಕಾ, ಸತತ 2ನೇ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ಚೀನಾದ ಝೆಂಗ್‌ ಕಿನ್ವೆನ್‌ ವಿರುದ್ಧ 6-3, 6-2 ಸೆಟ್‌ಗಳಲ್ಲಿ ಸುಲಭ ಜಯ ದಾಖಲಿಸಿದರು.

ಟೂರ್ನಿಯುದ್ದಕ್ಕೂ ಒಂದೂ ಸೆಟ್‌ ಸೋಲದೆ ಸಬಲೆಂಕಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ವಿಶೇಷ. ಫೈನಲ್‌ನಲ್ಲೂ ಬೆಲಾರಸ್‌ ಆಟಗಾರ್ತಿಯ ವೇಗ, ಬಲವಾದ ಸರ್ವ್‌, ರಿಟರ್ನ್ಸ್‌ಗೆ ಝೆಂಗ್‌ ಬಳಿ ಉತ್ತರವಿರಲಿಲ್ಲ. ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ ಆಡಿದ 21 ವರ್ಷದ ಝೆಂಗ್‌, ಈ ಹಂತದಲ್ಲಿ ಅನನುಭವಿ ಎನ್ನುವುದು ಸ್ಪಷ್ಟವಾಗಿ ತೋರುತಿತ್ತು. ಅವರು ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-50ರೊಳಗೆ ಸ್ಥಾನ ಪಡೆದಿರುವ ಆಟಗಾರ್ತಿಯನ್ನು ಎದುರಿಸಿದರು. ಝೆಂಗ್‌ ವಿರುದ್ಧ ಕಳೆದ ವರ್ಷ ಯುಎಸ್‌ ಓಪನ್‌ ಕ್ವಾರ್ಟರ್‌ ಫೈನಲ್‌ನಲ್ಲೂ ಸಬಲೆಂಕಾ ಜಯಭೇರಿ ಬಾರಿಸಿದ್ದರು.

ಕೊಹ್ಲಿ ವಿಕೆಟ್ ಸೆಲೆಬ್ರೆಷನ್ ಇಮಿಟೇಟ್ ಮಾಡಿದ ನಾಯಕ ರೋಹಿತ್ ಶರ್ಮಾ, ವಿಡಿಯೋ ವೈರಲ್!

ಕಳೆದ ವರ್ಷ ಫೈನಲ್‌ನಲ್ಲಿ ಎಲೈನಾ ರಬೈಕೆನಾ ವಿರುದ್ಧ ಜಯಗಳಿಸಿ ಪ್ರಶಸ್ತಿ ಗೆದ್ದಿದ್ದರು. 2012, 2013ರಲ್ಲಿ ವಿಕ್ಟೋರಿಯಾ ಅಜರೆಂಕಾ ಬಳಿಕ ಸತತ 2 ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಸಬಲೆಂಕಾ ಪಾತ್ರರಾದರು.

Latest Videos
Follow Us:
Download App:
  • android
  • ios