Asian Games 2023: ಆಫ್ರಿಕಾ ಮೂಲದ ಅಥ್ಲೀಟ್‌ಗಳು ಇರದೇ ಇದ್ದಲ್ಲಿ, ಭಾರತ ಹೆಚ್ಚಿನ ಪದಕ ಗೆಲ್ತಿತ್ತು: ಎಫ್‌ಐ ಅಧ್ಯಕ್ಷ

ಕೆಲವು ದೇಶಗಳು ಆಫ್ರಿಕನ್ ಮೂಲದ ಅಥ್ಲೀಟ್‌ಗಳನ್ನು ಕಣಕ್ಕಿಳಿಸದೇ ಇದ್ದಲ್ಲಿ ಭಾರತ ಗೆಲ್ಲುವ ಪದಕಗಳ ಸಂಖ್ಯೆ ಇನ್ನೂ ಹೆಚ್ಚಾಗ್ತಿತ್ತು ಎಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಅಧ್ಯಕ್ಷ ಆದಿಲ್‌ ಸುಮರಿವಾಲಾ ಅಭಿಪ್ರಾಯಪಟ್ಟಿದ್ದಾರೆ.
 

Asian Games 2023 AFI president Adille Sumariwalla lauds Indian athletes for making country proud san

ನವದೆಹಲಿ (ಅ.5): 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಅದ್ಭುತ ಪ್ರದರ್ಶನ ನೀಡಿ ದಾಖಲೆಯ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳ ಪ್ರದರ್ಶನದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿರುವ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಆದಿಲ್‌ ಸುಮರಿವಾಲಾ , ಕೆಲವು ದೇಶಗಳು ಆಫ್ರಿಕನ್ ಮೂಲದ ಅಥ್ಲೀಟ್‌ಗಳನ್ನು ಅಥ್ಲೆಟಿಕ್ಸ್‌ನಲ್ಲಿ ಕಣಕ್ಕಿಳಿಸಿತ್ತು. ಅವರು ಇರದೇ ಇದ್ದಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು ಎಂದು ಹೇಳಿದ್ದಾರೆ. ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನೊಂದಿಗೆ ಮಾತನಾಡಿದ ವಿಶ್ವ ಅಥ್ಲೆಟಿಕ್ಸ್ ಕೌನ್ಸಿಲ್‌ನ ಉಪಾಧ್ಯಕ್ಷರೂ ಆಗಿರುವ ಸುಮರಿವಾಲಾ, ಹಾಗೇನಾದರೂ ಆಗಿದ್ದಲ್ಲಿ, ಈಗಿರುವ 26 ಪದಕಗಳಿಗಿಂತ 41 ಭಾರತೀಯ ಅಥ್ಲೀಟ್‌ಗಳು ಪದಕಗಳೊಂದಿಗೆ ದೇಶಕ್ಕೆ ಮರಳುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

"ಭಾರತದಿಂದ, 65 ಕ್ರೀಡಾಪಟುಗಳು ವಿವಿಧ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅವರು 29 ಪದಕಗಳೊಂದಿಗೆ ಮನೆಗೆ ಮರಳುತ್ತಿದ್ದಾರೆ. ಇವುಗಳಲ್ಲಿ ಆರು ಚಿನ್ನ, 14 ಬೆಳ್ಳಿ ಮತ್ತು ಒಂಬತ್ತು ಕಂಚು ಸೇರಿವೆ. ನಾವು ಕನಿಷ್ಠ ಏಳು ಚಿನ್ನದ ಪದಕಗಳು ಮತ್ತು ಐದು ಬೆಳ್ಳಿ ಪದಕಗಳನ್ನು ಅಥ್ಲೆಟಿಕ್ಸ್‌ನಲ್ಲಿ ಕಳೆದುಕೊಂಡಿದ್ದೇವೆ. ಏಷ್ಯಾಡ್‌ ಅಥ್ಲೆಟಿಕ್ಸ್‌ನಲ್ಲಿ ಕೆಲವು ದೇಶಗಳು ಆಫ್ರಿಕನ್‌ ಮೂಲದ ಅಥ್ಲೀಟ್‌ಗಳನ್ನು ಕಣಕ್ಕೆ ಇಳಿಸಿತ್ತು. ಈ ಸಾಹಸವನ್ನು ಅವರು ಮಾಡದೇ ಇರುತ್ತಿದ್ದರೆ. ಭಾರತ 13 ಚಿನ್ನ, 19 ಬೆಳ್ಳಿ ಹಾಗೂ 9 ಕಂಚಿನ ಪದಕ ಗೆಲ್ಲುತ್ತಿತ್ತು ಎಂದಿದ್ದಾರೆ.ಇನ್ನು ಎಎಫ್‌ಐ ಅಧ್ಯಕ್ಷರು, ಅಫ್ರಿಕಾ ಮೂಲದ ಅಥ್ಲೀಟ್‌ಗಳು ವಿಶ್ವದ ಬೇರೆ ಬೇರೆ ದೇಶಗಳ ಪರವಾಗಿ ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಹಿಂದೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು.

ಎಎಫ್‌ಐ ಅಧ್ಯಕ್ಷರು ಭಾರತೀಯ ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಶ್ಲಾಘಿಸಿದರು. ಭಾರತೀಯ ಅಥ್ಲೀಟ್‌ಗಳು ಗೆದ್ದ ಪದಕಗಳ ಬಗ್ಗೆ ಮಾತನಾಡಿದ ಅವರು "ಏಳು ಅಥ್ಲೀಟ್‌ಗಳು ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೀಡಿದರೆ, ಐವರು ಕ್ರೀಡಾಕೂಟದಲ್ಲಿ ಋತುವಿನ ಅತ್ಯುತ್ತಮ ಪ್ರದರ್ಶನ ನೀಡಿದರು. ಇದಲ್ಲದೆ, ಮೂವರು ಅಥ್ಲೀಟ್‌ಗಳು ಹೊಸ ರಾಷ್ಟ್ರೀಯ ದಾಖಲೆಗಳನ್ನು ಸ್ಥಾಪಿಸಿದರೆ ಇತರ ಇಬ್ಬರು ಹೊಸ ಏಷ್ಯನ್ ಗೇಮ್ಸ್ ದಾಖಲೆಗಳನ್ನು ಸ್ಥಾಪಿಸಿದರು' ಎಂದು ವಿವರಿಸಿದರು.  ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ದಾಖಲಾದ ಯಶಸ್ಸಿಗೆ ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ ಗ್ರಾಮೀಣ ಮಟ್ಟದಲ್ಲಿ ಮಾಡಿದ ಕಾರ್ಯಕ್ರಮಗಳೇ ಕಾರಣ ಎಂದಿದ್ದಾರೆ.

ಚೀನಾದ ಅಧಿಕಾರಿಗಳ ವಿರುದ್ಧ ಅಂಜು ಬಾಬಿ ಜಾರ್ಜ್‌ ಆಕ್ರೋಶ: ಚೀನಾದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಭಾರತೀಯ ಅಥ್ಲೀಟ್‌ಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಹಿರಿಯ ಉಪಾಧ್ಯಕ್ಷ ಅಂಜು ಬಾಬಿ ಜಾರ್ಜ್ ಆರೋಪಿಸಿದ್ದಾರೆ. ಚೀನಾದ ಅಧಿಕಾರಿಗಳ ಆಪಾದಿತ ಕ್ರಮಗಳಿಂದಾಗಿ ಚೀನಾದಲ್ಲಿ ಗೆಲುವು ಸಾಧಿಸುವುದು ಭಾರತೀಯ ಕ್ರೀಡಾಪಟುಗಳಿಗೆ ಸವಾಲಾಗಿತ್ತು ಎಂದು ಹೇಳಿದ್ದಾರೆ. ಅಥ್ಲೀಟ್‌ಗಳಾದ ನೀರಜ್ ಚೋಪ್ರಾ, ಕಿಶೋರ್ ಕುಮಾರ್ ಜೆನಾ ಮತ್ತು ಅಣ್ಣು ರಾಣಿ ಅವರನ್ನು ಒಳಗೊಂಡ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಅಧಿಕಾರಿಗಳಲ್ಲಿ ಕೆಟ್ಟದಾಗಿ ನಿರ್ವಹಣೆ ತೋರಿದ್ದರು ಎಂದು ಆರೋಪಿಸಿದ್ದರು.

ಏಷ್ಯನ್‌ ಗೇಮ್ಸ್‌ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ವಿವಾದ, ಚೀನಾ ಕುತಂತ್ರದ ನಡುವೆಯೂ ಚಿನ್ನ ಗೆದ್ದ ನೀರಜ್‌!

"ಇದು ಪ್ರತ್ಯೇಕವಾದ ಘಟನೆಯಲ್ಲ. ಇದು ಹಿಂದೆ ಜ್ಯೋತಿ ಸೇರಿದಂತೆ ಹಲವು ಕ್ರೀಡಾಪಟುಗಳೊಂದಿಗೆ ಇದು ಸಂಭವಿಸಿದೆ. ನಿನ್ನೆ, ಇದು ನಮ್ಮ ಜಾವೆಲಿನ್ ಎಸೆತಗಾರ್ತಿ ಅಣ್ಣು ರಾಣಿಯೊಂದಿಗೆ ಸಂಭವಿಸಿದೆ. ಇಂದು, ಇದು ಜೆನಾ ಮತ್ತು ನೀರಜ್ ಅವರೊಂದಿಗೆ ಸಂಭವಿಸಿದೆ. ಇದು ಉದ್ದೇಶಪೂರ್ವಕವಾಗಿ ತೋರುತ್ತದೆ.ಏಷ್ಯಾಡ್‌ನಲ್ಲಿ ಇಂಥ ಘಟನೆಗಳು ಆಗುತ್ತಿರುವುದಕ್ಕೆ ಬೇಸರವಾಗಿದೆ ಎಂದು ಜಾರ್ಜ್ ಹೇಳಿದ್ದರು. ಚೀನಾದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲು ಫೆಡರೇಶನ್ ಪರಿಗಣಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

Asian Games 2023: ಜೈ ಹೋ ನೀರಜ್, ಮತ್ತೆ ಚಿನ್ನ ಗೆದ್ದ ಜಾವಲಿನ್ ಹೀರೋ..! ಕಿಶೋರ್‌ಗೆ ಬೆಳ್ಳಿ ಕಿರೀಟ

Latest Videos
Follow Us:
Download App:
  • android
  • ios