ನವದೆಹಲಿ[ಸೆ.10]: ಏಷ್ಯಾಕಪ್‌ಗೆ ಅರ್ಹತೆ ಪಡೆದಿರುವ ಹಾಂಕಾಂಗ್ ತಂಡಕ್ಕೆ ಇದುವರೆಗೂ ಏಕದಿನ ಮಾನ್ಯತೆ ದೊರಕಿಲ್ಲ. ಆದರೆ, ಹಾಂಕಾಂಗ್ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯಗಳನ್ನಾಡಲಿದೆ. 

ಈ ಎರಡೂ ಪಂದ್ಯಗಳಿಗೆ ಅಂತಾರಾಷ್ಟ್ರೀಯ ಪಂದ್ಯಗಳ ಮಾನ್ಯತೆ ನೀಡಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಿಳಿಸಿದೆ. ಸೆ.15ರಿಂದ ಏಷ್ಯಾಕಪ್ ಆರಂಭವಾಗಲಿದೆ. ಹಾಂಕಾಂಗ್, ಸೆ.16ರಂದು ಪಾಕಿಸ್ತಾನ ಮತ್ತು ಸೆ.18ರಂದು ಭಾರತ ತಂಡವನ್ನು ಎದುರಿಸಲಿದೆ. ಹಾಂಗ್’ಕಾಂಗ್ ಐಸಿಸಿಯ ಸಹ ಸದಸ್ಯ ರಾಷ್ಟ್ರವಾಗಿದ್ದರೂ, ಐಸಿಸಿ ಏಕದಿನ ತಂಡದ ಮಾನ್ಯತೆ ಗಳಿಸಿಲ್ಲ.

ಇದನ್ನು ಓದಿ: ಏಷ್ಯಾಕಪ್’ಗೆ ಟೀಂ ಇಂಡಿಯಾ ಪ್ರಕಟ: ಕೊಹ್ಲಿಗೆ ರೆಸ್ಟ್, ಕನ್ನಡಿಗನಿಗೆ ಸ್ಥಾನ

ಏಷ್ಯಾಕಪ್ ಟೂರ್ನಿಯು ಸೆಪ್ಟೆಂಬರ್ 15ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.