ಏಷ್ಯಾಕಪ್ ಟೂರ್ನಿ ಗೆಲುವಿಗೆ ಭಾರತ ಸೇರಿದಂತೆ 6 ಏಷ್ಯಾ ತಂಡಗಳು ಭರ್ಜರಿ ಸಿದ್ಧತೆ ನಡೆಸಿದೆ. ನಾಳೆಯಿಂದ ಆರಂಭವಾಗುವ ಪ್ರತಿಷ್ಠಿತ ಟೂರ್ನಿಯಲ್ಲಿ ಉದ್ಘಾಟನಾ ಪಂದ್ಯ ಆಡೋ ತಂಡ ಯಾವುದು? ಟೀಂ ಇಂಡಿಯಾ ಹೋರಾಟ ಯಾವಾಗ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ದುಬೈ(ಸೆ.14): ಪ್ರತಿಷ್ಠಿತ ಏಷ್ಯಾಕಪ್ ಸರಣಿ ಆರಂಭಕ್ಕೆ ಇನ್ನೊಂದು ದಿನ ಬಾಕಿ. ಸೆಪ್ಟೆಂಬರ್ 15 ರಿಂದ ದುಬೈನಲ್ಲಿ ಏಷ್ಯಾ ತಂಡಗಳ ಏಕದಿನ ಸರಣಿ ಆರಂಭವಾಗಲಿದೆ. ಭಾರತ ಹಾಗೂ ಪಾಕಿಸ್ತಾನ ಸರಣಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿದೆ.

ಏಷ್ಯಾಕಪ್ ಟೂರ್ನಿ ಸೆ.15 ರಿಂದ ಆರಂಭಗೊಂಡರೆ, ಭಾರತ ತನ್ನ ಹೋರಾಟವನ್ನ ಸೆಪ್ಟೆಂಬರ್ 18 ರಿಂದ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಭಾರತ, ಹಾಂಗ್ ಕಾಂಗ್ ವಿರುದ್ಧ ಹೋರಾಟ ನಡೆಸಿದರೆ, ಸೆ.19 ರಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ಪಂದ್ಯ ಆಡಲಿದೆ.

ಭಾರತ, ಪಾಕಿಸ್ತಾನ, ಶ್ರೀಲಂಕ, ಬಾಂಗ್ಲಾದೇಶ, ಅಫ್ಘಾನಿಸ್ತಾ ಹಾಗೂ ಹಾಂಕ್ ಕಾಂಗ್ ಒಟ್ಟು 6 ದೇಶಗಳು ಏಷ್ಯಾ ಕಪ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಯ ವೇಳಾ ಪಟ್ಟಿ ಇಲ್ಲಿದೆ.

ಸೆ.15ಬಾಂಗ್ಲಾದೇಶ-ಶ್ರೀಲಂಕಸಂಜೆ 5ಕ್ಕೆ
ಸೆ.16ಪಾಕಿಸ್ತಾನ-ಹಾಂಕ್ ಕಾಂಗ್ಸಂಜೆ 5ಕ್ಕೆ
ಸೆ.17ಶ್ರೀಲಂಕಾ-ಅಫ್ಘಾನಿಸ್ತಾನ ಸಂಜೆ 5ಕ್ಕೆ
ಸೆ.18ಭಾರತ-ಹಾಂಕ್ ಕಾಂಗ್ಸಂಜೆ 5ಕ್ಕೆ
ಸೆ.19ಭಾರತ-ಪಾಕಿಸ್ತಾನಸಂಜೆ 5ಕ್ಕೆ
ಸೆ.20ಬಾಂಗ್ಲಾದೇಶ-ಅಫ್ಘಾನಿಸ್ತಾನಸಂಜೆ 5ಕ್ಕೆ
ಸೆ.21TBC vs TCB(ಸೂಪರ್ 4)ಸಂಜೆ 5ಕ್ಕೆ
TBC vs TCB(ಸೂಪರ್ 4)ಸಂಜೆ 5ಕ್ಕೆ
ಸೆ.23TBC vs TCB(ಸೂಪರ್ 4)ಸಂಜೆ 5ಕ್ಕೆ
ಸೆ.25TBC vs TCB(ಸೂಪರ್ 4)ಸಂಜೆ 5ಕ್ಕೆ
ಸೆ.26TBC vs TCB(ಸೂಪರ್ 4)ಸಂಜೆ 5ಕ್ಕೆ
ಸೆ.28TBC vs TCB(ಫೈನಲ್)ಸಂಜೆ 5ಕ್ಕೆ