Asianet Suvarna News Asianet Suvarna News

Asian Games 2023: ಟಾರ್ಗೆಟ್ 100ರತ್ತ ಭಾರತ ದಾಪುಗಾಲು..!

ಸದ್ಯ ಭಾರತದ ಗಳಿಕೆ 21 ಚಿನ್ನ, 32 ಬೆಳ್ಳಿ ಹಾಗೂ 33 ಕಂಚು ಸೇರಿ 86  ಪದಕ. ಕಬಡ್ಡಿ, ಹಾಕಿ, ಬ್ಯಾಡ್ಮಿಂಟನ್, ಬ್ರಿಡ್ಜ್, ಆರ್ಚರಿ ಕ್ರೀಡೆಗಳಲ್ಲಿ ಭಾರತಕ್ಕೆ ಈಗಾಗಲೇ ಒಟ್ಟು 8 ಪದಕ ಖಚಿತವಾಗಿದೆ. ಹೀಗಾಗಿ ಕನಿಷ್ಠ ಪದಕ ಗಳಿಗೆ 94ಕ್ಕೇರಲಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್‌ನಲ್ಲಿ ಸೆಮೀಸ್‌ಗೇರಿದ್ದು 2 ಪದಕ ಖಚಿತ. ಹಾಕಿಯಲ್ಲಿ ಪುರುಷರ ತಂಡ ಫೈನಲ್‌ನಲ್ಲಿ ಆಡಲಿದ್ದು, ಕನಿಷ್ಠ ಬೆಳ್ಳಿಯಾದರೂ ಸಿಗಲಿದೆ.

Asian Games 2023 India eyes on 100 medal tally in the tournament kvn
Author
First Published Oct 6, 2023, 11:44 AM IST

ಹಾಂಗ್ಝೂ(ಅ.06): ‘ಟಾರ್ಗೆಟ್ 100’ ಎಂಬ ಘೋಷವಾಕ್ಯದೊಂದಿಗೇ 19ನೇ ಏಷ್ಯನ್ ಗೇಮ್ಸ್ ನಲ್ಲಿ ಅಭಿಯಾನ ಆರಂಭಿಸಿದ್ದ ಭಾರತದ ಕ್ರೀಡಾಪಟುಗಳು ತಮ್ಮ ಗುರಿಯ ಸನಿಹಕ್ಕೆ ಬಂದು ನಿಂತಿದ್ದಾರೆ. ಪದಕ ಗಳಿಕೆಯಲ್ಲಿ ಈ ಬಾರಿ ಐತಿಹಾಸಿಕ ಶತಕ ಬಾರಿಸಲೇಬೇಕು ಎಂದು ದೃಢ ನಿಶ್ಚಯ ಮಾಡಿಕೊಂಡಿರುವ ಭಾರತ, ಕ್ರೀಡಾಕೂಟದಲ್ಲಿ ಬಾಕಿ ಉಳಿದಿರುವ ಎರಡು ದಿನಗಳಲ್ಲಿ ಅದನ್ನು ಸಾಧಿಸುವ ನಿರೀಕ್ಷೆಯಲ್ಲಿದೆ. ಶುಕ್ರವಾರ ಭಾರತೀಯ ಅಥ್ಲೀಟ್‌ಗಳು 3 ಚಿನ್ನ ಸೇರಿ 5 ಪದಕಗಳನ್ನು ಕೊರಳಿಗೇರಿಸಿಕೊಂಡರು. 

ಸದ್ಯ ಭಾರತದ ಗಳಿಕೆ 21 ಚಿನ್ನ, 32 ಬೆಳ್ಳಿ ಹಾಗೂ 33 ಕಂಚು ಸೇರಿ 86  ಪದಕ. ಕಬಡ್ಡಿ, ಹಾಕಿ, ಬ್ಯಾಡ್ಮಿಂಟನ್, ಬ್ರಿಡ್ಜ್, ಆರ್ಚರಿ ಕ್ರೀಡೆಗಳಲ್ಲಿ ಭಾರತಕ್ಕೆ ಈಗಾಗಲೇ ಒಟ್ಟು 8 ಪದಕ ಖಚಿತವಾಗಿದೆ. ಹೀಗಾಗಿ ಕನಿಷ್ಠ ಪದಕ ಗಳಿಗೆ 94ಕ್ಕೇರಲಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್‌ನಲ್ಲಿ ಸೆಮೀಸ್‌ಗೇರಿದ್ದು 2 ಪದಕ ಖಚಿತ. ಹಾಕಿಯಲ್ಲಿ ಪುರುಷರ ತಂಡ ಫೈನಲ್‌ನಲ್ಲಿ ಆಡಲಿದ್ದು, ಕನಿಷ್ಠ ಬೆಳ್ಳಿಯಾದರೂ ಸಿಗಲಿದೆ. ಕಬಡ್ಡಿಯಲ್ಲಿ ಪುರುಷರ ಜೊತೆ ಮಹಿಳಾ ತಂಡಕ್ಕೂ ಕನಿಷ್ಠ ಕಂಚಿನ ಪದಕ ಲಭಿಸಲಿದೆ.

Asian Games 2023: ಸ್ಕ್ವ್ಯಾಶ್‌ ಡಬಲ್ಸ್‌ನಲ್ಲಿ ದೀಪಿಕಾ ಪಲ್ಲಿಕಲ್‌ -ಹರೀಂದರ್‌ ಸಿಂಗ್‌ ಸ್ವರ್ಣ ಸಿಂಗಾರ

ಇಸ್ಪೀಟ್ ಎಲೆ ಬಳಸಿ ಆಡುವ ಬ್ರಿಡ್ಜ್‌ನಲ್ಲೂ ಭಾರತಕ್ಕೆ ಕನಿಷ್ಠ ಬೆಳ್ಳಿ ಖಚಿತ. ಇನ್ನು, ಪುರುಷರ ಕಾಂಪೌಂಡ್ ಫೈನಲ್‌ನಲ್ಲಿ ಅಭಿಷೇಕ್, ಓಜಸ್ ಮುಖಾಮುಖಿಯಾಗಲಿದ್ದಾರೆ. ಹೀಗಾಗಿ ಅದರಲ್ಲೂ 2 ಪದಕ ಭಾರತ ಖಾತೆಗೆ ಸೇರಲಿವೆ. ಕ್ರಿಕೆಟ್, ಚೆಸ್, ಆರ್ಚರಿ, ಕುಸ್ತಿಯಲ್ಲಿ ಭಾರತಕ್ಕೆ ಪದಕ ಭರವಸೆ ಇದ್ದು, ಕ್ರೀಡಾಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ 100 ಪದಕಗಳ ಮೈಲಿಗಲ್ಲು ತಲುಪಲಿದೆ ಎನ್ನುವ ನಂಬಿಕೆ ಅಭಿಮಾನಿಗಳಲ್ಲಿದೆ.

ಈ ನಡುವೆ ಚೀನಾ ತನ್ನ ನಾಗಾಲೋಟ ಮುಂದುವರಿಸಿ 179 ಚಿನ್ನದೊಂದಿಗೆ 333 ಪದಕ ಗೆದ್ದಿದ್ದು ಅಗ್ರಸ್ಥಾನ ಕಾಯ್ದುಕೊಂಡಿದೆ. ತಲಾ 150ಕ್ಕೂ ಹೆಚ್ಚು ಪದಕ ಜಯಿಸಿರುವ ಜಪಾನ್ ಹಾಗೂ ದ.ಕೊರಿಯಾ ಕ್ರಮವಾಗಿ ನಂತರದ 2 ಸ್ಥಾನಗಳಲ್ಲಿವೆ

ಆರ್ಚರಿಯಲ್ಲಿ ಡಬಲ್ ಸ್ವರ್ಣ ಧಮಾಕ

ಭಾರತಕ್ಕೆ ನಿರೀಕ್ಷೆಯಂತೆಯೇ ಆರ್ಚರಿಯಲ್ಲಿ ಗುರುವಾರ 2 ಚಿನ್ನದ ಪದಕ ಒಲಿಯಿತು. ಇದರೊಂದಿಗೆ ಕಾಂಪೌಂಡ್ ಆರ್ಚರಿ ತಂಡ ವಿಭಾಗದಲ್ಲಿ ಲಭ್ಯವಿದ್ದ ಎಲ್ಲಾ 3 ಬಂಗಾರವನ್ನೂ ಭಾರತ ತನ್ನ ಬುಟ್ಟಿಗೆ ಹಾಕಿಕೊಂಡಿತು. ಶುಕ್ರವಾರ ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ, ಪರ್ನೀತ್ ಕೌರ್ ಅವರನ್ನೊಳಗೊಂಡ ಮಹಿಳೆಯರ ಕಾಂಪೌಂಡ್ ತಂಡ ಫೈನಲ್‌ನಲ್ಲಿ ಚೈನೀಸ್ ತೈಪೆ ವಿರುದ್ಧ 230-229 ಅಂಕಗಳ ರೋಚಕ ಗೆಲುವು ಸಾಧಿಸಿತು. 

Asian Games 2023: ಆಫ್ರಿಕಾ ಮೂಲದ ಅಥ್ಲೀಟ್‌ಗಳು ಇರದೇ ಇದ್ದಲ್ಲಿ, ಭಾರತ ಹೆಚ್ಚಿನ ಪದಕ ಗೆಲ್ತಿತ್ತು: ಎಫ್‌ಐ ಅಧ್ಯಕ್ಷ

ಇದೇ ವೇಳೆ ಪುರುಷರ ಕಾಂಪೌಂಡ್ ವಿಭಾಗದಲ್ಲೂ ಭಾರತಕ್ಕೆ ಸ್ವರ್ಣ ಪದಕ ಲಭಿಸಿತು. ಅಭಿಷೇಕ್ ವರ್ಮಾ, ಓಜಸ್ ಹಾಗೂ ಪ್ರಥಮೇಶ್ ಅವರಿದ್ದ ತಂಡ ಫೈನಲ್‌ನಲ್ಲಿ ದ. ಕೊರಿಯಾ ವಿರುದ್ಧ 235-230 ಅಂಕಗಳ ಗೆಲುವು ಪಡೆದು ಚಿನ್ನಕ್ಕೆ ಕೊರಳೊಡ್ಡಿತು. ಓಜಸ್ ಹಾಗೂ ಜ್ಯೋತಿ ಜೋಡಿ ಕಾಂಪೌಂಡ್
ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಸಂಪಾದಿಸಿದ್ದರು. ಭಾರತಕ್ಕೆ ಆರ್ಚರಿಯಲ್ಲಿ ಇನ್ನೂ 2 ಪದಕ ಖಚಿತವಾಗಿದ್ದು, ಪುರುಷರ ಕಾಂಪೌಂಡ್ ಫೈನಲ್‌ನಲ್ಲಿ ಅಭಿಷೇಕ್ ಹಾಗೂ ಓಜಸ್ ಮುಖಾಮುಖಿಯಾಗಲಿದ್ದಾರೆ. ರೀಕರ್ವ್ ಪುರುಷ ಹಾಗೂ ಮಹಿಳಾ ತಂಡ ವಿಭಾಗಗಳಲ್ಲೂ ಭಾರತೀಯರು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

Follow Us:
Download App:
  • android
  • ios