ಸಿಡ್ನಿ(ಜ.02): ಭಾರತ ವಿರುದ್ದದ ಅಂತಿಮ ಟೆಸ್ಟ್ ಪಂದ್ಯ ಗೆಲುವಿಗೆ ಶತಾಯಗತಾಯ ಪ್ರಯತ್ನದಲ್ಲಿರುವ ಆಸ್ಟ್ರೇಲಿಯಾ ತಂಡ ಪ್ರಮುಖ ಇಬ್ಬರು ಆಟಗಾರರನ್ನ ತಂಡದಿಂದ ಕೈಬಿಡಲು ನಿರ್ಧರಿಸಿದೆ. ಕ್ರಿಕೆಟ್ ನ್ಯೂಸ್ ಲಿಮಿಟೆಡ್ ವರದಿ ಪ್ರಕಾರ, ಆ್ಯರೋನ್ ಫಿಂಚ್ ಹಾಗೂ ಮಿಚೆಲ್ ಮಾರ್ಶ್ ಅವರಿಗೆ ಕೊಕ್ ನೀಡೋ ಸಾಧ್ಯತೆ ಇದೆ.

ಇದನ್ನೂ ಓದಿ: ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಇಶಾಂತ್ ಔಟ್- ಅಶ್ವಿನ್ ಡೌಟ್-ಯಾಕೆ ಹೇಗೆ?

ಫಿಂಚ್ ಸ್ಥಾನದಲ್ಲಿ ಕ್ವೀನ್ಸ್‌ಲೆಂಡ್ ಬ್ಯಾಟ್ಸ್‌ಮನ್ ಮಾರ್ನಸ್ ಲ್ಯಾಬ್ಸ್‌ಶ್ಯಾಗ್ನೆ ಹಾಗೂ ಮಿಚೆಲ್ ಮಾರ್ಶ್ ಸ್ಥಾನದಲ್ಲಿ ಪೀಟರ್ ಹ್ಯಾಂಡ್ಸ್‌ಕಾಂಬ್ ಸ್ಥಾನ ಪಡೆಯೋ ಸಾಧ್ಯತೆ ಇದೆ ಎಂದು ನ್ಯೂಸ್ ಲಿಮಿಟೆಡ್ ವರದಿ ಮಾಡಿದೆ. ಆದರೆ ಈ ಕುರಿತು ನಾಯಕ ಟಿಮ್ ಪೈನೆ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

ಇದನ್ನೂ ಓದಿ: ಮತ್ತೆ ಟೀಂ ಇಂಡಿಯಾ ಜೊತೆ ಅನುಷ್ಕಾ ಶರ್ಮಾ- ಫೋಟೋ ವೈರಲ್!

ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-2 ಹಿನ್ನಡೆ ಅನುಭವಿಸಿರುವ ಆತಿಥೇಯ ಆಸ್ಟ್ರೇಲಿಯಾಗೆ ಸಿಡ್ನಿ ಪಂದ್ಯ ಗೆಲ್ಲಲೇಬೇಕಾದ ಒತ್ತಡಲ್ಲಿದೆ. ಟಿಮ್ ಪೈನೆ ತಂಡ ಅಂತಿಮ ಪಂದ್ಯ ಗೆದ್ದು ಸರಣಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ.