ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಭಾರತ ತಂಡವಿಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಕಾದಾಡಲಿದೆ. ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಕೈಬಿಟ್ಟು ಕೆ.ಎಲ್ ರಾಹುಲ್ ಅವರಿಗೆ ಸ್ಥಾನ ಕಲ್ಪಿಸಿ ಎಂದು ದಾದಾ ಆಗ್ರಹಿಸಿದ್ದಾರೆ.

ದುಬೈ[ಸೆ.23]: ಏಷ್ಯಾಕಪ್’ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಬೇಕು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಭಾರತ ತಂಡವಿಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಕಾದಾಡಲಿದೆ. ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಕೈಬಿಟ್ಟು ಕೆ.ಎಲ್ ರಾಹುಲ್ ಅವರಿಗೆ ಸ್ಥಾನ ಕಲ್ಪಿಸಿ ಎಂದು ದಾದಾ ಆಗ್ರಹಿಸಿದ್ದಾರೆ. ನಾನು ತಂಡದಲ್ಲಿರುವ ಎಲ್ಲಾ ಆಟಗಾರರನ್ನು ಗೌರವಿಸುತ್ತೇನೆ. ನನಗನಿಸುವ ಮಟ್ಟಿಗೆ ಕಾರ್ತಿಕ್ ಬದಲು ರಾಹುಲ್’ಗೆ ಅವಕಾಶ ನೀಡೋದು ಉತ್ತಮ ಎಂದೆನಿಸುತ್ತದೆ. ಕಾರ್ತಿಕ್’ಗಿಂತ ರಾಹುಲ್ ಉತ್ತಮ ಬ್ಯಾಟ್ಸ್’ಮನ್ ಎಂದು ಗಂಗೂಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅನುಪಸ್ಥಿತಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಮೇಲೆ ಪರಿಣಾಮ ಬೀರಿದೆ. ಧೋನಿ ಬ್ಯಾಟಿಂಗ್’ನಲ್ಲಿ ಫಾರ್ಮ್’ಗೆ ಮರುಳಬೇಕಿದೆ ಎಂದು ದಾದ ಅಭಿಪ್ರಾಯಪಟ್ಟಿದ್ದಾರೆ.