ದುಬೈ(ಸೆ.13): ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಮುಗಿಸಿದ ಟೀಂ ಇಂಡಿಯಾ ಇದೀಗ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಸಜ್ಜಾಗುತ್ತಿದೆ. ಸೆಪ್ಟೆಂಬರ್ 15 ರಿಂದ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ.

ಇತ್ತ ಏಕದಿನ ತಂಡದ ಕ್ರಿಕೆಟಿಗರು ಮುಂಬೈನಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಿಗಧಿತ ಓವರ್ ಕ್ರಿಕೆಟ್ ಬಳಿಕ ವಿಶ್ರಾಂತಿಗೆ ಜಾರಿದ್ದ ಎಂ ಎಸ್ ಧೋನಿ ಇದೀಗ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ.

 

 

ಎಂ ಎಸ್ ಧೋನಿ ಜೊತೆ ನಾಯಕ ರೋಹಿತ್ ಶರ್ಮಾ, ಕನ್ನಡಿಗ ಮನೀಶ್ ಪಾಂಡೆ, ಕೇದಾರ್ ಜಾದವ್, ಯುಜುವೇಂದ್ರ ಚೆಹಾಲ್, ಹಾಗೂ ಕುಲ್ದೀಪ್ ಯಾದವ್ ದುಬೈಗೆ ಪ್ರಯಾಣ ಬೆಳೆಸಿದರು.

 

 

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನ ಸೆಪ್ಟೆಂಬರ್ 18ರಂದು  ಹಾಂಕ್ ಕಾಂಗ್ ವಿರುದ್ದ ಆಡಲಿದೆ. ಸೆಪ್ಟೆಂಬರ್ 19 ರಂದು ಭಾರತ ಬದ್ಧವೈರಿ ಪಾಕಿಸ್ತಾನ ತಂಡವನ್ನ ಎದುರಿಸಲಿದೆ.

ಇದನ್ನೂ ಓದಿ: ಧೋನಿ ಬಹಿರಂಗ ಪಡಿಸಿದ್ರು ನಾಯಕತ್ವ ತ್ಯಜಿಸಿದ ಕಾರಣ!