'ಓಂ ನಮಃ ಶಿವಾಯ' ಅಂದರೆ 'ಶಿವನಿಗೆ ಶರಣಾಗುವುದು' ಎಂದಾಗಿದೆ
ನವದೆಹಲಿ(ಆ.10): ಆರ್ಸೆನಲ್ ಸ್ಟಾರ್ ಫುಟ್ಬಾಲಿಗ ಥಿಯೋ ವಾಲ್ಕಾಟ್ ತನ್ನ ಬೆನ್ನಿನ ಮೇಲೆ ಹಾಕಿಕೊಂಡಿರುವ ಟ್ಯಾಟೂ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಿಂದೂ ಧರ್ಮದ ಶ್ರೇಷ್ಠ ದೇವರಾದ 'ಶಿವ'ನ ಶ್ಲೋಕವಾದ 'ಓಂ ನಮಃ ಶಿವಾಯ'ವನ್ನು ತನ್ನ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವುದನ್ನು ಟ್ವಿಟರ್'ನಲ್ಲಿ ಹಂಚಿಕೊಂಡಿದ್ದಾರೆ. ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
2017-18ರ ಇಂಗ್ಲೀಷ್ ಪ್ರೀಮಿಯರ್ ಲೀಗ್'ಗೆ ದಿನಗಣನೆ ಆರಂಭವಾಗಿದೆ. ಕಳೆದ ಆವೃತ್ತಿಯಲ್ಲಿ 6ನೇ ಸ್ಥಾನ ಗಳಿಸಿದ್ದ ಲಂಡನ್ ಕ್ಲಬ್ ಇದೀಗ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಸಿದ್ದವಾಗಿದೆ. ಆರ್ಸೆನಲ್ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವುದೋ ಇಲ್ಲವೋ ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ. ಆದರೆ ವಾಲ್ಕಾಟ್ ಮಾತ್ರ ಈಗಾಗಲೇ ಭಾರತೀಯ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಸಫಲವಾಗಿದ್ದಾರೆ.
'ಓಂ ನಮಃ ಶಿವಾಯ' ಅಂದರೆ 'ಶಿವನಿಗೆ ಶರಣಾಗುವುದು' ಎಂದಾಗಿದೆ
ಹೀಗಿದೆ ಆರ್ಸೆಲ್ ಮಾಡಿದ ಟ್ವೀಟ್...
