ವಿರಾಟ್ ಕೊಹ್ಲಿ ಆನ್‌ಫೀಲ್ಡ್‌ನಲ್ಲಿ ಅಗ್ರೆಸ್ಸೀವ್. ಸ್ಲೆಡ್ಜಿಂಗ್ ಮಾಡಿದರೆ ಅಲ್ಲೇ ತಿರುಗೇಟು ನೀಡು ಛಾತಿ ಕೊಹ್ಲಿಯದ್ದು. ಇನ್ನು ಸಂಭ್ರಮಾಚರಣೆ ಕೂಡ ಅಷ್ಟೆ. ಇದೀಗ ನಾಯಕ ರೋಹಿತ್ ಶರ್ಮಾ, ಕೊಹ್ಲಿಯ ಅನುಕರಣೆ ಮಾಡಿದ್ದಾರೆ. ಕೊಹ್ಲಿ ವಿಕೆಟ್ ಸೆಲೆಬ್ರೆಷನ್ ಹೇಗಿದೆ ಎಂಹ ಇಮೇಟೇಟ್ ವಿಡಿಯೋ ವೈರಲ್ ಆಗಿದೆ. 

ಹೈದರಾಬಾದ್(ಜ.28) ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟದ ಮೂಲಕವೇ ಗಮನಸೆಳೆದಿದ್ದಾರೆ. ಮೈದಾನದಲ್ಲಿ ಕೊಹ್ಲಿ ಇದ್ದರೆ ತಂಡದ ಉತ್ಸಾಹ ಡಬಲ್ ಆಗುತ್ತದೆ. ಜೊತೆಗೆ ಎದುರಾಳಿಗಳ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡುತ್ತಾರೆ. ತಂಡದ ಸಂಭ್ರವನ್ನು ಕೊಹ್ಲಿ ತುಸು ಹೆಚ್ಚಾಗೇ ಮಾಡುತ್ತಾರೆ. ಅದರಲ್ಲೂ ವಿಕೆಟ್ ಸಂಭ್ರವನ್ನು ಕೊಹ್ಲಿ ಅಗ್ರೆಸ್ಸೀವ್ ಆಗಿ ಸಂಭ್ರಮಿಸುತ್ತಾರೆ. ಕೊಹ್ಲಿಯ ಈ ವಿಕೆಟ್ ಸಂಭ್ರಮವನ್ನು ನಾಯಕ ರೋಹಿತ್ ಶರ್ಮಾ ಅನುಕರಣೆ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಬಿಸಿಸಿಐ ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್ ಶರ್ಮಾ, ಕೊಹ್ಲಿ ಇಮಿಟೇಶನ್ ಮಾಡಿದ್ದಾರೆ. ರೋಹಿತ್ ಶರ್ಮಾ ಟೀಂ ಇಂಡಿಯಾದ ಕೆಲ ಕ್ರಿಕೆಟಿಗರ ಅನುಕರಣೆ ಮಾಡಿದ್ದಾರೆ. ಖುದ್ದು ತಮ್ಮ ಪುಲ್ ಶಾಟ್‌ನ್ನು ತೋರಿಸಿದ್ದಾರೆ. ಇದೇ ವೇಳೆ ಜಸ್ಪ್ರೀತ್ ಬುಮ್ರಾ ಶೈಲಿಯನ್ನು ಅನುಕರಿಸಿದ್ದಾರೆ. ಇದೇ ವೇಳೆ ಸೂರ್ಯಕುಮಾರ್ ಯಾದವ್ ಸ್ಕೂಪ್ ಶಾಟ್‌ನ್ನು ಅನುಕರಿಸಿದ್ದಾರೆ.

ಟೊಮ್ ಬೌಲಿಂಗ್‌ಗೆ ಭಾರತ ಠುಸ್, ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು!

ಕೆಲ ಕ್ರಿಕೆಟಿಗರ ಅನುಕರಣೆ ಬಳಿಕ ವಿರಾಟ್ ಕೊಹ್ಲಿಯ ವಿಕೆಟ್ ಸಂಭ್ರಮವನ್ನು ಅನುಕರಿಸಿದ್ದಾರೆ. ಕೊಹ್ಲಿಯ ಅಗ್ರೆಸ್ಸೀವ್ ಶೈಲಿಯನ್ನು ಅನುಕರಿಸಿ ಅಭಿಮಾನಿಗಳ ಮೆಚ್ಚುಗೆಗೆಗ ಪಾತ್ರವಾಗಿದ್ದಾರೆ. ರೋಹಿತ್ ಶರ್ಮಾ ಮಿಮಿಕ್ರಿ ಪೈಕಿ ಕೊಹ್ಲಿ ಸೆಲೆಬ್ರೇಷನ್ ಮಿಮಿಕ್ರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Scroll to load tweet…

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಆರಂಭಕ್ಕೂ ಮೊದಲು ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭ ಆಯೋಜಿಸಿತ್ತು. ಆದರೆ ಈ ಸಮಾರಂಭದ ಬಳಿಕ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಪಂದ್ಯ ನಾಲ್ಕೇ ದಿನಕ್ಕ ಅಂತ್ಯಗೊಂಡಿದೆ. ತವರಿನಲ್ಲಿ ಟೀಂ ಇಂಡಿಯಾ ಸೋಲಿನ ಮುಖಭಂಗ ಅನುಭವಿಸಿದೆ.

ಅಶ್ವಿನ್ ಜತೆ ಸೇರಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದ ರವಿಚಂದ್ರನ್ ಅಶ್ವಿನ್..!

4ನೇ ದಿನ 231 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಬ್ಯಾಟ್ಸ್‌ಮನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಅಂತಿಮ ಹಂತದಲ್ಲಿ ಬೌಲರ್ಸ್ ಹೋರಾಟ ನೀಡಿದ ಸೋಲಿನ ಅಂತರವನ್ನು ತಗ್ಗಿಸಿದರು. ಮೊದಲ ಪಂದ್ಯದಲ್ಲೇ ಭಾರತ ಮುಗ್ಗರಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.