ಜೋಕೋವಿಚ್ ಮತ್ತು ಆಲ್ಕರಜ್ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಜೋಕೋವಿಚ್ ಲೆಹೆಕ್ಕಾ ವಿರುದ್ಧ ಗೆದ್ದರೆ, ಆಲ್ಕರಜ್ ಡ್ರಾಪರ್ ವಿರುದ್ಧ ವಾಕ್‌ಓವರ್ ಪಡೆದರು. ಸಬಲೆಂಕಾ, ಗಾಫ್, ಬಡೋಸಾ ಮತ್ತು ಅನಾಸ್ತಾಸಿಯಾ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್ ತಲುಪಿದ್ದಾರೆ. ಬೋಪಣ್ಣ-ಝಾಂಗ್ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ವಾಕ್‌ಓವರ್ ಮೂಲಕ ಪ್ರವೇಶಿಸಿದರು.

ಮೆಲ್ಬರ್ನ್‌: 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ದಿಗ್ಗಜ ನೋವಾಕ್‌ ಜೋಕೋವಿಚ್‌ ಹಾಗೂ ಟೆನಿಸ್‌ ಲೋಕದ ಯುವ ಸೂಪರ್‌ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ಈ ಬಾರಿ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮಂಗಳವಾರ ಪರಸ್ಪರ ಸೆಣಸಾಡಲಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ 10 ಬಾರಿ ಚಾಂಪಿಯನ್‌, ಸರ್ಬಿಯಾದ ಜೋಕೋ ಅವರು ಚೆಕ್‌ ಗಣರಾಜ್ಯದ ಜಿರಿ ಲೆಹೆಕ್ಕಾ ವಿರುದ್ಧ 6-3, 6-4, 7-6(7/4) ನೇರ ಸೆಟ್‌ಗಲ್ಲಿ ಗೆದ್ದು ಅಂತಿಮ 8ರ ಘಟ್ಟ ಪ್ರವೇಶಿಸಿದರು. ಮತ್ತೊಂದೆಡೆ ಚೊಚ್ಚಲ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ 21 ವರ್ಷದ ಆಲ್ಕರಜ್‌, ಬ್ರಿಟನ್‌ನ 15ನೇ ಶ್ರೇಯಾಂಕಿತ ಜಾಕ್‌ ಡ್ರಾಪರ್‌ ವಿರುದ್ಧ ವಾಕ್‌ಓವರ್‌ ಪಡೆದು ಕ್ವಾರ್ಟರ್‌ಗೇರಿದರು. ಆಲ್ಕರಜ್‌ 7-5, 6-1 ಮುನ್ನಡೆಯಲ್ಲಿದ್ದಾಗ ಡ್ರಾಪರ್‌ ಗಾಯಗೊಂಡು, ಟೂರ್ನಿಯಿಂದ ಹೊರಬಿದ್ದರು. ಹೀಗಾಗಿ ಆಲ್ಕರಜ್‌ ವಿಜೇತ ಎಂದು ಘೋಷಿಸಲಾಯಿತು. 2ನೇ ಶ್ರೇಯಾಂಕಿತ ಅಲೆಕ್ಸಾಂಡರ್‌ ಜ್ವೆರೆವ್‌, 12ನೇ ಶ್ರೇಯಾಂಕಿತ ಅಮೆರಿಕದ ಟಾಮಿ ಪೌಲ್‌ ಕೂಡಾ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಿಂದ ಸಿರಾಜ್ ಕೈಬಿಟ್ಟಿದ್ದೇಕೆ? ಮೌನ ಮುರಿದ ಕ್ಯಾಪ್ಟನ್ ರೋಹಿತ್ ಶರ್ಮಾ

ಸಬಲೆಂಕಾಗೆ ಜಯ: ಕಳೆದೆರಡು ಬಾರಿ ಚಾಂಪಿಯನ್‌, ಬೆಲಾರಸ್‌ನ ಅರೈನಾ ಸಬಲೆಂಕಾ ಈ ಬಾರಿ ಕೂಡಾ ಟೂರ್ನಿಯಲ್ಲಿ ಕ್ವಾರ್ಟರ್‌ ಪ್ರವೇಶಿಸಿದ್ದಾರೆ. 4ನೇ ಸುತ್ತಿನಲ್ಲಿ ರಷ್ಯಾದ ಮಿರ್ರಾ ಆ್ಯಂಡ್ರೀವಾ ವಿರುದ್ಧ 6-1, 6-2 ಸೆಟ್‌ಗಳಲ್ಲಿ ಜಯಗಳಿಸಿದರು. 3ನೇ ಶ್ರೇಯಾಂಕಿತ ಅಮೆರಿಕದ ಕೊಕೊ ಗಾಫ್ ಸ್ವಿಜರ್‌ಲೆಂಡ್‌ನ ಶ್ರೇಯಾಂಕ ರಹಿತ ಬೆಲಿಂಡಾ ಬೆನಿಸಿಕ್‌ ವಿರುದ್ಧ 5-7, 6-2, 6-1 ಸೆಟ್‌ಗಳಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಸ್ಪೇನ್‌ನ 11ನೇ ಶ್ರೇಯಾಂಕಿತ ಪಾಲಾ ಬಡೋಸಾ, ರಷ್ಯಾದ ಶ್ರೇಯಾಂಕ ರಹಿತ ಅನಾಸ್ತಾಸಿಯಾ ಕೂಡಾ ಅಂತಿಮ 8ರ ಘಟ್ಟ ಪ್ರವೇಶಿಸಿದರು.

ಹಾರ್ದಿಕ್ ಪಾಂಡ್ಯಗೆ ಮತ್ತೆ ಶಾಕ್ ಕೊಟ್ಟ ರೋಹಿತ್ ಶರ್ಮಾ!

ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ-ಝಾಂಗ್‌ ಕ್ವಾರ್ಟರ್‌ ಫೈನಲ್‌ಗೆ

ಆಸ್ಟ್ರೇಲಿಯನ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್‌ ಬೋಪಣ್ಣ ಹಾಗೂ ಚೀನಾದ ಝಾಂಗ್‌ ಶುವಾಯ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಭಾನುವಾರ ಇಂಡೋ-ಚೀನಾ ಜೋಡಿ 2ನೇ ಸುತ್ತಿನಲ್ಲಿ ಅಮೆರಿಕದ ಟೇಲರ್‌ ಟೌನ್‌ಸೆಂಡ್‌ ಹಾಗೂ ಮೊನಾಕೊ ದೇಶದ ಹ್ಯುಗೊ ನೈಸ್‌ ವಿರುದ್ಧ ಆಡಬೇಕಿತ್ತು. ಆದರೆ ಗಾಯದ ಕಾರಣದಿಂದ ಎದುರಾಳಿ ಜೋಡಿ ಕಣಕ್ಕಿಳಿಯದ ಕಾರಣ ವಾಕ್‌ಓವರ್‌ ಮೂಲಕ ಕ್ವಾರ್ಟರ್‌ ಫೈನಲ್‌ಗೇರಿದರು.