Asianet Suvarna News Asianet Suvarna News

ಏಷ್ಯನ್ ಗೇಮ್ಸ್ ಮೆಲುಕು: ದಶಕಗಳ ಕಾಲ ಏಷ್ಯಾ ಸಾಮ್ರಾಟನಾಗಿ ಮೆರೆದ ಜಪಾನ್

18ನೇ ಏಷ್ಯನ್ ಗೇಮ್ಸ್ ಟೂರ್ನಿಗೆ ಕೇವಲ ಇನ್ನೆರಡೇ ದಿನ ಬಾಕಿ ಉಳಿದಿದ್ದು, ಈ ಬಾರಿ ಇಂಡೋನೇಷ್ಯಾದ ಜಕಾರ್ತ್’ನಲ್ಲಿ ಟೂರ್ನಿ ಆಯೋಜನೆಗೊಂಡಿದೆ. ದಶಕಗಳ ಕಾಲ ಜಪಾನ್ ಏಷ್ಯನ್ ಗೇಮ್ಸ್ ಸಾಮ್ರಾಟನಾಗಿ ಮೆರೆದದ್ದು ಕೂಟದ ಇನ್ನೊಂದು ಹೆಗ್ಗಳಿಕೆ. ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಏಷ್ಯನ್ ಗೇಮ್ಸ್ ಕೂಟದ ಒಂದು ಮೆಲುಕು ನಿಮ್ಮ ಮುಂದೆ...

Asian Games 2018 Facts and History of Asian Games Part 2
Author
Bengaluru, First Published Aug 16, 2018, 2:01 PM IST

18ನೇ ಏಷ್ಯನ್ ಗೇಮ್ಸ್ ಟೂರ್ನಿಗೆ ಕೇವಲ ಇನ್ನೆರಡೇ ದಿನ ಬಾಕಿ ಉಳಿದಿದ್ದು, ಈ ಬಾರಿ ಇಂಡೋನೇಷ್ಯಾದ ಜಕಾರ್ತ್’ನಲ್ಲಿ ಟೂರ್ನಿ ಆಯೋಜನೆಗೊಂಡಿದೆ. ದಶಕಗಳ ಕಾಲ ಜಪಾನ್ ಏಷ್ಯನ್ ಗೇಮ್ಸ್ ಸಾಮ್ರಾಟನಾಗಿ ಮೆರೆದದ್ದು ಕೂಟದ ಇನ್ನೊಂದು ಹೆಗ್ಗಳಿಕೆ. ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಏಷ್ಯನ್ ಗೇಮ್ಸ್ ಕೂಟದ ಒಂದು ಮೆಲುಕು ನಿಮ್ಮ ಮುಂದೆ...

1966ರಲ್ಲಿ ಬ್ಯಾಂಕಾಕ್‌ನಲ್ಲಿ ಗೇಮ್ಸ್: 
5ನೇ ಆವೃತ್ತಿಯ ಏಷ್ಯನ್ ಗೇಮ್ಸ್ 1966ರಲ್ಲಿ ಥಾಯ್ಲೆಂಡ್‌ನ ಬ್ಯಾಂಕಾಕ್’ನಲ್ಲಿ ನಡೆಯಿತು. 18 ರಾಷ್ಟ್ರಗಳು ಪಾಲ್ಗೊಂಡಿದ್ದವು. ಮೊದಲ ಬಾರಿಗೆ ಮಹಿಳಾ ವಾಲಿಬಾಲ್ ಸೇರ್ಪಡೆಗೊಳಿಸಲಾಯಿತು. 78 ಚಿನ್ನದೊಂದಿಗೆ ಜಪಾನ್ 164 ಪದಕ ಗೆದ್ದು ಅಗ್ರಸ್ಥಾನ ಪಡೆಯಿತು. 7 ಚಿನ್ನದೊಂದಿಗೆ 21 ಪದಕ ಗೆದ್ದ ಭಾರತ 5ನೇ ಸ್ಥಾನ ಪಡೆಯಿತು.

1970 -  ಬ್ಯಾಂಕಾಕ್
ದ.ಕೊರಿಯಾ ಭದ್ರತಾ ಸಮಸ್ಯೆ ದೃಷ್ಟಿಯಿಂದ ಏಷ್ಯಾಡ್ ಆಯೋಜನೆಗೆ ಹಿಂದೇಟು ಹಾಕಿದ್ದರಿಂದ, 1970ರಲ್ಲಿ ಸತತ 2ನೇ ಬಾರಿಗೆ ಬ್ಯಾಂಕಾಕ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿತು. 
18 ರಾಷ್ಟ್ರಗಳು ಪಾಲ್ಗೊಂಡಿದ್ದವು. 74 ಚಿನ್ನದೊಂದಿಗೆ 144 ಪದಕ ಗೆದ್ದು ಜಪಾನ್ ಮತ್ತೆ ಅಗ್ರಸ್ಥಾನ ಪಡೆಯಿತು. 6 ಚಿನ್ನದೊಂದಿಗೆ 25 ಪದಕ ಜಯಿಸಿದ ಭಾರತ 5ನೇ ಸ್ಥಾನ ಪಡೆಯಿತು.

1974 - ತೆಹ್ರಾನ್‌​​​​​​​
7ನೇ ಆವೃತ್ತಿಯ ಏಷ್ಯನ್ ಗೇಮ್ಸ್ 1974ರಲ್ಲಿ ಇರಾನ್‌ನ ತೆಹ್ರಾನ್‌ನಲ್ಲಿ ನಡೆಯಿತು. ಪಾಲ್ಗೊಳ್ಳುವ ರಾಷ್ಟ್ರಗಳ ಸಂಖ್ಯೆ ಈ ಬಾರಿ 25ಕ್ಕೇರಿಕೆಯಾಗಿತ್ತು. ಸಿಂಥೆಟಿಕ್ ಟ್ರ್ಯಾಕ್, ಫೋಟೋ ಫಿನಿಶ್ ಬಳಕೆ ಮಾಡಲಾಯಿತು.  175 ಪದಕದೊಂದಿಗೆ ಜಪಾನ್ ಅಗ್ರಸ್ಥಾನ ಪಡೆದರೆ, ಕೇವಲ 4 ಚಿನ್ನದೊಂದಿಗೆ 28 ಪದಕ ಗೆದ್ದ ಭಾರತ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

1978 - ಬ್ಯಾಂಕಾಕ್‌​​​​​​​
8ನೇ ಆವೃತ್ತಿ ಸಿಂಗಾಪುರದಲ್ಲಿ ನಡೆಯಬೇಕಿತ್ತು. ಆರ್ಥಿಕ ಸಮಸ್ಯೆಯಿಂದ ಹಿಂದೆ ಸರಿಯಿತು. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಸಲು ನಿರ್ಧರಿಸಲಾಯಿತು, ಆದರೆ ಸಾಧ್ಯವಾಗಲಿಲ್ಲ.
ಕೊನೆಗೆ 1978ರ ಏಷ್ಯಾಡ್ ಬ್ಯಾಂಕಾಕ್‌ನಲ್ಲಿ ನಡೆಯಿತು. 25 ರಾಷ್ಟ್ರಗಳು ಕಣಕ್ಕಿಳಿದವು. ಜಪಾನ್ 178 ಪದಕದೊಂದಿಗೆ ಅಗ್ರಸ್ಥಾನಿಯಾಯಿತು. ಭಾರತ 28 ಪದಕದೊಂದಿಗೆ 6ನೇ ಸ್ಥಾನ ಪಡೆಯಿತು.

Follow Us:
Download App:
  • android
  • ios