ಇನ್ನು ಈ ಬಾರಿ ಯುಎಸ್ ಓಪನ್ ಟೂರ್ನಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ನೋವಾಕ್ ಜೋಕೋವಿಚ್, ಸ್ಟ್ಯಾನ್ಲಿ ವಾವ್ರಿಂಕ, ವಿಂಬಲ್ಡನ್ ರನ್ನರ್-ಅಪ್ ಮರಿನ್ ಸಿಲಿಕ್ ಪಾಲ್ಗೊಳ್ಳುತ್ತಿಲ್ಲ.

ಮ್ಯಾಡ್ರಿಡ್(ಆ.08): 2017ರ ಸಾಲಿನಲ್ಲಿ ಕಳಪೆ ಆಟದ ಹೊರತಾಗಿಯೂ ಬ್ರಿಟನ್‌'ನ ಆ್ಯಂಡಿ ‌ಮರ್ರೆ, ಇಂದು ಬಿಡುಗಡೆಯಾದ ನೂತನ ಎಟಿಪಿ ಟೆನಿಸ್ ಪುರುಷರ ವಿಶ್ವ ಸಿಂಗಲ್ಸ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.

ಮರ್ರೆ 7,750 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ, ಸ್ಪೇನ್‌'ನ ರಾಫೆಲ್ ನಡಾಲ್ 2, ಸ್ವಿಜರ್‌'ಲೆಂಡ್‌'ನ ರೋಜರ್ ಫೆಡರರ್ 3ನೇ ಸ್ಥಾನದಲ್ಲಿದ್ದಾರೆ.

ಇದೇ ವಾರ ಕೆನಡಾದ ಮೊಂಟ್‌'ರಿಯಲ್‌'ನಲ್ಲಿ ಆರಂಭಗೊಳ್ಳಲಿರುವ ರೋಜರ್ಸ್‌ ಕಪ್‌'ನಲ್ಲಿ ಗಾಯದ ಸಮಸ್ಯೆಯಿಂದಾಗಿ ಮರ್ರೆ ಪಾಲ್ಗೊಳ್ಳುತ್ತಿಲ್ಲ, ಒಂದೊಮ್ಮೆ ನಡಾಲ್ ಪಂದ್ಯಾವಳಿಯಲ್ಲಿ ಸೆಮೀಸ್ ಪ್ರವೇಶಿಸಿದರೆ 2014ರ ಬಳಿಕ ಮೊದಲ ಬಾರಿಗೆ ಅವರಿಗೆ ನಂ.1 ಸ್ಥಾನಕ್ಕೇರುವ ಅವಕಾಶವಿದೆ.

ಇನ್ನು ಈ ಬಾರಿ ಯುಎಸ್ ಓಪನ್ ಟೂರ್ನಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ನೋವಾಕ್ ಜೋಕೋವಿಚ್, ಸ್ಟ್ಯಾನ್ಲಿ ವಾವ್ರಿಂಕ, ವಿಂಬಲ್ಡನ್ ರನ್ನರ್-ಅಪ್ ಮರಿನ್ ಸಿಲಿಕ್ ಪಾಲ್ಗೊಳ್ಳುತ್ತಿಲ್ಲ.