ನವದೆಹಲಿ[ಏ.19]: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ, ಗುರುವಾರ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ ವಿಕೆಟ್‌ ಕಬಳಿಸುವ ಮೂಲಕ ಐಪಿಎಲ್‌ನಲ್ಲಿ 150 ವಿಕೆಟ್‌ ಪೂರೈಸಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಎನ್ನುವ ದಾಖಲೆಯನ್ನು ಮಿಶ್ರಾ ಬರೆದರು. 

ಮುಂಬೈ ದಾಳಿಗೆ ಕುಸಿದ ಡೆಲ್ಲಿ- ರೋಹಿತ್ ಪಡೆಗೆ 40 ರನ್ ಗೆಲುವು

ಗರಿಷ್ಠ ವಿಕೆಟ್‌ ಸರದಾರರ ಪಟ್ಟಿಯಲ್ಲಿ ಅಮಿತ್ ಮಿಶ್ರಾ 2ನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್‌ನ ಲಸಿತ್‌ ಮಾಲಿಂಗ(162) ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಪೀಯೂಷ್‌ ಚಾವ್ಲಾ 146 ವಿಕೆಟ್‌ ಪಡೆದು 3ನೇ ಸ್ಥಾನದಲ್ಲಿದ್ದರೆ, ಚೆನ್ನೈನ ಡ್ವೇನ್‌ ಬ್ರಾವೋ 143 ಹಾಗೂ ಹರ್ಭಜನ್‌ ಸಿಂಗ್‌ 141 ವಿಕೆಟ್‌ ಕಬಳಿಸಿ ಕ್ರಮವಾಗಿ 4 ಹಾಗೂ 5ನೇ ಸ್ಥಾನ ಪಡೆದಿದ್ದಾರೆ.

IPL ಜೋಶ್: ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 10 ಬೌಲರ್'ಗಳಿವರು

ಅಮಿತ್ ಮಿಶ್ರಾ ಡೆಲ್ಲಿ ಡೇರ್’ಡೆವಿಲ್ಸ್/ಕ್ಯಾಪಿಟಲ್ಸ್ ಪರ 90 ವಿಕೆಟ್ ಕಬಳಿಸಿದ್ದರೆ, ಡೆಕ್ಕನ್ ಚಾರ್ಜರ್ಸ್ ಪರ 32 ಹಾಗೂ ಸನ್’ರೈಸರ್ಸ್ ಹೈದರಾಬಾದ್ ಪರ 28 ವಿಕೆಟ್ ಪಡೆದಿದ್ದಾರೆ.