ಕೆನಡಾ(ಸೆ.26): ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗೋಲ್ಡ್ ಮೆಡಲ್ ಗೆದ್ದಿದ್ದ ಭಾರತದ ಆರತಿ ಅರುಣ್ ಇದೀಗ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ 5 ಚಿನ್ನದ ಪದಕ ಗೆಲ್ಲೋ ಮೂಲಕ ದಾಖಲೆ ಬರೆದಿದ್ದಾರೆ. 72 ಕೆಜಿ ವಿಭಾಗದಲ್ಲಿ ಆರತಿ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: 

ಸೆ.15 ರಿಂದ ಆರಂಭಗೊಂಡ ಟೂರ್ನಿಯಲ್ಲಿ ಭಾರತದ 28 ಪವರ್‌ಲಿಫ್ಟರ್‌ಗಳು ಪಾಲ್ಗೊಂಡಿದ್ದರು. ಏಷ್ಯನ್ ಹಾಗೂ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನದ ಗೆದ್ದ ಏಕೈಕ ಮಹಿಳಾ ಪಟು ಅನ್ನೋ ಹೆಗ್ಗಳಿಕೆ ನನ್ನದು. ಭಾರತಕ್ಕೆ ಚಿನ್ನ ಗೆದ್ದಿರುವುದು ಅತೀವ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಸ್ವಿಮ್ಮಿಂಗ್; ನಟ ಮಾಧವನ್ ಪುತ್ರನಿಗೆ ಬೆಳ್ಳಿ ಪದಕ!

ಇದೇ ವೇಳೆ ಆರತಿ, ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಪ್ರೋತ್ಸಾಹ ನೀಡಬೇಕು. ಆದರೆ ನನಗೆ ಇದುವರೆಗೂ ಯಾವುದೇ  ನೆರವು ಸಿಕ್ಕಿಲ್ಲ. ಈ ಕುರಿತು ಕೇಂದ್ರ ಹಾಗೂ ರಾಜ್ಯಕ್ಕೆ ಇ ಮೇಲ್ ಮಾಡಿದ್ದೇನೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯ ಬಂದಿಲ್ಲ ಎಂದು ಆರತಿ ಅಳತು ತೋಡಿಕೊಂಡಿದ್ದಾರೆ.

ಚಿನ್ನ ಗೆದ್ದು ತಾಯ್ನಾಡಿಗೆ ಬಂದಾಗ ಯಾರೂ ಕೂಡ ನನಗೆ ಅಭಿನಂದನೆಯನ್ನೂ ಹೇಳಿಲ್ಲ. ಕನಿಷ್ಟ ಸರ್ಕಾರದ ಕ್ರೀಡಾ ಇಲಾಖೆಯಾದರೂ ಪ್ರೋತ್ಸಾಹ ನೀಡೋ ನಿರೀಕ್ಷೆಯಲ್ಲಿದ್ದೆ. ಆದರೆ ಅದೂ ಸುಳ್ಳಾಯಿತು. ನೆರವು ಕೂಡ ನೀಡುತ್ತಿಲ್ಲ. ಇದು ಬೇಸರ ತಂದಿದೆ ಎಂದಿದ್ದಾರೆ. ಸರ್ಕಾರ ಪ್ರೋತ್ಸಾಹ ನೀಡಿದಿದ್ದರೂ ನಾನು ಪದಕ ಬೇಟೆ ನಿಲ್ಲಿಸುವುದಿಲ್ಲ ಎಂದಿದ್ದಾರೆ.