Asianet Suvarna News Asianet Suvarna News

ಏಷ್ಯಾಕಪ್ ಗೆಲ್ಲುವ ತಂಡ ಯಾವುದು? ತಂಡಗಳ ಸ್ಟ್ರೆಂತ್ ವೀಕ್ನೆಸ್ ಏನು?

ಇಂದಿನ ಏಷ್ಯಾ ಕಪ್ ಕಾಳಗ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವೆ ಕಾದಾಟ ನಡೆಯಲಿದೆ. ಇನ್ನು ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿದ್ದು, ಆ ತಂಡಗಳ ಸ್ಟ್ರೆಂತ್ ವೀಕ್ನೆಸ್ ಏನು ನೋಡಿ?

Asia Cup Cricket  6 Teams Strength and Weakness
Author
Dubai - United Arab Emirates, First Published Sep 15, 2018, 2:05 PM IST

ದುಬೈ, (ಸೆ.15): ಇಂಗ್ಲೆಂಡ್ ಪ್ರವಾಸವನ್ನು ಸೋಲಿನೊಂದಿಗೆ ಮುಕ್ತಾಯಗೊಳಿಸಿರುವ ಭಾರತ ತಂಡ, ಏಷ್ಯ ಕಪ್‌ನಲ್ಲಿ ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ಒತ್ತಡ ನಿಭಾಯಿಸಿ ಆಡಬೇಕಿದೆ. ರೋಹಿತ್ ಶರ್ಮಾ ಬಲಿಷ್ಠ ತಂಡಗಳ ಎದುರು ತಂಡ ಮುನ್ನಡೆಸಿದ ಅನುಭವ ಹೊಂದಿಲ್ಲ. ಆದರೆ ಎಂ.ಎಸ್.ಧೋನಿ ಉಪಸ್ಥಿತಿ ರೋಹಿತ್ ಕೆಲಸವನ್ನು ಸುಲಭಗೊಳಿಸಲಿದೆ. 

ಆದರೆ, ಪ್ರತಿಭಾನ್ವಿತರಿಂದ ಕೂಡಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರಬಲ ಪೈಪೋಟಿ ಎದುರಾಗಲಿದೆ. ಧವನ್, ರಾಹುಲ್, ರಾಯುಡು, ಪಾಂಡೆ, ಜಾಧವ್, ಕಾರ್ತಿಕ್, ಪಾಂಡ್ಯ ಬ್ಯಾಟಿಂಗ್ ಪಡೆಯಲ್ಲಿದ್ದರೆ, ಭುವನೇಶ್ವರ್, ಬೂಮ್ರಾ, ಶಾರ್ದೂಲ್, ಖಲೀಲ್ ವೇಗದ ಪಡೆಯಲ್ಲಿದ್ದಾರೆ. ಸ್ಪಿನ್ನರ್‌ಗಳಾದ ಚಹಲ್, ಕುಲ್ದೀಪ್ ಫಲಿತಾಂಶ ಬದಲಿಸಬಲ್ಲರು. ಮೇಲ್ನೋಟಕ್ಕೆ ಭಾರತ ಸಮತೋಲನ ಹೊಂದಿದೆ. 

ಇದನ್ನು ಓದಿ: 2018ರ ಏಷ್ಯಾಕಪ್ ಏಕದಿನ ಸರಣಿ-ಎಲ್ಲಿ? ಯಾವಾಗ? ಇಲ್ಲಿದೆ ಡಿಟೇಲ್ಸ್!

2019ರ ವಿಶ್ವಕಪ್ ದೃಷ್ಟಿಯಿಂದ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಲು ಭಾರತ ತಂಡಕ್ಕಿದು ಉತ್ತಮ ಅವಕಾಶ ಕಲ್ಪಿಸಲಿದೆ. ಇಷ್ಟು ಭಾರತ ತಂಡದ ಕಥೆಯಾದರೆ, ಇನ್ನುಳಿದ ತಂಡಗಳ ಸ್ಟ್ರೆಂತ್ ವೀಕ್ನೆಸ್ ಏನು ಎನ್ನುವುದನ್ನ ಮುಂದೆ ಓದಿ.

ಪಾಕಿಸ್ತಾನ
ವಿಶ್ವ ಶ್ರೇಷ್ಠ ವೇಗಿ ಮೊಹಮದ್ ಆಮೀರ್, ಪ್ರಬಲ ಆಲ್ ರೌಂಡರ್ ಹಸನ್ ಅಲಿ, ಅತ್ಯುತ್ತಮ ಆರಂಭಿಕ ಫಖರ್ ಜಮಾನ್, ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಗಳಾದ ಬಾಬರ್ ಆಜಂ, ಹ್ಯಾರಿಸ್ ಸೋಹೈಲ್, ಅನುಭವಿ ಶೋಯಿಬ್ ಮಲಿಕ್, ಹೀಗೆ ಪಾಕಿಸ್ತಾನ ತಂಡ ಭಾರೀ ಬಲಿಷ್ಠವಾಗಿದೆ.

ಶ್ರೀಲಂಕಾ
ಲಂಕಾ ಕ್ರಿಕೆಟ್‌ನಲ್ಲಿ ಸಂಕ್ರಮಣ ಕಾಲ ಮುಂದುವರಿದಿದೆ. ಸಂಗಾ, ಮಹೇಲಾರಂತಹವರ ಸ್ಥಾನವನ್ನು ತುಂಬಲು ಇನ್ನೂ ಸಾಧ್ಯವಾಗುತ್ತಿಲ್ಲ. ಆದರೂ ಏಂಜೆಲೋ ಮ್ಯಾಥ್ಯೂಸ್, ಉಪುಲ್ ತರಂಗ, ತಿಸಾರ ಪೆರೇರಾ, ಲಸಿತ್ ಮಾಲಿಂಗರಂತಹ ಅನುಭವಿಗಳಿದ್ದಾರೆ. ಜತೆಗೆ ಯುವಕರಾದ ಅಖಿಲ ಧನಂಜಯ, ದಸುನ್ ಶನಕ, ಕಸುನ್ ರಜಿತಾ ಬಲ ಹೆಚ್ಚಿಸಲಿದ್ದಾರೆ. ಬಾಂಗ್ಲಾದೇಶ ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ಉತ್ತಮ ಪ್ರದರ್ಶನ ತೋರಿದೆ. ಕಳೆದ ಬಾರಿ ಟಿ೨೦ ಮಾದರಿಯಲ್ಲಿ ಟೂರ್ನಿ ನಡೆದಾಗ ತಂಡ ಫೈನಲ್‌ಗೇರಿತ್ತು. ಮೊರ್ತಜಾ ತಂಡ ನಿಧಾನಗತಿ ಪಿಚ್‌ಗಳಲ್ಲಿ ಉತ್ತಮ ಆಟವಾಡಬಲ್ಲ ಸಾಮರ್ಥ್ಯ ಹೊಂದಿದೆ.

ಆಫ್ಘಾನಿಸ್ತಾನ
ಟಿ20 ಮಾತ್ರವಲ್ಲ ಏಕದಿನದಲ್ಲೂ ಮಿಂಚಲು ಆಫ್ಘಾನಿಸ್ತಾನಕ್ಕಿದು ಉತ್ತಮ ಅವಕಾಶ. ಎಲ್ಲರ ಕಣ್ಣು ಟಿ20 ತಾರೆ ರಶೀದ್ ಖಾನ್ ಮೇಲಿದೆ. ಕ್ರಿಕೆಟ್ ಶಿಶು ಅಫ್ಘಾನ್ ಯಾವ ಸಂದರ್ಭದಲ್ಲಿ ಅಚ್ಚರಿ ಫಲಿತಾಂಶ ನೀಡದರೂ ಅಚ್ಚರಿ ಪಡಬೇಕಿಲ್ಲ.

ಹಾಂಕಾಂಗ್
ಹಾಂಕಾಂಗ್ ತಂಡಕ್ಕೆ ಭಾರತೀಯ ಮೂಲದ ಅಂಶುಮನ್ ರಥ್ ನಾಯಕರಾಗಿದ್ದಾರೆ. ಪೂರ್ಣ ಪ್ರಮಾಣದಲ್ಲಿ ವೃತ್ತಿಪರರನ್ನು ಹೊಂದಿರದಿದ್ದರೂ, ಹಾಂಕಾಂಗ್‌ನಿಂದ ಕಠಿಣ ಸ್ಪರ್ಧೆ ನಿರೀಕ್ಷಿಸಬಹುದು.

Follow Us:
Download App:
  • android
  • ios