ಬೆಂಗಳೂರು(ಏ.08): ಏಷ್ಯಾನೆಟ್‌ ಸುದ್ದಿ ಸಮೂಹದ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಸುವರ್ಣ ಡಿಜಿಟಲ್‌ ಹಾಗೂ ರೇಡಿಯೋ ಇಂಡಿಗೋ ಸಂಸ್ಥೆಗಳ ನಡುವಣ 3 ದಿನಗಳ ಸೀಮಿತ ಓವರ್‌ಗಳ ಕ್ರಿಕೆಟ್‌ ಪಂದ್ಯಾವಳಿ ಬುಧವಾರ ಆರಂಭವಾಗಿದೆ.

ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಕನ್ನಡಪ್ರಭ ಸಂಸ್ಥೆಗಳ ವ್ಯವಹಾರಗಳ ಮುಖ್ಯಸ್ಥ ಎನ್‌.ಕೆ.ಅಪ್ಪಚ್ಚು, ಪಂದ್ಯಾವಳಿಯ ಪ್ರಾಯೋಜಕತ್ವ ವಹಿಸಿರುವ ಚೈತ್ರಾ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ ಟಿ.ಎನ್‌.ಪರಮೇಶ್‌ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದಾರೆ.

IPL 2021 ಟೂರ್ನಿಗೂ ಮುನ್ನ ಆರ್‌ಸಿಬಿ ಬಗ್ಗೆ ನೀವು ತಿಳಿದಿರಲೇಬೇಕಾದ ಇಂಟ್ರೆಸ್ಟಿಂಗ್ ಅಂಕಿ-ಅಂಶಗಳಿವು..!

ನಗರದ ಸೆಂಟ್ರಲ್‌ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ 14 ತಂಡಗಳು ಪಾಲ್ಗೊಂಡಿದ್ದು, ಮೊದಲ ದಿನ ನಡೆದ ಪ್ರೀಕ್ವಾರ್ಟರ್‌ ಫೈನಲ್‌ ಹಂತದ ಪಂದ್ಯಗಳಲ್ಲಿ ಗೆದ್ದ 5 ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದವು.

ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಡಿಜಿಟಲ್‌ ದಂಗಲ್‌ 8 ಓವರಲ್ಲಿ 8 ವಿಕೆಟ್‌ಗೆ 52 ರನ್‌ ಗಳಿಸಿದರೆ, ಸುವರ್ಣ ಡಾಮಿನೇಟ​ರ್‍ಸ್ ತಂಡ 6.3 ಓವರುಗಳಲ್ಲಿ 3 ವಿಕೆಟ್‌ಗೆ 53 ರನ್‌ ಗಳಿಸಿ 7 ವಿಕೆಟ್‌ ಜಯ ಸಾಧಿಸಿತು. ನಂತರದ ಪಂದ್ಯದಲ್ಲಿ 8 ಓವರಲ್ಲಿ 6ಕ್ಕೆ 54 ರನ್‌ ಗಳಿಸಿದ ಖರಾಬ್‌ ಬಾಯ್ಸ್‌ ವಿರುದ್ಧ 5.4 ಓವರಲ್ಲಿ 2 ವಿಕೆಟ್‌ಗೆ 57 ರನ್‌ ಗಳಿಸಿದ ಸುವರ್ಣ ಸ್ಟೆ್ರೖಕ​ರ್‍ಸ್ ಗೆಲುವಿನ ನಗೆ ಬೀರಿತು. 8 ಓವರಲ್ಲಿ 3 ವಿಕೆಟ್‌ಗೆ 74 ಗಳಿಸಿದ ಕೆಪಿ ಸೂಪರ್‌ ಸ್ಟಾರ್ಸ್‌ ಹಾಗೂ ಅಷ್ಟೇ ಓವರಲ್ಲಿ 4 ವಿಕೆಟ್‌ಗೆ 74 ರನ್‌ ಗಳಿಸಿದ ಸುವರ್ಣ ಪ್ಯಾಂಥರ್ಸ್‌ ನಡುವಣ 3ನೇ ಪ್ರೀಕ್ವಾರ್ಟರ್‌ ಫೈನಲ್‌ ಪಂದ್ಯ ಟೈ ಆಯಿತು. ಸೂಪರ್‌ ಓವರ್‌ನಲ್ಲಿ ಕೆಪಿ ಸೂಪರ್‌ ಸ್ಟಾರ್ಸ್‌ಗೆ ಗೆಲುವಾಯಿತು. 4ನೇ ಪಂದ್ಯದಲ್ಲಿ ಟೆಕ್ನಿಕಲ್‌ ಟಗರು ತಂಡ 8 ಓವರ್‌ಗೆ 6 ವಿಕೆಟ್‌ಗೆ 73 ರನ್‌ ಗಳಿಸಿದರೆ, 6.3 ಓವರಲ್ಲಿ 4 ವಿಕೆಟ್‌ಗೆ 74 ರನ್‌ ಗಳಿಸಿದ ಇಂಡಿಗೋ ಇನ್‌ವೇಡರ್ಸ್‌ 6 ವಿಕೆಟ್‌ಗಳಿಂದ ಗೆದ್ದು ಮುನ್ನಡೆಯಿತು. ದಿನದ ಕಡೆಯ ಪಂದ್ಯದಲ್ಲಿ 8 ಓವರ್‌ಗೆ 3 ವಿಕೆಟ್‌ಗೆ 87 ರನ್‌ ಸಿಡಿಸಿದ ರಾಯಲ್‌ ರಿಪೋರ್ಟರ್ಸ್‌ ತಂಡದ ವಿರುದ್ಧ 8 ಓವರ್‌ಗಳಲ್ಲಿ 6 ವಿಕೆಟ್‌ಗೆ 48 ರನ್‌ ಗಳಿಸಿದ ಕ್ಯಾಮ್‌ ಚೀತಾಸ್‌ ತಂಡ, 39 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಕೆಪಿ ಸೂಪರ್‌ ಕಿಂಗ್ಸ್‌ ಹಾಗೂ ಟೆಕ್ನಿಕಲ್‌ ಪೊಗರು ತಂಡಗಳು ಮೊದಲ ಸುತ್ತಿನಲ್ಲಿ ಬೈ ಪಡೆದು ಕ್ವಾರ್ಟರ್‌ ಫೈನಲ್‌ ಅರ್ಹತೆ ಗಿಟ್ಟಿಸಿದವು.

2ನೇ ದಿನವಾದ ಗುರುವಾರ ಕಡೆಯ ಪ್ರೀಕ್ವಾರ್ಟರ್‌ ಫೈನಲ್‌ ಹಾಗೂ 4 ಕ್ವಾರ್ಟರ್‌ ಫೈನಲ್‌ಗಳು ನಡೆಯಲಿವೆ. ಅಂತಿಮ ದಿನವಾದ ಶುಕ್ರವಾರ ಸೆಮಿಫೈನಲ್‌ಗಳು, 3ನೇ ಸ್ಥಾನದ ಪಂದ್ಯ ಹಾಗೂ ಫೈನಲ್‌ ಪಂದ್ಯಗಳು ನಡೆಯಲಿವೆ.