2017ರಲ್ಲಿ 10 ಪದಕ ಗೆದ್ದಿದ್ದ ಭಾರತ 2018ರಲ್ಲಿ 8 ಪದಕ ಜಯಿಸಿತ್ತು. ಕಳೆದ 2 ವರ್ಷಗಳಿಗಿಂತ ಈ ಬಾರಿ ಭಾರತದ ಕುಸ್ತಿಪಟುಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಕ್ಸಿಯಾನ್‌ (ಚೀನಾ): ಭಾರತದ ಹರ್‌ಪ್ರೀತ್‌ ಸಿಂಗ್‌ ಹಾಗೂ ಜ್ಞಾನೇಂದರ್‌, ಇಲ್ಲಿ ಭಾನುವಾರ ಮುಕ್ತಾಯವಾದ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಇದರೊಂದಿಗೆ ಭಾರತದ ಖಾತೆಯಲ್ಲಿ 1 ಚಿನ್ನ, 6 ಬೆಳ್ಳಿ ಹಾಗೂ 9 ಕಂಚು ಸೇರಿದಂತೆ 16 ಪದಕಗಳು ಸೇರಿವೆ. ಪಟ್ಟಿಯಲ್ಲಿ ಭಾರತ 8ನೇ ಸ್ಥಾನ ಪಡೆಯಿತು. 2017ರಲ್ಲಿ 10 ಪದಕ ಗೆದ್ದಿದ್ದ ಭಾರತ 2018ರಲ್ಲಿ 8 ಪದಕ ಜಯಿಸಿತ್ತು. ಕಳೆದ 2 ವರ್ಷಗಳಿಗಿಂತ ಈ ಬಾರಿ ಭಾರತದ ಕುಸ್ತಿಪಟುಗಳು ಉತ್ತಮ ಪ್ರದರ್ಶನ ತೋರಿದ್ದಾರೆ. 

ಏಷ್ಯನ್ ಕುಸ್ತಿ: ಭಾರತದ ಮುಡಿಗೆ 14 ಪದಕ

ಭಾನುವಾರ ನಡೆದ ಪುರುಷರ ಗ್ರೀಕೋ ರೋಮನ್‌ ವಿಭಾಗದ 82 ಕೆ.ಜಿ. ಫೈನಲ್‌ನಲ್ಲಿ ಹರ್‌ಪ್ರೀತ್‌, ಒಲಿಂಪಿಕ್ಸ್‌ ಪದಕ ವಿಜೇತ ಇರಾನ್‌ನ ಸಯಿದ್‌ ಅಬ್ದವೇಲಿ ವಿರುದ್ಧ 0-8 ರಲ್ಲಿ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟರು. 60 ಕೆ.ಜಿ. ವಿಭಾಗದ ಕಂಚು ಪದಕದ ಸ್ಪರ್ಧೆಯಲ್ಲಿ ಜ್ಞಾನೇಂದರ್‌, ತೈಪೆಯ ಹುವಾಂಗ್‌ ಜೆ ವಿರುದ್ಧ 9-0 ರಲ್ಲಿ ಜಯ ಸಾಧಿಸಿ ಪದಕ ಗೆದ್ದರು.