Asianet Suvarna News Asianet Suvarna News

ರನ್ನರ್‌ ಇದ್ದರೂ ಓಡಿದ ಬ್ಯಾಟ್ಸ್‌ಮನ್ ರನೌಟ್‌!

ಆಸ್ಟ್ರೇಲಿಯಾ ಶೆಫೀಲ್ಡ್ ಟೂರ್ನಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ರನ್ನರ್ ಇದ್ದೂ ರನೌಟ್ ಆದ ಪ್ರಸಂಗ ನಡೆದಿದೆ. ಇದು ಹೇಗಾಯ್ತು ಇಲ್ಲಿದೆ ವಿವರ.
 

Australia cricketer steve o keefe forget runner and gets bizarre run out
Author
Bengaluru, First Published Mar 14, 2019, 10:02 AM IST

ಮೆಲ್ಬರ್ನ್‌(ಮಾ.14): ಆಸ್ಪ್ರೇಲಿಯಾದ ಶೆಫೀಲ್ಡ್‌ ಶೀಲ್ಡ್‌ ಟೂರ್ನಿಯಲ್ಲಿ ಬುಧವಾರ ಅಪರೂಪದ ಪ್ರಸಂಗವೊಂದು ನಡೆದಿದೆ. ಬ್ಯಾಟ್ಸ್‌ಮನ್ ರನ್ನರ್ ಇಟ್ಟುಕೊಂಡು ಓಡಿ ರನೌಟ್ ಆದ ಘಟನೆ ನಡೆದಿದೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಘಟನೆಗೆ ಶೆಫೀಲ್ಡ್ ಟೂರ್ನಿ ಸಾಕ್ಷಿಯಾಗಿದೆ. 

ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ನ್ಯೂಜಿಲೆಂಡ್ ಆಟಗಾರ್ತಿ ವಿಶಿಷ್ಠ ರೀತಿಯಲ್ಲಿ ಔಟ್!

ವಿಕ್ಟೋರಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂ ಸೌತ್‌ ವೇಲ್ಸ್‌ನ ಸ್ಟೀವ್‌ ಓ ಕೀಫ್‌, ಸ್ನಾಯು ಸೆಳೆತಕ್ಕೆ ತುತ್ತಾಗಿದ್ದ ಕಾರಣ ರನ್ನರ್‌ನೊಂದಿಗೆ ಬ್ಯಾಟ್‌ ಮಾಡಲು ಕ್ರೀಸ್‌ಗಿಳಿದರು. ಸ್ಕಾಟ್‌ ಬೋಲೆಂಡ್‌ ಬೌಲಿಂಗ್‌ನಲ್ಲಿ ತಾವು ಎದುರಿಸಿದ ಮೊದಲ ಎಸೆತವನ್ನು ಮಿಡ್‌ ಆನ್‌ನತ್ತ ಬಾರಿಸಿದ ಓ ಕೀಫ್‌, ರನ್ನರ್‌ ಇರುವುದನ್ನು ಮರೆತು ತಾವೇ ಸ್ವತಃ ಓಡಲು ಆರಂಭಿಸಿದರು. 

ಇದನ್ನೂ ಓದಿ: ರಿಷಭ್ ಪಂತ್ ಮಾಡಿದ ಎಡವಟ್ಟುಗಳು ಒಂದಾ.. ಎರಡಾ..?

ಮತ್ತೊಂದು ಬದಿಯಲ್ಲಿದ್ದ ಪೀಟರ್‌ ನೀವಿಲ್‌, ಓ ಕೀಫ್‌ ಕರೆಗೆ ಸ್ಪಂದಿಸಿದರು. ಆದರೆ ರನ್ನರ್‌ ಆಗಿ ಬಂದಿದ್ದ ನಿಕ್‌ ಲಾರ್ಕಿನ್‌ ಸಹ ಓಡಿದ್ದರಿಂದ ಗೊಂದಲ ಸೃಷ್ಟಿಯಾಯಿತು. ಕ್ಷೇತ್ರರಕ್ಷಕ ಜಾನ್‌ ಹಾಲೆಂಡ್‌, ಚೆಂಡನ್ನು ಕೀಪರ್‌ಗೆ ಎಸೆದು ಓ ಕೀಫ್‌ ಕ್ರೀಸ್‌ ತಲುಪುವ ವೇಳೆಗೆ ರನೌಟ್‌ ಮಾಡಿದರು.

 

 

Follow Us:
Download App:
  • android
  • ios