Kannada Prabha  

(Search results - 127)
 • EXAM

  Jobs13, Sep 2019, 8:45 AM IST

  ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಮತ್ತೊಮ್ಮೆ ಕನ್ನಡ ದ್ರೋಹ!

  ರಾಷ್ಟ್ರೀಕೃತ ಬ್ಯಾಂಕುಗಳ ಒಟ್ಟು 12,071 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಐಬಿಪಿಎಸ್‌ ಅಧಿಸೂಚನೆ ಹೊರಡಿಸಿದ್ದು, ಕಡ್ಡಾಯವಾಗಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿಯೇ ಪರೀಕ್ಷೆ ಬರೆಯಬೇಕು ಎಂದು ಷರತ್ತು ವಿಧಿಸಿದೆ. 

 • Aishani Shetty

  ENTERTAINMENT9, Sep 2019, 11:04 AM IST

  ಪೂರ್ಣ ಪ್ರಮಾಣದ ನಟಿಯಾದ ಐಶಾನಿ ಶೆಟ್ಟಿ!

  ‘ವಾಸ್ತುಪ್ರಕಾರ’ ಹಾಗೂ ‘ರಾಕೆಟ್’ ಚಿತ್ರಗಳ ನಂತರ ‘ಕಾಜಿ’ ಕಿರುಚಿತ್ರ ನಿರ್ದೇಶಿಸಿ ಸುದ್ದಿಯಲ್ಲಿದ್ದ ಐಶಾನಿ ಶೆಟ್ಟಿ, ಈಗ ರವೀನ್ ನಿರ್ದೇಶನದ ‘ನಡುವೆ ಅಂತರವಿರಲಿ’ ಹೆಸರಿನ ಚಿತ್ರದ ಮೂಲಕ ತೆರೆ ಮೇಲೆ ಬಂದಿದ್ದಾರೆ. ಅವರ ಸಿನಿ ಜರ್ನಿ ಬಗ್ಗೆ ‘ಕನ್ನಡ ಪ್ರಭ’ದ ಜೊತೆ ಮಾತನಾಡಿದ್ದಾರೆ.

 • ಪೋಲ್ಯಾಂಡ್‌ನ ವಾರ್ಸದಲ್ಲಿ ನಡೆದ ಅಂತಿಮ ಹಂತದ ಸ್ಪರ್ಧೆಯಲ್ಲಿ 70 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ಆಶಾ ಸುಪ್ರಾ ಸುಂದರಿ ಪಟ್ಟವನ್ನು ಅಲಂಕರಿಸಿದ್ದರು.

  ENTERTAINMENT6, Sep 2019, 9:43 AM IST

  ಬಾಲಿವುಡ್‌ನಿಂದ ಹಾರಿ ’ರಾಬರ್ಟ್’ ಗಾಗಿ ಹಾರಿ ಬಂದ ಭದ್ರಾವತಿ ಹುಡುಗಿ!

  ಭದ್ರಾವತಿಯ ಬೆಡಗಿ ಆಶಾ ಭಟ್‌ ಬಾಲಿವುಡ್‌ನಿಂದ ಸೀದಾ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಅದೂ ದೊಡ್ಡ ಪ್ರೊಡಕ್ಷನ್‌ ಹೌಸ್‌, ದೊಡ್ಡ ಡೈರೆಕ್ಟರ್‌, ದೊಡ್ಡ ಸ್ಟಾರ್‌ ಸಿನಿಮಾವಾದ ‘ರಾಬರ್ಟ್‌’ ಮೂಲಕ. ಮೊದಲ ಪ್ರಯತ್ನದಲ್ಲಿಯೇ ಸಿಕ್ಸರ್‌ ಬಾರಿಸಲು ಸಿದ್ಧವಾಗಿರುವ ಆಶಾ ಭಟ್‌ ತನಗೆ ಒಲಿದು ಬಂದ ಅವಕಾಶ, ಪಾತ್ರಕ್ಕೆ ಮಾಡಿಕೊಂಡಿರುವ ಸಿದ್ಧತೆ ಜೊತೆಗೆ ತಮ್ಮ ಹಿನ್ನೆಲೆಯನ್ನೊಂದಿಷ್ಟು ಇಲ್ಲಿ ಹೇಳಿಕೊಂಡಿದ್ದಾರೆ.

 • Ganesha chuturthi

  Karnataka Districts29, Aug 2019, 9:54 AM IST

  ಪಿಒಪಿಯಿಂದ ತಾಯಿಯ ಎದೆ ಹಾಲೂ ವಿಷ!

  ಉಸಿರಾಡುವ ಗಾಳಿಯಿಂದ ಹಿಡಿದು ತಾಯಿಯ ಎದೆ ಹಾಲನ್ನೂ ಕೂಡ ವಿಷ ಮಾಡುವ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಿಸುವ ವಿಘ್ನ ವಿನಾಶಕನ ಆರಾಧನೆ ತರವಲ್ಲ. ಮಣ್ಣಿನ ಮುದ್ದು ಗಣಪನ ಮುಂದೆ ಪಿಒಪಿ ಗಣಪ ಚೆಂದವೂ ಅಲ್ಲ. 

 • NEWS23, Aug 2019, 4:30 PM IST

  ಕನ್ನಡ ಪರ ಹೋರಾಟ ಇಲ್ಲಿಗೇ ನಿಲ್ಲುವಂತಿಲ್ಲ; ಕನ್ನಡ ಪ್ರಭದ ಬೇಡಿಕೆಗಳಿವು!

  ‘ಕನ್ನಡಪ್ರಭ’ ಹಕ್ಕೊತ್ತಾಯದ ವರದಿಗಳನ್ನು ಸಾವಿರಾರು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಫೇಸ್ಬುಕ್‌, ಟ್ವೀಟರ್‌ ಸೇರಿದಂತೆ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಪ್ರತಿಕ್ರಿಯಿಸುವ ಮೂಲಕ ಕನ್ನಡದ ಬಗೆಗಿನ ತಮ್ಮ ಕೆಚ್ಚನ್ನು ಹೊರಗೆಡವಿದ್ದಾರೆ.  ತಮ್ಮಲ್ಲಿನ ಮಾತೃಭಾಷೆ ಅಭಿಮಾನ ಹಾಗೂ ಕಣ್ಣೆದುರು ಕನ್ನಡಿಗರಿಗೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಲು ಕನ್ನಡಪ್ರಭ ಹಕ್ಕೊತ್ತಾಯವನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ.

 • Furniture Expo

  Karnataka Districts22, Aug 2019, 9:17 AM IST

  ಕನ್ನಡ ಪ್ರಭ, ಸುವರ್ಣ ನ್ಯೂಸ್‌ ಇಂಡಿಯಾ ಫರ್ನಿಚರ್‌, ಹೋಮ್‌ ಡೆಕೋರ್‌ ಎಕ್ಸ್‌ಪೋ

  ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಸಹಯೋಗದಲ್ಲಿ  ವೈವಿಧ್ಯಮಯ ಪೀಠೋಪಕರಣಗಳು ಮತ್ತು ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ‘ಇಂಡಿಯನ್‌ ಫರ್ನಿಚರ್‌ ಆ್ಯಂಡ್‌ ಹೋಮ್ ಡೆಕೊರ್‌ನ 4ನೇ ಆವೃತ್ತಿಯ ಎಕ್ಸ್‌ಪೋ- 2019’ ಆ.23ರಿಂದ 26ರವರೆಗೆ ನಡೆಯಲಿದೆ.

 • NEWS14, Aug 2019, 1:10 PM IST

  ಕನ್ನಡಿಗರಿಗೆ ಕೆಲಸ ಕೊಡದಿರಲು ಕಂಪನಿಗಳ ತಂತ್ರ!

  ರಾಜ್ಯದಲ್ಲಿ ಬಂಡವಾಳ ಹೂಡುವ ಮುನ್ನ ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವುದಾಗಿ ಸರ್ಕಾರದ ಷರತ್ತಿಗೆ ಒಪ್ಪಿ ಸಹಿ ಹಾಕಿದ ನಂತರ ಖಾಸಗಿ ಉದ್ಯಮದರಾರರು, ಕೈಗಾರಿಕೋದ್ಯಮಿಗಳು ಕನ್ನಡಿಗರಿಗೆ ಕೌಶಲ್ಯದ ನೆಪವೊಡ್ಡಿ ಉದ್ಯೋಗ ನೀಡಲು ಹಿಂಜರಿಯುತ್ತಿವೆ. 

 • Divya

  ENTERTAINMENT14, Aug 2019, 10:12 AM IST

  ‘ಪ್ರೇಮಲೋಕ’ ಕ್ಕೆ ಮಲ್ಲಿಕಾ ಎಂಬ ಮೋಹಕ ಚೆಲುವೆ ಎಂಟ್ರಿ!

  ಸ್ಟಾರ್‌ ಸುವರ್ಣದ ‘ಪ್ರೇಮಲೋಕ’ ಧಾರಾವಾಹಿಗೀಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಕಥಾ ನಾಯಕ ಸೂರ್ಯ ಹಾಗೂ ನಾಯಕಿ ಪ್ರೇರಣಾ ನಡುವೆ ಈಗ ಮಲ್ಲಿಕಾ ಎನ್ನುವ ಮೋಹಕ ಚೆಲುವೆ ಎಂಟ್ರಿ ಕೊಟ್ಟಿದ್ದಾಳೆ. ನಾಯಕ-ನಾಯಕಿಯಷ್ಟೇ ಹೆಚ್ಚು ಪ್ರಾಮುಖ್ಯತೆ ಮಲ್ಲಿಕಾಗೂ ಇದು. ಆದರೆ ಆಕೆ ಬಂದಿದ್ದು ಯಾಕೆ ಎನ್ನುವುದೀಗ ಕುತೂಹಲ. 

 • Relief Material

  NEWS14, Aug 2019, 8:06 AM IST

  ನೆರೆ ಪ್ರದೇಶಗಳಿಗೆ 53 ಟ್ರಕ್‌ ಪರಿಹಾರ ಸಾಮಗ್ರಿ

  ನೆರೆ ಸಂತ್ರಸ್ತರಿಗೆ ನೆರವಾಗುವಂತೆ ‘ಕನ್ನಡಪ್ರಭ- ಸುವರ್ಣ ನ್ಯೂಸ್‌’ ನೀಡಿದ ಕರೆಗೆ ಮಂಗಳವಾರ ಕೂಡ ನಾಡಿನ ಜನರಿಂದ ಉದಾರ ಸ್ಪಂದನೆ ದೊರೆತಿದ್ದು, ಆರನೇ ದಿನವೂ ಬೆಂಗಳೂರಿನ ಕೇಂದ್ರ ಕಚೇರಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಒಟ್ಟು ಐದು ಟ್ರಕ್‌ ಪರಿಹಾರ ಸಾಮಗ್ರಿಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗಿದೆ.

 • Suvarna news Helping Hands
  Video Icon

  Karnataka Districts13, Aug 2019, 11:59 PM IST

  'ಉತ್ತರ'ದ ಕೂಗಿಗೆ ಮಿಡಿದ ಹೃದಯಗಳಿಗೆಲ್ಲ ವಂದನೆ, ಧನ್ಯವಾದ ಕರ್ನಾಟಕ

  ಕರುನಾಡನ್ನು ತಲ್ಲಣಗೊಳಿಸಿದ್ದ ಪ್ರವಾಹದಿಂದ ಅನೇಕರು ತಮ್ಮ ಮನೆ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಜೀವ ರಕ್ಷಣೆಗಾಗಿ ಉಟ್ಟ ಉಡುಗೆಯಲ್ಲೇ ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದಾರೆ. ವರುಣನ ಅಬ್ಬರಕ್ಕೆ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಕೈಲಾದಷ್ಟು ಸಹಾಯ ಮಾಡಲು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ 'ಉತ್ತರ'ದೊಂದಿಗೆ ಕರುನಾಡು ಅಭಿಯಾನವನ್ನು ಆರಂಭಿಸಿತ್ತು. ಪ್ರವಾಹ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸಲು ಸಾವಿರಾರು ಮಂದಿ ಸಹಾಯ ಮಾಡಿದ್ದು, ಆಹಾರ, ಮೆಡಿಸಿನ್, ಬಟ್ಟೆ, ಹೊದಿಕೆ ನೀಡಿ ಭಯಬೇಡ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ನೊಂದವರಿಗಾಗಿ ಮಿಡಿದ ಸಹೃದಯಿಗಳ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ 'ಸುವರ್ಣ' ನುಡಿಗಳು... ದೊಡ್ಡ ಮನಸ್ಸಿನ ಎಲ್ಲರಿಗೂ ವಂದನೆ..

 • reaction
  Video Icon

  NEWS13, Aug 2019, 5:28 PM IST

  ನೆರೆ ಸಂತ್ರಸ್ತರ ಕೈ ಹಿಡಿದ ದಾನಿಗಳ 'ಸುವರ್ಣ' ನುಡಿ!

  'ಉತ್ತರ'ದೊಂದಿಗೆ ಕರುನಾಡು, ಸುವರ್ಣ ನ್ಯೂಸ್ ಕನ್ನಡಪ್ರಭ ಅಭಿಯಾನಕ್ಕೆ ಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ ಎಂದು ನೀಡಿದ ಒಂದು ಕರೆಗೆ ಓಗೊಟ್ಟ ಕರುನಾಡ ಮಂದಿ, ಕೈತುಂಬಾ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದೇ ವೇಳೆ ತಮ್ಮ ಮನದಾಳದ ಮಾತುಗಳನ್ನೂ ಹಂಚಿಕೊಂಡಿದ್ದಾರೆ

 • flood
  Video Icon

  NEWS13, Aug 2019, 12:30 PM IST

  'ಉತ್ತರ'ದ ಕೂಗಿಗೆ ಮಿಡಿದ ಹೃದಯಗಳು: ಸಹಾಯದೊಂದಿಗೆ ಪ್ರೀತಿ, ಅಭಯದ ನುಡಿ!

  ಕರುನಾಡನ್ನು ತಲ್ಲಣಗೊಳಿಸಿದ್ದ ಪ್ರವಾಹದಿಂದ ಅನೇಕರು ತಮ್ಮ ಮನೆ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಜೀವ ರಕ್ಷಣೆಗಾಗಿ ಉಟ್ಟ ಉಡುಗೆಯಲ್ಲೇ ಸುರಕ್ಷಿತ ಪ್ರದೆಶಕ್ಕೆ ತೆರಳಿದ್ದಾರೆ. ವರುಣನ ಅಬ್ಬರಕ್ಕೆ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಕೈಲಾದಷ್ಟು ಸಹಾಯ ಮಾಡಲು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ 'ಉತ್ತರ'ದೊಂದಿಗೆ ಕರುನಾಡು ಅಭಿಯಾನವನ್ನು ಆರಂಭಿಸಿತ್ತು. ಪ್ರವಾಹ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸಲು ಸಾವಿರಾರು ಮಂದಿ ಸಹಾಯ ಮಾಡಿದ್ದು, ಆಹಾರ, ಮೆಡಿಸಿನ್, ಬಟ್ಟೆ, ಹೊದಿಕೆ ನೀಡಿ ಭಯಬೇಡ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ನೊಂದವರಿಗಾಗಿ ಮಿಡಿದ ಸಹೃದಯಿಗಳ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ 'ಸುವರ್ಣ' ನುಡಿಗಳು

 • KP SN
  Video Icon

  NEWS12, Aug 2019, 4:14 PM IST

  ಕಣ್ಣೀರಿಟ್ಟ ಜನರ ಕಣ್ಣೀರೊರೆಸಲು ಒಂದಾದ ನಿಮಗೆ 'ಸುವರ್ಣ' ಧನ್ಯವಾದ

  ಕರ್ನಾಟಕದ 17 ಜಿಲ್ಲೆಗಳು ವರುಣನ ಅಬ್ಬರಕ್ಕೆ ತತ್ತರಿಸಿದ್ದು, ಸಾವಿರಾರು ಮಂದಿ ತಮ್ಮ ಮನೆ, ಜಾನುವಾರುಗಳನ್ನು ಕಳೆದು ಉಟ್ಟ ಉಡುಗೆಯಲ್ಲೇ ಪರಿಹಾರ ಕೇಂದ್ರದತ್ತ ಹೆಜ್ಜೆ ಹಾಕಿದ್ದಾರೆ. ಪ್ರವಾಹಕ್ಕೆ ಕೊಚ್ಚಿ ಹೋದ ಬದುಕನ್ನು ಹೇಗೆ ಕಟ್ಟಿಕೊಳ್ಳುವುದು ಎಮದು ತಿಳಿಯದೆ ಚಿಂತಿತರಾಗಿದ್ದಾರೆ. ಹೀಗೆ ಆಶ್ರಯ ಕಳೆದುಕೊಂಡ ಪ್ರವಾಹ ಪೀಡಿತ ಪ್ರದೆಶದ ಸಂತ್ರಸ್ತರಿಗೆ ಸಹಾಯ ಮಾಡಲು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ 'ಉತ್ತರ'ದೊಂದಿಗೆ ಕರುನಾಡು ಎಂಬ ಅಭಿಯಾನ ಆರಂಭಿಸಿತ್ತು. ನಮ್ಮ ಈ ಒಂದು ಕರೆಗೆ ಸಾವಿರಾರು ಸಹೃದಯಿಗಳು ಸಂತ್ರಸ್ತರಿಗಾಗಿ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ. ಈ ಮೂಲಕ ನೆರೆಯಿಂದ ಕಂಗಾಲಾದ ಮಂದಿಯ ಕಣ್ಣೀರೊರೆಸಲು ನಾವಿದ್ದೇವೆ, ಚಿಂತಿಸಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿದ್ದಾರೆ. ಪ್ರೀತಿಯಿಂದ ನೀವು ಕೊಟ್ಟ ವಸ್ತುಗಳನ್ನು ಸಂತ್ರಸ್ತರಿಗೆ ನಾವು ತಲುಪಿಸಿದ್ದು, ನಿಮ್ಮ ಸಹೃದಯಕ್ಕೆ ಕೋಟಿ ಧನ್ಯವಾದಗಳು.

 • Vasanthkumar kathagala

  Karnataka Districts11, Aug 2019, 10:38 AM IST

  ಎಲ್ಲಿ ಹೋಗಬೇಕಾದರೂ ದೋಣಿಯಲ್ಲೇ ಹೋಗಬೇಕು!

  ಗಂಗಾವಳಿ ನದಿ ತುಂಬಿ ಹರಿಯುತ್ತಿದ್ದ ವೇಳೆಯಲ್ಲಿ, ಇಡೀ ಊರಿಗೇ ಊರೇ ಜಲಾವೃತವಾದ ಸಂದರ್ಭದಲ್ಲಿ ತಾವೇ ದೋಣಿ ನಡೆಸಿಕೊಂಡು ಜನರ ಕತೆ ಕೇಳಿ ಬಂದು ನಾಡಿಗೆ ತಿಳಿಸಲು ಶ್ರಮಿಸಿದ ಕನ್ನಡ ಪ್ರಭದ ಉತ್ತರ ಕನ್ನಡ ವರದಿಗಾರನ ಅನುಭವ ಕಥನ.

 • flood 3

  NEWS10, Aug 2019, 4:58 PM IST

  'ಉತ್ತರ'ದೊಂದಿಗೆ ಕರುನಾಡು: ಸಂತ್ರಸ್ತರ ಕೈಸೇರಿತು ಕನ್ನಡಿಗರ ಪರಿಹಾರ ಸಾಮಗ್ರಿ...!

  ನೊಂದವರ ಕಣ್ಣೀರು ಒರೆಸಲು ಮುಂದಾದ ಸುವರ್ಣನ್ಯೂಸ್- ಕನ್ನಡಪ್ರಭ 'ಉತ್ತರ'ದೊಂದಿಗೆ ಕರುನಾಡು ಎಂಬ ಅಭಿಯಾನವನ್ನು ಆರಂಭಿಸಿತ್ತು. ಈ ಮೂಲಕ ಮಳೆರಾಯನ ಅಬ್ಬರಕ್ಕೆ ತತ್ತರಿಸಿ, ಆಶ್ರಯ ಕಳೆದುಕೊಂಡು ಪರಿಹಾರ ಕೆಂದ್ರ ಸೇರಿರುವ ನಮ್ಮ ನಾಡಿನ ಜನರ ಸಹಾಯಕ್ಕಾಗಿ ಸಾಮಾಗ್ರಿ ನೀಡಲು ಕರೆ ನೀಡಿತ್ತು. ಈ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಪ್ರವಾಹಕ್ಕೆ ನಲುಗಿರುವ ಸಂತ್ರಸ್ತರಿಗೆ ಬೇಕಾದ ನೀರು, ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿ 'ನಿಮ್ಮೊಂದಿಗೆ ನಾವಿದ್ದೇವೆ' ಎಂಬ ಸಂದೇಶ ಸಾರಿದ್ದಾರೆ. ಕನ್ನಡಿಗರ ಈ ಪ್ರೀತಿ, ಅಭಯಕ್ಕೆ ಸಲಾಂ, ನೀವು ನೀಡಿದ ಸಾಮಾಗ್ರಿಗಳು ಸಂತ್ರಸ್ತರ ಕೈ ಸೇರಿವೆ. ಇಲ್ಲಿವೆ ಕೆಲ ಚಿತ್ರಗಳು