ಲಂಡನ್(ಸೆ.11): ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಟೂರ್ನಿ ಇದೀಗ ಅಂತಿಮ ಘಟ್ಟ ತಲುಪಿದೆ. ಆಸ್ಟ್ರೇಲಿಯಾ ವಿರುದ್ದ ಆತಿಥೇಯ ಇಂಗ್ಲೆಂಡ್ ಸರಣಿ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಸದ್ಯ 1-2 ಅಂತರ ಹಿನ್ನಡೆಯಲ್ಲಿರುವ ಇಂಗ್ಲೆಂಡ್ ತಂಡ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟಸಿದೆ. .ಕಳಪೆ ಫಾರ್ಮ್‌ನಲ್ಲಿದ್ದ ಜೇಸನ್ ರಾಯ್‌ಗೆ ಕೊಕ್ ನೀಡಲಾಗಿದೆ. 

ಇದನ್ನೂ ಓದಿ: ಕೆಟ್ಟಅಂಪೈರಿಂಗ್‌: ಕ್ರಿಸ್‌, ವಿಲ್ಸನ್‌ ಆ್ಯಷಸ್‌ನಿಂದ ಔಟ್‌!

ಕೆನ್ನಿಂಗ್ಟನ್ ಓವಲ್‌ನಲ್ಲಿ ಸೆ.12 ರಿಂದ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿದ್ದ ಇಂಗ್ಲೆಂಡ್, 2ನೇ ಪಂದ್ಯವನ್ನು ಡ್ರಾಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನು 3ನೇ ಪಂದ್ಯ ಗೆದ್ದು ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಿತ್ತು. ಆದರೆ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸೋ ಮೂಲಕ ಇಂಗ್ಲೆಂಡ್ 1-2 ಅಂತರದ ಹಿನ್ನಡೆ ಅನುಭವಿಸಿದೆ. ಇದೀಗ ಅಂತಿಮ ಪಂದ್ಯಕ್ಕಾಗಿ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

ಇದನ್ನೂ ಓದಿ: ಆ್ಯಷಸ್ ಕದನ: ಇಂಗ್ಲೆಂಡ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ

ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡ:
ಜೋ ರೂಟ್(ನಾಯಕ), ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ರೊರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರ್ರನ್, ಜೋ ಡೆನ್ಲಿ, ಜ್ಯಾಕ್ ಲೀಚ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್