Asian Games 2023: ಗಾಲ್ಫ್‌ನಲ್ಲಿ ಪದಕ ಗೆದ್ದ ದೇಶದ ಮೊದಲ ಆಟಗಾರ್ತಿ ಬೆಂಗಳೂರಿನ ಅದಿತಿ ಅಶೋಕ್
ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ವಿಭಾಗದಲ್ಲಿ ಗಾಲ್ಪ್ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಗಾಲ್ಫರ್ ಎನ್ನುವ ಇತಿಹಾಸವನ್ನು ಬೆಂಗಳೂರಿನ ಅದಿತಿ ಅಶೋಕ್ ನಿರ್ಮಿಸಿದ್ದಾರೆ. ಈ ಮೊದಲು ಏಷ್ಯನ್ ಗೇಮ್ಸ್‌ನಲ್ಲಿ ಗಾಲ್ಫ್ ಸ್ಪರ್ಧೆಯಲ್ಲಿ ಭಾರತ ಇದುವರೆಗೂ 6 ಪದಕಗಳನ್ನು ಜಯಿಸಿದೆ. ಆ ಆರು ಪದಕಗಳನ್ನು ಭಾರತದ ಪುರುಷ ಗಾಲ್ಫರ್‌ಗಳು ಏಷ್ಯನ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದರು.
ಹಾಂಗ್ಝೂ(ಅ.10): ಭಾರತದ ತಾರಾ ಗಾಲ್ಫ್ ಪಟು ಅದಿತಿ ಅಶೋಕ್, ಭಾನುವಾರವಾದ ಇಂದು ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ ವೈಯಕ್ತಿಕ ವಿಭಾಗದ ಗಾಲ್ಫ್‌ನಲ್ಲಿ ಕರ್ನಾಟಕದ ಅದಿತಿ ಅಶೋಕ್ ಐತಿಹಾಸಿಕ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ್ದಾರೆ.
3 ಸುತ್ತುಗಳ ಆಟದ ಬಳಿಕ ಒಲಿಂಪಿಯನ್ ಅದಿತಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರು. ಈ ಮೂಲಕ ಶನಿವಾರದ ಅಂತ್ಯದ ವೇಳೆಗೆ ಅದಿತಿ ಅಶೋಕ್ ಎರಡನೇ ಸ್ಥಾನಿಯಾಗಿದ್ದ ಸ್ಪರ್ಧಿಗಿಂತ 7 ಶಾಟ್‌ಗಳ ಅಂತರ ಕಾಯ್ದುಕೊಂಡಿದ್ದರು. ಆದರೆ ಭಾನುವಾರ ನಡೆದ ಸ್ಪರ್ಧೆಯಲ್ಲಿ ಅದಿತಿಯನ್ನು ಹಿಂದಿಕ್ಕಿ ಥಾಯ್ಲೆಂಡ್‌ನ ಗಾಲ್ಫರ್ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾದರು. ಬೆಂಗಳೂರಿನ 25 ವರ್ಷದ ಅದಿತಿ ಅಶೋಕ್ 17 ಅಂಡರ್‌ಗಳಿಂದ 271 ಅಂಕಗಳನ್ನು ಗಳಿಸಿ ಬೆಳ್ಳಿ ಪದಕ ಜಯಿಸಿದರೆ, ಥಾಯ್ಲೆಂಡ್‌ನ ಅರ್ಪಿಚೆಯಾ ಯೂಬೊಲ್ 19 ಅಂಡರ್‌ಗಳಿಂದ 269 ಅಂಕಗಳನ್ನು ಗಳಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡರು.
Asian Games 2023: ಸ್ಕ್ವಾಶ್, ಟೆನಿಸ್‌ನಲ್ಲಿ ಭಾರತಕ್ಕೆ ಬಂಗಾರ..!
ಅದಿತಿ ಅಶೋಕ್, ಇಂದು ಚಿನ್ನ ಗೆಲ್ಲುವ ನೆಚ್ಚಿನ ಗಾಲ್ಫರ್ ಆಗಿ ಗುರುತಿಸಿಕೊಂಡಿದ್ದರು. ಯಾಕೆಂದರೆ ಕೊನೆಯ ದಿನದಾಟಕ್ಕೂ ಮುನ್ನ ಅದಿತಿ ಥಾಯ್ಲೆಂಡ್‌ನ ಆಟಗಾರ್ತಿಗಿಂತ 7 ಸ್ಟ್ರೋಕ್ ಮುಂದಿದ್ದರು. ಆದರೆ ಕೊನೆಯ ದಿನ ಥಾಯ್ಲೆಂಡ್‌ನ ಆಟಗಾರ್ತಿ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಗಾಲ್ಫರ್ ಅದಿತಿ:
ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ವಿಭಾಗದಲ್ಲಿ ಗಾಲ್ಪ್ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಗಾಲ್ಫರ್ ಎನ್ನುವ ಇತಿಹಾಸವನ್ನು ಬೆಂಗಳೂರಿನ ಅದಿತಿ ಅಶೋಕ್ ನಿರ್ಮಿಸಿದ್ದಾರೆ. ಈ ಮೊದಲು ಏಷ್ಯನ್ ಗೇಮ್ಸ್‌ನಲ್ಲಿ ಗಾಲ್ಫ್ ಸ್ಪರ್ಧೆಯಲ್ಲಿ ಭಾರತ ಇದುವರೆಗೂ 6 ಪದಕಗಳನ್ನು ಜಯಿಸಿದೆ. ಆ ಆರು ಪದಕಗಳನ್ನು ಭಾರತದ ಪುರುಷ ಗಾಲ್ಫರ್‌ಗಳು ಏಷ್ಯನ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದರು. ಇನ್ನು ಏಷ್ಯನ್ ಗೇಮ್ಸ್‌ನ ಗಾಲ್ಪ್ ಸ್ಪರ್ಧೆಯಲ್ಲಿ 13 ವರ್ಷಗಳ ಬಳಿಕ ಪದಕ ಜಯಿಸಲು ಭಾರತ ಸಫಲವಾಗಿದೆ. ಈ ಹಿಂದೆ 2010ರ ಏಷ್ಯನ್ ಗೇಮ್ಸ್‌ನ ಗಾಲ್ಫ್ ಸ್ಪರ್ಧೆಯಲ್ಲಿ ಕೊನೆಯ ಬಾರಿಗೆ ಪದಕ ಜಯಿಸಿತ್ತು.