Asianet Suvarna News Asianet Suvarna News

ಮತ್ತೆ ಡ್ರಾ ಸಾಧಿಸಿದರೂ ಜಂಟಿ ದ್ವಿತೀಯ ಸ್ಥಾನದಲ್ಲೇ ಮುಂದುವರೆದ ಆನಂದ್

ಟೂರ್ನಿಯಲ್ಲಿ ಸದ್ಯ 5 ಡ್ರಾ ಹಾಗೂ ಒಂದು ವಿಜಯ ಸಾಧಿಸಿರುವ ಆನಂದ್ ಒಟ್ಟು 3.5 ಅಂಕ ಗಳಿಸಿದ್ದು, ಜಂಟಿ ದ್ವಿತೀಯ ಸ್ಥಾನದಲ್ಲಿ ಮುಂದುವರಿದಿದ್ದಾರೆ.

Anand draws with Karjakin remains in joint second spot

ಸೇಂಟ್ ಲೂಯಿಸ್(ಆ.09): ಗ್ರ್ಯಾಂಡ್‌'ಮಾಸ್ಟರ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಸಿಂಕ್‌ಫೀಲ್ಡ್ ಕಪ್ ಚೆಸ್ ಟೂರ್ನಿಯಲ್ಲಿ 6ನೇ ಸುತ್ತಿನಲ್ಲಿ ರಷ್ಯಾದ ಸರ್ಗಿ ಕರ್ಜಾಕಿನ್ ವಿರುದ್ಧ ಡ್ರಾ ಸಾಧಿಸಿದ್ದಾರೆ.

ಇಂದು ನಡೆದ ಪಂದ್ಯದಲ್ಲಿ ರಷ್ಯಾದ ಆಟಗಾರರ ಎದುರು ಆನಂದ್ ಕೊಂಚ ತಬ್ಬಿಬ್ಬಾದರೂ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಟೂರ್ನಿಯಲ್ಲಿ ಸದ್ಯ 5 ಡ್ರಾ ಹಾಗೂ ಒಂದು ವಿಜಯ ಸಾಧಿಸಿರುವ ಆನಂದ್ ಒಟ್ಟು 3.5 ಅಂಕ ಗಳಿಸಿದ್ದು, ಜಂಟಿ ದ್ವಿತೀಯ ಸ್ಥಾನದಲ್ಲಿ ಮುಂದುವರಿದಿದ್ದಾರೆ.

Follow Us:
Download App:
  • android
  • ios