ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 9ನೇ ದಿನದ ಅಂತ್ಯದ ವೇಳೆಗೆ ಭಾರತ ಪದಕ ಗಳಿಕೆ ವೇಗ ಹೆಚ್ಚಾಗಿದೆ. 9ನೇ ದಿನದಾಟದಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ಹೇಗಿತ್ತು? ಪಡೆದ ಪದಕಗಳು ಏಷ್ಟು? ಇಲ್ಲಿದೆ.
ಜಕರ್ತಾ(ಆ.27): ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮಹಿಳಾ ಲಾಂದ್ ಜಂಪ್ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ಬಾಚಿಕೊಂಡಿದೆ. ಭಾರತ ನಿನಾ ವಾರಕಿಲ್ ಲಾಂಗ್ ಜಂಪ್‌ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.
ನಿನಾ ವಾರಕಿಲ್ ಬೆಳ್ಳಿ ಸಾಧನೆಯಿಂದ ಭಾರತ 13 ಬೆಳ್ಳಿ ಪದಕ ಗೆದ್ದುಕೊಂಡಿದೆ. ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧೂ ಈಗಾಗಲೇ ಫೈನಲ್ ಪ್ರವೇಶಿಸಿದ್ದು, ಚಿನ್ನಕ್ಕಾಗಿ ಹೋರಾಟ ಮಾಡಲಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದ 9ನೇ ದಿನ ಭಾರತದ ಜಾವೆಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.
ಭಾರತ ಪದಕ ಪಟ್ಟಿಯಲ್ಲಿ 8 ಚಿನ್ನ, 13 ಬೆಳ್ಳಿ ಹಾಗೂ 20 ಕಂಚಿನೊಂದಿಗೆ ಒಟ್ಟು 41 ಪದಕ ಗೆದ್ದು 9ನೇ ಸ್ಥಾನದಲ್ಲಿದೆ. ಇನ್ನು ಮೊದಲ ಸ್ಥಾನದಲ್ಲಿರುವ ಚೀನಾ 86 ಚಿನ್ನ, 62 ಬೆಳ್ಳಿ ಹಾಗೂ 43 ಕಂಚಿನೊಂದಿಗೆ ಒಟ್ಟು 191 ಪದಕ ಪಡೆದುಕೊಂಡಿದೆ.
