ಕೋಲ್ಕತಾ: ಫುಟ್ಬಾಲ್ ವಿಶ್ವಕಪ್‌ನಿಂದ ಅರ್ಜೆಂಟೀನಾ ತಂಡ ಹೊರ ಬೀಳುತ್ತಿದ್ದಂತೆ, ಲಿಯೊನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ತಂಡದ ಅಭಿಮಾನಿಯೊಬ್ಬ ಪಶ್ಚಿಮ ಬಂಗಾಳದಲ್ಲಿ ನೇಣಿಗೆ ಶರಣಾಗಿದ್ದಾನೆ. 

ಈ ಮೊದಲು ಕ್ರೊವೇಷಿಯಾ ವಿರುದ್ಧ ಅರ್ಜೆಂಟೀನಾ ಸೋಲುಂಡಿದ್ದಾಗ ಕೇರಳದಲ್ಲಿ ಮೆಸ್ಸಿ ಅಭಿಮಾನಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. 

ಇದೀಗ ಶನಿವಾರ (ಜೂ.30) ನಡೆದ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ 4-3ರಿಂದ ಸೋಲುಂಡಿತ್ತು. ಪಂದ್ಯ ಮುಗಿಯುತ್ತಿದ್ದಂತೆ ಬೇಸರದಿಂದ ಊಟವೂ ಮಾಡದೇ ಕೋಣೆ ಸೇರಿದ್ದ ಪ.ಬಂಗಾಳದ ಮಾಲ್ಡಾ ಜಿಲ್ಲೆಯ ಮೊನೊಟೋಶ್ ಹಾಲ್ಡರ್ (20), ಭಾನುವಾರ ಕೋಣೆಯ ಬಾಗಿಲು ತೆರೆದಿರಲಿಲ್ಲ. 

ಕೊನೆಗೆ ಅನುಮಾನದಿಂದ ಪೊಲೀಸರ ಸಹಾಯ ಪಡೆದು ಬಾಗಿಲು ತೆರೆದಾಗ ಆತ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮೆಸ್ಸಿ ಅಭಿಮಾನಿಯ ಮೃತದೇಹ ಮೀನಾಚಿಲ್ ನದಿಯಲ್ಲಿ ಪತ್ತೆ..!