ನವದೆಹಲಿ(ಆ.29): ಕಳಪೆ ಅಂಪೈರಿಂಗ್‌ ಕಾರಣ ಐಸಿಸಿ ಅಂಪೈರ್‌ಗಳಾದ ಜೋಯೆಲ್‌ ವಿಲ್ಸನ್‌ ಹಾಗೂ ಕ್ರಿಸ್‌ ಗಾಫನೆ ಆ್ಯಷಸ್‌ ಸರಣಿಯಿಂದ ಹೊರಬಿದ್ದಿದ್ದಾರೆ. 

ಆ್ಯಷಸ್ ಕದನ: ಸ್ಟೋಕ್ಸ್ ಕೆಚ್ಚೆದೆಯ ಶತಕಕ್ಕೆ ಒಲಿದ ವಿಜಯಲಕ್ಷ್ಮಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಪೈರಿಂಗ್‌ ಗುಣಮಟ್ಟಕಾಪಾಡುವ ಹಿನ್ನೆಲೆಯಿಂದ ಐಸಿಸಿ ಗಂಭೀರ ಹೆಜ್ಜೆಯನ್ನಿಟ್ಟಿದೆ. ಮುಂದಿನ ವಾರ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗುವ 4ನೇ ಟೆಸ್ಟ್‌ಗೆ ಮರಾ​ಯಸ್‌ ಎರಾ​ಸ್ಮಸ್‌ ಹಾಗೂ ರುಚಿರ ಪಲ್ಲಿಯಗುರುಗೆ ಅವರನ್ನು ಮೈದಾನದ ಅಂಪೈರ್‌ಗಳಾಗಿ ನೇಮಕ ಮಾಡಲಾಗಿದೆ. 

ಡೇನಿಸ್ ಲಿಲ್ಲಿ ದಾಖಲೆ ಅಳಿಸಿ ಹಾಕಿದ ನೇಥನ್ ಲಯನ್..!

ಹೆಡಿಂಗ್ಲಿ ಪಂದ್ಯದ ಕೊನೆ ದಿನವೂ ಕಳಪೆ ಅಂಪೈರಿಂಗ್‌ ಕಂಡು ಬಂದಿತ್ತು. 3ನೇ ಟೆಸ್ಟ್‌ ವೇಳೆ ಕ್ರಿಸ್‌ 7 ಕೆಟ್ಟತೀರ್ಪು​ಗ​ಳನ್ನು ನೀಡಿ​ದ್ದರು. ಸರಣಿಯ ಮೊದಲ ಪಂದ್ಯದಲ್ಲಿ ವಿಲ್ಸನ್‌ 8 ಕೆಟ್ಟತೀರ್ಪು ನೀಡಿ ಭಾರೀ ಟೀಕೆಗೆ ಗುರಿ​ಯಾ​ಗಿ​ದ್ದರು.

8 ಕೆಟ್ಟ ತೀರ್ಪು ಕೊಟ್ಟ ಅಂಪೈರ್‌ಗೆ ’ಕುರುಡ’ನ ಪಟ್ಟ ಕೊಟ್ಟ ಅಭಿಮಾನಿ..!