ಈ ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ತಲಾ 1 ಅಂಕ ಲಭಿಸಿದ್ದು, ಇತ್ತಂಡಗಳಿಗೆ ಸೆಮಿಫೈನಲ್‌ ಹಾದಿ ಕಠಿಣವಾಗಿದೆ. ‘ಎ' ಗುಂಪಿನಲ್ಲಿರುವ ಆಸ್ಪ್ರೇಲಿಯಾದ ಎರಡೂ ಪಂದ್ಯ ಮಳೆಗೆ ಆಹುತಿಯಾಗಿದ್ದು, ಅದು 2 ಅಂಕ ಗಳಿಸಿದೆ.
ಲಂಡನ್: ಚಾಂಪಿಯನ್ಸ್ ಟ್ರೋಫಿಯಲ್ಲಿನ 5ನೇ ಪಂದ್ಯವಾದ ಆಸ್ಪ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯಾವಳಿಯ ಮೊದಲ ಹೊನಲು- ಬೆಳಕಿನ ಪಂದ್ಯ ಇದಾಗಿದ್ದು ಭಾರತೀಯ ಕಾಲಮಾನ ಸಂಜೆ 6 ರಿಂದ ಪಂದ್ಯ ಆರಂಭವಾಗಿತ್ತು. ಪಂದ್ಯದ ಆರಂಭದಿಂದಲೂ ಆಟಕ್ಕೆ ಮಳೆ ಅಡ್ಡಿಪಡಿಸಿತ್ತು. ಬಾಂಗ್ಲಾದ 183 ರನ್'ಗಳ ಗುರಿಯನ್ನು ಬೆನ್ನತ್ತಿದ ಆಸ್ಪ್ರೇಲಿಯಾ ತಂಡ 16 ಓವರ್ಗಳಲ್ಲಿ 1 ವಿಕೆಟ್ಗೆ 83 ರನ್ ಗಳಿಸಿದ್ದಾಗ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. ಬಳಿಕ ಪದೇ ಪದೇ ಮಳೆ ಸುರಿದು ತಡರಾತ್ರಿ 2 ಗಂಟೆಗೆ ಪಂದ್ಯವನ್ನು ರದ್ದುಗೊಳಿಸಲಾಯಿತು.
ಬಾಂಗ್ಲಾ ಕಳಪೆ ಬ್ಯಾಟಿಂಗ್: ಇದಕ್ಕೂ ಮುನ್ನದ ಓವಲ್ ಮೈದಾನದಲ್ಲಿ ಮಳೆಯ ಆತಂಕದ ನಡುವೆಯೂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಕಳಪೆ ಆರಂಭ ಪಡೆಯಿತು. ಸೌಮ್ಯ ಸರ್ಕಾರ್ 3, ಇಮ್ರುಲ್ ಕಯಾಸ್ 6 ಹಾಗೂ ಮುಷ್ಫಿಕರ್ ರಹೀಮ್ ಕೇವಲ 9 ರನ್ಗೆ ಔಟಾದರು. ತಮೀಮ್ 114 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಿಡಿಸಿ 95 ರನ್ ಗಳಿಸಿದರು.
3 ಬಾರಿ 95ಕ್ಕೆ ಔಟ್:
ತಮೀಮ್ ಇಕ್ಬಾಲ್ ಶತಕದ ಸಂಭ್ರಮವನ್ನು ಕೇವಲ 5 ರನ್ಗಳಿಂದ ತಪ್ಪಿಸಿಕೊಳ್ಳುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಏಕದಿನ ಕ್ರಿಕೆಟ್'ನಲ್ಲಿ 95 ರನ್ಗೆ ತಮೀಮ್ ವಿಕೆಟ್ ಕಳೆದುಕೊಂಡಿದ್ದು ಇದು ಮೂರನೇ ಬಾರಿ. 90ರ ಆಸುಪಾಸಿನಲ್ಲಿ ತಮೀಮ್ ಇನ್ಯಾವ ಮೊತ್ತಕ್ಕೂ ವಿಕೆಟ್ ಕಳೆದುಕೊಂಡ ಉದಾಹರಣೆಯೇ ಇಲ್ಲ. ಕಳೆದ ಆರು ಇನ್ನಿಂಗ್ಸ್ಗಳಲ್ಲಿ 4 ಬಾರಿ ತಮೀಮ್ 50ಕ್ಕಿಂತ ಹೆಚ್ಚು ರನ್ ಕಲೆಹಾಕುವ ಮೂಲಕ ಸ್ಥಿರ ಪ್ರದರ್ಶನ ಮುಂದುವರಿಸಿದ್ದು ವಿಶೇಷ.
ಈ ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ತಲಾ 1 ಅಂಕ ಲಭಿಸಿದ್ದು, ಇತ್ತಂಡಗಳಿಗೆ ಸೆಮಿಫೈನಲ್ ಹಾದಿ ಕಠಿಣವಾಗಿದೆ. ‘ಎ' ಗುಂಪಿನಲ್ಲಿರುವ ಆಸ್ಪ್ರೇಲಿಯಾದ ಎರಡೂ ಪಂದ್ಯ ಮಳೆಗೆ ಆಹುತಿಯಾಗಿದ್ದು, ಅದು 2 ಅಂಕ ಗಳಿಸಿದೆ.
ಇನ್ನು, ಆಸೀಸ್ ಮುಂದಿನ ಹಂತಕ್ಕೇರಬೇಕಾದರೆ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿರಲಿದೆ. ಅತ್ತ ಬಾಂಗ್ಲಾದೇಶ 2 ಪಂದ್ಯಗಳಲ್ಲಿ ಒಂದನ್ನು ಸೋತಿದ್ದು, ಮತ್ತೊಂದು ಮಳೆಗೆ ಬಲಿಯಾಗಿದೆ. ಕಡೆಯ ಪಂದ್ಯವನ್ನು ಗೆದ್ದರಷ್ಟೇ ಅದು ಸೆಮಿಫೈನಲ್ ರೇಸ್ನಲ್ಲಿ ಉಳಿಯುವ ಕ್ಷೀಣ ಅವಕಾಶ ಹೊಂದಲಿದೆ.
ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ 44.3 ಓವರ್ಗಳಲ್ಲಿ 182/10:
(ತಮೀಮ್ ಇಕ್ಬಾಲ್ 95, ಸ್ಟಾರ್ಕ್ 29ಕ್ಕೆ 4)
ಆಸ್ಪ್ರೇಲಿಯಾ 16 ಓವರ್ಗಳಲ್ಲಿ 83/1:
(ವಾರ್ನರ್ 40, ಸ್ಮಿತ್ 22, ರುಬೆಲ್ 21ಕ್ಕೆ 1)
epaper.kannadaprabha.in
