Asianet Suvarna News Asianet Suvarna News

Breaking: ಆಸ್ಟ್ರೇಲಿಯನ್‌ ಓಪನ್ ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದ ರೋಹನ್‌ ಬೋಪಣ್ಣ!


ಕನ್ನಡಿಗ ರೋಹನ್‌ ಬೋಪಣ್ಣ ಆಸ್ಟ್ರೇಲಿಯನ್‌ ಓಪನ್‌ ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ. ಒಂದು ದಿನದ ಹಿಂದೆಯಷ್ಟೇ ಪದ್ಮಶ್ರಿ ಪ್ರಶಸ್ತಿಗೆ ಭಾಜನರಾಗಿದ್ದ ರೋಹನ್‌ ಬೋಪಣ್ಣ ಡಬಲ್ಸ್‌ ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.

australian open rohan bopanna and mattew ebden win their first Grand Slam title Doubles Title san
Author
First Published Jan 27, 2024, 6:11 PM IST | Last Updated Jan 27, 2024, 6:39 PM IST

ಮೆಲ್ಬೋರ್ನ್‌ (ಜ.27): ವಿಶ್ವ ನಂ.1 ಡಬಲ್ಸ್‌ ಆಟಗಾರ ರೋಹನ್‌ ಬೋಪಣ್ಣ ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಶನಿವಾರ ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್‌ನ ಪುರುಷರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ 43 ವರ್ಷದ ರೋಹನ್‌ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್‌ ಜೋಡಿ 7-6, 7-5 ರಿಂದ ಇಟಲಿಯ ಜೋಡಿ ಸಿಮೋನ್‌ ಬೊಲ್ಲೆಲಿ ಹಾಗೂ ಆಂಡ್ರೆಯಾ ವಿವಾಸ್ಸೋರಿ ಜೋಡಿಯನ್ನು ಸೋಲಿಸುವ ಮೂಲಕ ಪ್ರಶಸ್ತಿ ಜಯಿಸಿತು. ಈ ಗೆಲುವಿನೊಂದಿಗೆ ಅವರು 2 ಕೋಟಿ ರೂಪಾಯಿ ಬಹುಮಾನ ಜಯಿಸಿದ್ದಾರೆ. ರೋಹನ್‌ ಬೋಪಣ್ಣ ಹಾಗೂ ಮ್ಯಾಥ್ಯೂ ಎಬ್ಡನ್‌ ತಂಡವಾಗಿ ಗೆದ್ದ ಮೊದಲ ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಇದಾಗಿದೆ. ಇದು ರೋಹನ್‌ ಬೋಪಣ್ಣ ಅವರ ಮೊಟ್ಟಮೊದಲ ಗ್ರ್ಯಾಂಡ್‌ ಸ್ಲಾಂ ಡಬಲ್ಸ್‌ ಪ್ರಶಸ್ತಿಯಾಗಿದೆ. ಅದಲ್ಲದೆ ಈ ಗೆಲುವು ಅವರ 43ನೇ ವಯಸ್ಸಿನಲ್ಲಿ ಬಂದಿರುವುದು ಇನ್ನಷ್ಟು ವಿಶೇಷವಾಗಿದೆ. ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ರೋಹನ್‌ ಬೋಪಣ್ಣ, ನಾನು 43 ವರ್ಷದ ವ್ಯಕ್ತಿ ಎಂದು ಹೇಳಿಕೊಳ್ಳೋದಿಲ್ಲ. ನಾನು 43ನೇ ಹಂತದಲ್ಲಿದ್ದೇನಷ್ಟೇ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ರೋಹನ್‌ ಬೋಪಣ್ಣ  ಪುರುಷರ ಡಬಲ್ಸ್‌ನಲ್ಲಿ ಎರಡು ಬಾರಿ ಯುಎಸ್‌ ಓಪನ್‌ ಫೈನಲ್‌ಗೇರಿದ್ದೇ ಅವರ ಶ್ರೇಷ್ಠ ಸಾಧನೆಯಾಗಿತ್ತು. 2010 ಹಾಗೂ 2023ರ ಯುಎಸ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ಅವರು ರನ್ನರ್‌ಅಪ್‌ ಆಗಿದ್ದರು. 2010ರಲ್ಲಿ ಪಾಕಿಸ್ತಾನದ ಐಸಾಮ್‌ ಉಲ್‌ ಹಕ್‌ ಖುರೇಷಿ ಅವರ ಜೊತೆಗೂಡಿ ರನ್ನರ್‌ಅಪ್‌ ಆಗಿದ್ದರೆ, 2023ರಲ್ಲಿ ಎಬ್ಡೆನ್‌ ಜೊತೆಗೂಡಿ ರನ್ನರ್‌ಅಪ್‌ ಆಗಿದ್ದರು.

ಇತ್ತೀಚೆಗಷ್ಟೇ ಪುರುಷರ ಡಬಲ್ಸ್‌ ವಿಭಾಗದಲ್ಲಿ 43 ವರ್ಷದ ರೋಹನ್‌ ಬೋಪಣ್ಣ ವಿಶ್ವ ನಂ.1 ಆಟಗಾರ ಎನಿಸಿಕೊಂಡಿದ್ದರು. ಇದಲ್ಲದೆ, ಗಣರಾಜ್ಯೋತ್ಸವದ ಸಮಯದಲ್ಲಿ ಕೇಂದ್ರ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಈ ಖುಷಿಯಲ್ಲಿರುವಾಗಲೇ 43 ವರ್ಷ 329ನೇ ದಿನಕ್ಕೆ ಅವರು ಮೊಟ್ಟಮೊದಲ ಬಾರಿಗೆ ಗ್ರ್ಯಾಂಡ್‌ ಸ್ಲಾಂ ಡಬಲ್ಸ್‌ ಚಾಂಪಿಯ್‌ ಆಗಿದ್ದಾರೆ.

ರಾಜ್ಯದ ರೋಹನ್‌ ಬೋಪಣ್ಣ ಟೆನಿಸ್‌ ಡಬಲ್ಸ್‌ನಲ್ಲಿ ವಿಶ್ವ ನಂಬರ್‌ 1..! ಶುಭ ಹಾರೈಸಿದ ಸಾನಿಯಾ ಮಿರ್ಜಾ

ಆಸ್ಟ್ರೇಲಿಯನ್‌ ಓಪನ್‌ ಗೆಲ್ಲಲು 61 ಪಂದ್ಯ ಆಡಿದ ರೋಹನ್‌ ಬೋಪಣ್ಣ: ಇದು ಗ್ರ್ಯಾಂಡ್ ಸ್ಲಾಮ್ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ರೋಹನ್ ಬೋಪಣ್ಣ ಅವರ 61ನೇ ಪಂದ್ಯವಾಗಿತ್ತು. ಅವರು 19 ವಿಭಿನ್ನ ಪಾರ್ಟರ್ನರ್‌ಗಳ ಜೊತೆ ಡಬಲ್ಸ್‌ ಪಂದ್ಯ ಆಡಿದ್ದಾರೆ. ತಮ್ಮ ಮೊಟ್ಟಮೊದಲ ಗ್ರ್ಯಾಂಡ್‌ ಸ್ಲಾಂ ಡಬಲ್ಸ್‌ ಪ್ರಶಸ್ತಿ ಗೆಲ್ಲುವ ಮುನ್ನ ರೋಹನ್‌ ಬೋಪಣ್ಣ ಅಮೆರಿಕದ ರಾಜೀವ್‌ ರಾಮ್‌ ಅವರ ಅಪರೂಪದ ದಾಖಲೆಯನ್ನು ಮುರಿದಿದ್ದರು. ರಾಜೀವ್‌ ರಾಮ್‌ ತಮ್ಮ ಮೊಟ್ಟಮೊದಲ ಗ್ರ್ಯಾಂಡ್‌ ಸ್ಲಾಂ ಡಬಲ್ಸ್‌ ಪ್ರಶಸ್ತಿ ಗೆಲ್ಲಲು 58 ಪಂದ್ಯವಾಡಿದ್ದರೆ, ರೋಹನ್‌ ಬೋಪಣ್ಣ 61 ಪಂದ್ಯವಾಡುವ ಮೂಲಕ ಈ ದಾಖಲೆ ಮುರಿದರು.

ಟೆನಿಸ್ ಡಬಲ್ಸ್‌ ರ್‍ಯಾಂಕಿಂಗ್‌: ಟಾಪ್‌-5ಗೆ ಬೋಪಣ್ಣ ಎಂಟ್ರಿ!

ಬೋಪಣ್ಣ ಅವರ 2ನೇ ಗ್ರ್ಯಾಂಡ್‌ ಸ್ಲಾಂ: ಇದು ರೋಹನ್‌ ಬೋಪಣ್ಣ ಅವರ 2ನೇ ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ 2017ರಲ್ಲಿ ಕೆನಡಾದ ಗ್ಯಾಬ್ರಿಯೆಲಾ ದೆಬ್ರೋವಸ್ಕಿ ಜೊತೆಗೂಡಿ ಅವರು ಫ್ರೆಂಚ್‌ ಓಪನ್‌ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.
 

Latest Videos
Follow Us:
Download App:
  • android
  • ios