ದುಬೈ(ಸೆ.18): ಭಾರತ ವಿರುದ್ಧದ ಏಷ್ಯಾಕಪ್ ಟೂರ್ನಿ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದೆ. ಮಹತ್ವದ ಹೋರಾಟಕ್ಕೆಟೀಂ ಇಂಡಿಯಾ ತಂಡದಲ್ಲಿ ಎರಡು ಬದಲಾವಣೆ ಮಾಡಿದೆ.

ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಖಲೀಲ್ ಅಹಮ್ಮದ್ ಹಾಗೂ ವೇಗಿ ಶಾರ್ದೂಲ್ ಠಾಕೂರ್ ಬದಲು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಜಸ್‌ಪ್ರೀತ್ ಬುಮ್ರಾ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಮೂಲಕ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನ ಬಲಿಷ್ಠಗೊಳಿಸಿದೆ.

ಪಾಕಿಸ್ತಾನ ತಂಡದಲ್ಲಿ ಯಾವದೇ ಬದಲಾವಣೆ ಮಾಡಿಲ್ಲ. ಹಾಂಕಾಂಗ್ ವಿರುದ್ಧ ಕಣಕ್ಕಿಳಿದ ತಂಡವೇ ಭಾರತ ವಿರುದ್ದ ಆಡುತ್ತಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಬಲಿಷ್ಠವಾಗಿರುವ ಪಾಕಿಸ್ತಾನ ಇದೀಗ ಭಾರತಕ್ಕೆ ಕಠಿಣ ಸವಾಲು ನೀಡಲಿದೆ.