Asianet Suvarna News Asianet Suvarna News

ಆ್ಯಷಸ್ ಕದನ: ಮೂರನೇ ಟೆಸ್ಟ್ ನಿಂದ ಹೊರಬಿದ್ದ ಸ್ಮಿತ್..!

ಆ್ಯಷಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಬ್ಯಾಟಿಂಗ್ ಶಕ್ತಿ ಎನಿಸಿರುವ ಸ್ಟೀವ್ ಸ್ಮಿತ್ ಗಾಯದ ಸಮಸ್ಯೆಯಿಂದಾಗಿ ಲೀಡ್ಸ್ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Ashes 2019 Steve Smith Ruled Out Of Third Test
Author
London, First Published Aug 20, 2019, 5:14 PM IST
  • Facebook
  • Twitter
  • Whatsapp

ಲಂಡನ್[ಆ.20]: ಕುತ್ತಿಗೆ ನೋವಿನಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಆಗಸ್ಟ್ 22ರಿಂದ ಆರಂಭವಾಗಲಿರು ಮೂರನೇ ಆ್ಯಷಸ್ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ವಿಚಾರವನ್ನು ಖಚಿತ ಪಡಿಸಿದೆ.

ಬೌನ್ಸರ್‌ ಎಸೆತಕ್ಕೆ ಗಾಯಗೊಂಡ ಸ್ಮಿತ್ ಪಂದ್ಯದಿಂದ ಔಟ್; ಜೋಫ್ರಾ ವಿರುದ್ಧ ಆಕ್ರೋಶ!

ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಜೋಫ್ರಾ ಆರ್ಚರ್ ಬೌಲಿಂಗ್ ವೇಳೆ ಸ್ಮಿತ್ ಗಾಯಗೊಂಡಿದ್ದರು. ಆರ್ಚರ್ ಎಸೆದ ಬೌನ್ಸರ್ ಸ್ಮಿತ್ ಕುತ್ತಿಗೆಗೆ ಬಡಿದಿತ್ತು. ನೋವು ತಾಳಲಾರದೇ ಸ್ಮಿತ್ ನೆಲಕ್ಕೆ ಉರುಳಿದ್ದರು. ಆ ಬಳಿಕ ಚೇತರಿಸಿಕೊಂಡು ಮತ್ತೆ ಕ್ರೀಸ್’ಗಿಳಿದರಾದರೂ ಹೆಚ್ಚು ಹೊತ್ತು ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಸ್ಮಿತ್ 92 ರನ್ ಬಾರಿಸಿ ಕ್ರಿಸ್ ವೋಕ್ಸ್’ಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಅನುಪಸ್ಥಿತಿಯಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಮಾರ್ನಸ್[59] ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು.

ಆ್ಯಷಸ್ ಕದನ: ಲಾರ್ಡ್ಸ್ ಟೆಸ್ಟ್ ಡ್ರಾನಲ್ಲಿ ಅಂತ್ಯ

ಸ್ಮಿತ್ ಆ್ಯಷಸ್ ಸರಣಿಯ ಮೊದಲ ಪಂದ್ಯದ ಎರಡು ಇನಿಂಗ್ಸ್’ಗಳಲ್ಲೂ 142 ಹಾಗೂ 144 ರನ್ ಬಾರಿಸಿ ಗಮನ ಸೆಳೆದಿದ್ದರು. ಎರಡನೇ ಪಂದ್ಯದಲ್ಲೂ ಕೇವಲ 8 ರನ್’ಗಳಿಂದ ಶತಕ ವಂಚಿತರಾಗಿದ್ದರು. ಆ್ಯಷಸ್ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಜಯಿಸುವುದರೊಂದಿಗೆ 1-0 ಮುನ್ನಡೆ ಕಾಯ್ದುಕೊಂಡಿತ್ತು. ಎರಡನೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಸರಣಿ ಸಮಬಲ ಸಾಧಿಸಲು ಇಂಗ್ಲೆಂಡ್ ಇದೀಗ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.   

Follow Us:
Download App:
  • android
  • ios