ಅರುಮನೂರ್ ಹಳ್ಳಿಯಿಂದ 10 ಕಿ.ಮೀ. ದೂರದಲ್ಲಿರುವ ಇಲ್ಲಿಕಲ್ ಸೇತುವೆ ಬಳಿ ಮೃತದೇಹ ಪತ್ತೆಯಾಗಿದ್ದು ಪೊಲೀಸರು,ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ನದಿಯಿಂದ ಹೊರಗೆ ತೆಗೆದಿದ್ದಾರೆ.
ಕೊಟ್ಟಾಯಂ(ಜೂ.25]: ಅರ್ಜೆಂಟೀನಾ ಕಳಪೆ ಪ್ರದರ್ಶನದಿಂದ ಬೇಸರಗೊಂಡು ಮನೆಬಿಟ್ಟು ಹೋಗಿದ್ದ ಇಲ್ಲಿನ ಮೆಸ್ಸಿ ಫುಟ್ಬಾಲ್ ಅಭಿಮಾನಿ ಡೀನು ಅಲೆಕ್ಸ್ ಮೃತದೇಹ ಮೀನಾಚಿಲ್ ನದಿಯಲ್ಲಿ ಪತ್ತೆಯಾಗಿದೆ.
ಅರುಮನೂರ್ ಹಳ್ಳಿಯಿಂದ 10 ಕಿ.ಮೀ. ದೂರದಲ್ಲಿರುವ ಇಲ್ಲಿಕಲ್ ಸೇತುವೆ ಬಳಿ ಮೃತದೇಹ ಪತ್ತೆಯಾಗಿದ್ದು ಪೊಲೀಸರು,ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ನದಿಯಿಂದ ಹೊರಗೆ ತೆಗೆದಿದ್ದಾರೆ.
ಗುರವಾರ ತಡರಾತ್ರಿ ನಡೆದ ಕ್ರೊವೇಷೀಯಾ ವಿರುದ್ಧ ಪಂದ್ಯದಲ್ಲಿ ಅರ್ಜೆಂಟೀನಾ 0-3 ಅಂತರದಿಂದ ಸೋತಿತ್ತು. ಇದರಿಂದ ಬೇಸರಗೊಂಡಿದ್ದ ಡೀನು, ಆತ್ಮಹತ್ಯೆ ಪತ್ರ ಬರೆದಿಟ್ಟು ಮನೆ ತೊರೆದಿದ್ದರು.