ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಿನ್ನರ್, ಸ್ವಿಯಾಟೆಕ್, ರಾಡುಕಾನು, ರಬೈಕೆನಾ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಸಿನ್ನರ್ ಸ್ಕೂಲ್‌ಕೇಟ್‌ರನ್ನು ಮಣಿಸಿದರೆ, ಮೆಡ್ವಡೆವ್ ಆಘಾತಕಾರಿ ಸೋಲು ಕಂಡರು. ಸ್ವಿಯಾಟೆಕ್ ಸುಲಭ ಜಯ ಸಾಧಿಸಿದರು. ಶ್ರೀರಾಂ-ವೆರೆಲಾ ಡಬಲ್ಸ್‌ನಲ್ಲಿ ಗೆದ್ದರೆ, ವಿಜಯ್-ಜೀವನ್ ಜೋಡಿ ಸೋಲನುಭವಿಸಿತು.

ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಯಾನಿಕ್ ಸಿನ್ನರ್, ಇಗಾ ಸ್ವಿಯಾಟೆಕ್, ಎಮ್ಮಾ ರಾಡುಕಾನು, ಎಲೆನಾ ರಬೈಕೆನಾ ಸೇರಿದಂತೆ ಪ್ರಮುಖರು 3ನೇ ಸುತ್ತು ಪ್ರವೇಶಿಸಿದ್ದಾರೆ. 

ಪುರುಷರ ಸಿಂಗಲ್ಸ್‌ನ ವಿಶ್ವ ನಂ.1 ಟೆನಿಸಿಗ, ಇಟಲಿಯ ಸಿನ್ನರ್ ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಟ್ರಿಸ್ಟನ್ ಸ್ಕೂಲ್‌ಕೇಟ್ ವಿರುದ್ಧ 4-6, 6-4, 6-1, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಸತತ 2ನೇ ಬಾರಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ನಿರೀಕ್ಷೆಯಲ್ಲಿರುವ ಸಿನ್ನರ್‌ಗೆ 3ನೇ ಸುತ್ತಿನಲ್ಲಿ ಅಮೆರಿಕದ ಮಾರ್ಕೊಸ್ ಗಿರೊನ್ ಸವಾಲು ಎದುರಾಗಲಿದೆ.

ಟೀಂ ಇಂಡಿಯಾ ಆಯ್ಕೆಗೆ ಇನ್ನು ದೇಸಿ ಕ್ರಿಕೆಟ್‌ನಲ್ಲಿ ಆಟ ಕಡ್ಡಾಯ!

ಆದರೆ 2021, 2022, 2024 ರನ್ನ‌ಅಪ್, ರಷ್ಯಾದ ಡ್ಯಾನಿಲ್ ಮೆಡ್ವಡೆವ್ 2ನೇ ಸುತ್ತಿನಲ್ಲಿ ಅಮೆರಿಕದ 19 ವರ್ಷದ ಲೀರ್ನರ್ ಟೀನ್ ವಿರುದ್ಧ ಆಘಾತಕಾರಿ ಸೋಲನುಭವಿಸಿದರು.

ಇಗಾ ಜಯಭೇರಿ ಶುಭಾರಂಭ: ಈಗಾಗಲೇ 5 ಗ್ರಾನ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದರೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಬಾರಿ ಟ್ರೋಫಿ ಗೆಲ್ಲಲು ಎದುರು ನೋಡುತ್ತಿರುವ ಪೋಲೆಂಡ್ ತಾರೆ ಇಗಾ ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಸುತ್ತು ಪ್ರವೇಶಿಸಿದರು. ಗುರುವಾರ ಅವರು ಸ್ಲೋವೆಂಕಿಯಾದ ರೆಬೆಕಾ ಸಮ್ ಕೋವಾ ವಿರುದ್ಧ 6-0, 6-2 ಸೆಟ್‌ಗಳಲ್ಲಿ ಗೆದ್ದರು. ಕಜಕಸ್ತಾದನ ಎಲೆನಾ ರಬೈಕೆನಾ, ಬ್ರಿಟನ್‌ನ ಎಮ್ಮಾ ರಾಡುಕಾನು, ಟ್ಯುನೀಶಿಯಾದ ಒನ್ಸ್ ಜಬು‌ ಕೂಡಾ 3ನೇ ಸುತ್ತು ತಲುಪಿದರು.

ಆಸ್ಟ್ರೇಲಿಯನ್ ಓಪನ್ 2025: ಮೆಡ್ವೆಡೆವ್, ಎಮ್ಮಾ 2ನೇ ಸುತ್ತಿಗೆ ಲಗ್ಗೆ

ಶ್ರೀರಾಂ-ವೆರೆಲಾ ಜೋಡಿಗೆ ಗೆಲುವು

ಪುರುಷರ ಡಬಲ್ಸ್‌ನಲ್ಲಿ ಭಾರತದ ಶ್ರೀರಾಮ್ ಬಾಲಾಜಿ-ಮೆಕ್ಸಿಕೋದ ರೆಯಲ್ ವೆರೆಲಾ ಜೋಡಿ ಶುಭಾರಂ ಮಾಡಿತು. ಈ ಜೋಡಿನೆದರ್‌ಲೆಂಡ್ಸ್‌ನ ರಾಬಿನ್ ಹಾಸ್-ಕಜಕಸ್ತಾನದ ಅಲೆ ಕ್ಯಾಂಡರ್ ವಿರುದ್ಧ 6-4, 6-3ರಲ್ಲಿ ಜಯಗಳಿಸಿತು. ಆದರೆ ಭಾರತದ ವಿಜಯ್ ಸುಂದರ್ ಪ್ರಶಾಂತ್- ಜೀವನ್ ಜೋಡಿ ಸೋತು ಹೊರ ಬಿತ್ತು. ಈಗಾಗಲೇ ಬೋಪಣ್ಣ ಕೂಡಾ ಸೋತು ಹೊರಬಿದ್ದಿದ್ದರು.